More

    ಬೀದರ್ ಶೈಕ್ಷಣಿಕ ವಿಕಾಸಕ್ಕೆ ಶ್ರಮ

    ಬೀದರ್: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಡಿಯ ಇಲ್ಲಿನ ಬಿವಿಬಿ ಕಾಲೇಜು ಸಾಕಷ್ಟು ಹೆಸರುವಾಸಿಯಾಗಿದೆ. ಈ ಕಾಲೇಜು ಸೇರಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ನೂತನ ಸದಸ್ಯ ಡಾ.ರಜನೀಶ್ ವಾಲಿ ಭರವಸೆ ನೀಡಿದರು.

    ನಗರದ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿಂದಿನ ಆಡಳಿತ ಮಂಡಳಿ ಸದಸ್ಯ ಡಾ.ಬಸವರಾಜ ಪಾಟೀಲ್ ಅಷ್ಟೂರ್ ಸೇರಿದಂತೆ ಹಿರಿಯರ, ಶೈಕ್ಷಣಿಕ ಚಿಂತಕರ ಸಲಹೆ, ಸೂಚನೆಗಳನ್ನು ಪಡೆದು ಸಂಸ್ಥೆಯ ಏಳಿಗೆಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವೆ. ಸಂಸ್ಥೆಯಿಂದ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಕೊಡುಗೆ ನೀಡುವ ಧ್ಯೇಯ ತಮ್ಮದಾಗಿದೆ ಎಂದರು.

    ಬಿವಿಬಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಕೆ. ಸಾತನೂರ್ ಮಾತನಾಡಿ, ಡಾ.ರಜನೀಶ್ ವಾಲಿ ಅವರು ಯುವ ಉತ್ಸಾಹಿಗಳು. ಸಾಮಾಜಿಕ ಸೇರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಶಿಕ್ಷಣದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ವಾಲಿ ಅವರು ಹೊಸ ಕನಸುಗಳೊಂದಿಗೆ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಲಿದ್ದಾರೆ ಎಂದರು.

    ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕನಕಟ್ಟೆ ಮಾತನಾಡಿದರು. ಬಿವಿಬಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಅನೀಲಕುಮಾರ ಆಣದೂರೆ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಸಂಗೀತಾ, ಪ್ರೇಮಾ, ನಿವೃತ್ತ ಮುಖ್ಯಗುರು ಬಾಬುರಾವ ದಾನಿ ಇತರರಿದ್ದರು. ಶೈಲಜಾ ಸಿದ್ದವೀರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts