More

    ಬೆಂಗಳೂರು ಮಾರುಕಟ್ಟೆಗೆ ಹ್ಯುಂಡೈ ಔರಾ ಕಾರು ಬಿಡುಗಡೆ 

    ಬೆಂಗಳೂರು:  ನಗರದ ಅದ್ವೈತ್ ಹ್ಯುಂಡೈ ಸಂಸ್ಥೆ, ‘ದಿ ಆಲ್ ನ್ಯೂ ಹ್ಯುಂಡೈ ಔರಾ’ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರೆಸಿಡೆನ್ಸಿ ರಸ್ತೆಯಲ್ಲಿರುವ ಶೋರೂಂನಲ್ಲಿ ನಟ ಶ್ರೀಮುರಳಿ ಗುರುವಾರ ಕಾರನ್ನು ಅನಾವರಣ ಮಾಡಿದರು.

    ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾರನ್ನು ರೂಪಿಸಲಾಗಿದೆ. ಇದು ಹಲವು ವಿಶೇಷ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ವಿನ್ಯಾಸ ತುಂಬಾ ಸುಂದರವಾಗಿದೆ. ಕುಟುಂಬದ ಎಲ್ಲರಿಗೂ ಈ ಕಾರು ಇಷ್ಟವಾಗಲಿದೆ ಎಂದರು.

    ವೈಶಿಷ್ಟ್ಯಗಳು

    ಪ್ರೊಜೆಕ್ಟರ್ ಹೆಡ್​ಲ್ಯಾಂಪ್ ಹಾಗೂ ಫಾಗ್​ಲ್ಯಾಂಪ್, ಹಗಲಿನಲ್ಲಿ ಬೆಳಗುವ ಟ್ವಿನ್ ಬೂಮೋರಾಂಗ್ ದೀಪ ಜೆಡ್​ಆಕೃತಿಯ ಎಲ್​ಇಡಿ ಟೇಲ್ ಲ್ಯಾಂಪ್, ವಜ್ರಾಕೃತಿಯ ಆರ್15 ಅಲಾಯ್ ಚಕ್ರಗಳು ಈ ಕಾರಿನ ವೈಶಿಷ್ಟ್ಯಗಳು.

    ಸುರಕ್ಷತಾ ಕ್ರಮಗಳು

    ಕ್ರೂಸ್ ಕಂಟ್ರೋಲ್ ವ್ಯವಸ್ಥೆ, ಯುಎಸ್​ಬಿ ಫಾಸ್ಟ್ ಚಾರ್ಜರ್, ಹಿಂಬದಿಯಲ್ಲಿ ಆರಾಮದಾಯಕ ಆಸನಗಳು, ವೈರ್​ಲೆಸ್ ಚಾರ್ಜಿಂಗ್ ವ್ಯವಸ್ಥೆ, ಗೇರ್​ನಾಬ್​ಗೆ ಚರ್ಮದ ಹೊದಿಕೆ, ಐಬ್ಲು್ಯಆಡಿಯೊ ರಿಮೋಟ್ ಫೋನ್ ಆಪ್, ಯುಎಸ್​ಬಿ ಚಾರ್ಜರ್, ಸ್ಪೀಡೊ ಮೀಟರ್, ಸ್ಮಾರ್ಟ್​ಫೋನ್ ಜತೆ ಸಂವಾದಿಯಾಗುವ 20.25 ಸೆಂ.ಮೀ. ಗಾತ್ರದ ಟಚ್ ಸ್ಕ್ರೀನ್ ಇರುವುದಾಗಿ ಸೇಲ್ಸ್ ಆಂಡ್ ಮಾರ್ಕೆಟಿಂಗ್ ನಿರ್ದೇಶಕ ಅಜಯ್ಸಿಂಗ್ ಮಾಹಿತಿ ನೀಡಿದರು.

    ತಾಂತ್ರಿಕ ವಿವರ

    ಇಂಧನ: ಪೆಟ್ರೋಲ್  ಮೈಲೇಜ್: 20.50 ಕಿ.ಮೀ/ಪ್ರತಿ ಲೀ. ಇಂಧನ ಟ್ಯಾಂಕ್​ ಸಾಮರ್ಥ್ಯ: 37.0 ಲೀಟರ್ ಇಂಜಿನ್: 1.2 ಕಪ್ಪಾ ಡ್ಯುಯೆಲ್ ವಿಟಿವಿಟಿ ಟ್ರಾನ್ಸ್​ಮಿಷನ್: 5 ಸ್ಪೀಡ್/ಸ್ಮಾರ್ಟ್ ಆಟೋ ಎಎಂಪಿ ಫ್ಲೈಯರ್ ಗಾತ್ರ: 165/70 ಆರ್14ಸ್ಟೀಲ್-170/60ಆರ್15 (5 ಎಎಂಟಿ) 165/70ಆರ್14 ವ್ಹೀಲ್ ಬೇಸ್: 2,450 ಎಂ.ಎಂ.ಗ್ರೌಂಡ್ ಕ್ಲಿಯರೆನ್ಸ್: 165 ಎಂ.ಎಂ. ಬಣ್ಣ: ಕೆಂಪು, ನೀಲಿ, ಗ್ರೇ, ಸಿಲ್ವರ್, ಬಿಳಿ, ಕಂದು, ನೀಲಿ, ಸಿಸ್ಟಮ್ ರೇರ್ ಡ್ರಮ್ ಬ್ರೇಕ್, ಫ್ರಂಟ್ ಡಿಸ್ಕ್ ಬ್ರೇಕ್

    ದಿ ಆಲ್ ನ್ಯೂ ಹ್ಯುಂಡೈ ಔರಾ ಅತ್ಯುತ್ತಮ ಕಾರ್ಯದಕ್ಷತೆ ಹೊಂದಿದೆ.ಆಕರ್ಷಕ ಬೆಲೆ ಹಾಗೂ ಬಣ್ಣಗಳಲ್ಲಿ ಲಭ್ಯವಿದೆ. ಕುಟುಂಬದ ಎಲ್ಲರೂ ಒಪ್ಪಿಗೆಯಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

    | ಎಲ್.ಡಿ. ಅಜಯ್ ಸಿಂಗ್ ಸೇಲ್ಸ್ ಆಂಡ್ ಮಾರ್ಕೆಟಿಂಗ್ ನಿರ್ದೇಶಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts