More

    ಬಿಜೆಪಿ ಕಾರ್ಯಕರ್ತರನ್ನು ಕೊಂಡುಕೊಳ್ಳುವುದು ಅಸಾಧ್ಯ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕ್ಷೇತ್ರದಲ್ಲಿ ಬಿಜೆಪಿ ಅಲೆ ಎದ್ದಿದ್ದು, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರು ನಮ್ಮ ಕಾರ್ಯಕರ್ತರನ್ನು ಸೆಳೆಯಲು ಯತ್ನಿಸುತ್ತಿದ್ದು, ಈ ಕಾರ್ಯದಲ್ಲಿ ಅವರು ವಿಫಲರಾಗುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಆರ್​.ವರ್ತೂರು ಪ್ರಕಾಶ್​ ತಿಳಿಸಿದರು.


    ಅಂತರಗಂಗೆ ಬೆಟ್ಟದ ಮೇಲಿನ ಪಾಪರಾಜನಹಳ್ಳಿಯ ಜೆಡಿಎಸ್​ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಕಾಂಗ್ರೆಸ್​ ಮತ್ತು ಜೆಡಿಎಸ್​ ಸುಳ್ಳು ಭರವಸೆ ಕೊಟ್ಟು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಬಿಜೆಪಿ ಕಾರ್ಯಕರ್ತರನ್ನು ಕೊಂಡುಕೊಂಡು ಗೆಲ್ಲುತ್ತೇವೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಭ್ರಮೆ ಎನ್ನಬೇಕಾಗುತ್ತದೆ. ಗೆಲ್ಲಬೇಕಾದರೆ ಸದಾ ಜನರ ನಡುವೆ ಇರಬೇಕೇ ಹೊರತು ಚುನಾವಣೆ ಕೆಲವೇ ದಿನಗಳಿದ್ದಾಗ ಬಂದು ಹಣ, ಆಮಿಷ ತೋರಿ ಗೆಲ್ಲುತ್ತೇನೆ ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದರು. ಕಾಂಗ್ರೆಸ್​ಗೆ ಈ ಬಾರಿ ಪ್ರತಿಪಕ್ಷದ ಸ್ಥಾನವೂ ಸಿಗುವುದಿಲ್ಲ.

    ಕೋಲಾರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿರುವುದರಿಂದ, ಇದು ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಗೊತ್ತಿರುವುದರಿಂದ ವಿನಾಕಾರಣ ನಮ್ಮ ಕಾರ್ಯಕರ್ತರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಎಷ್ಟೇ ಪ್ರಯತ್ನ ಮಾಡಿದರೂ ನಮ್ಮ ಕಾರ್ಯಕರ್ತರು ನಂಬುವುದಿಲ್ಲ. ಅಭಿವೃದ್ಧಿ ಎಂಬ ರಸ್ತೆಯಲ್ಲಿ ನಾವು ಸಂಚರಿಸುತ್ತಿದ್ದು, ಆ ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಅಂತರಗಂಗೆ ಬೆಟ್ಟದ ಏಳು ಗ್ರಾಮಗಳ ಸಂಪರ್ಕ ರಸ್ತೆ ವಿಸ್ತರಣೆ ಶ್ರೀ ಕೈಗೆತ್ತಿಕೊಳ್ಳಲಾಗುವುದು. ನಾನು ಶಾಸಕನಾಗಿದ್ದಾಗ ಬೆಟ್ಟದ ಗ್ರಾಮಗಳಿಗೆ ಕೊಳವೆಬಾವಿ ಕೊರೆಸಿ ನೀರಿನ ಸಮಸ್ಯೆ ನೀಗಿಸಿದ್ದೇನೆ. ಬೆಟ್ಟದ ಮೇಲಿನ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣ ಮಾಡಲಾಗುವುದು. ನನಗೆ ಅಧಿಕಾರ ಬೇಕಾಗಿಲ್ಲ. ಆದರೆ ಈ ಬಾರಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದರಿಂದ ಕೋಲಾರದ ಅಭಿವೃದ್ಧಿಯ ಸಲುವಾಗಿ ಗೆಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಕೋಲಾರಕ್ಕೆ ಬಂದುಹೋದ ನಂತರ ನನ್ನ ಗೆಲುವಿನ ಅಂತರ ಹೆಚ್ಚಾಗಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂದರು.


    ಬಿಜೆಪಿ ಸರ್ಕಾರದಲ್ಲಿ ಸಚಿವನಾಗ್ತೇನೆ…
    ಕೋಲಾರ:
    ನಾನು ಈ ಬಾರಿ ಕೋಲಾರದಲ್ಲಿ ಶಾಸಕನಾಗುವುದು ಎಷ್ಟು ಸತ್ಯವೋ ರಾಜ್ಯ ಸರ್ಕಾರದಲ್ಲಿ ಸಚಿವನಾಗುವುದು ಅಷ್ಟೇ ಸತ್ಯ ಎಂದು ಆರ್​.ವರ್ತೂರು ಪ್ರಕಾಶ್​ ತಿಳಿಸಿದರು. ನಗರದ ಕೋಗಿಲಹಳ್ಳಿಯ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿದ ಸಂದರ್ಭ ಮಾತನಾಡಿ, ನಾನು ಈ ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಸ್ವಯಂಪ್ರೇರಿತರಾಗಿ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಆಟೋ ಚಾಲಕರು ಕಷ್ಟ ಜೀವಿಗಳು. ಇವರಿಗೆ ಮುಂದೆ ನಮ್ಮ ಸರ್ಕಾರದಲ್ಲಿ ವಿಶೇಷ ಪ್ಯಾಕೇಜ್​ ಅಡಿ ಸಾಲ ಸೌಲಭ್ಯ ಒದಗಿಸಲು ಯತ್ನಿಸಲಾಗುವುದು. ನಾನು ಇವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವು, ಉಚಿತ ಚಾಲನಾ ಪರವಾನಗಿ, ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಲು ಯತ್ನಿಸುತ್ತೇನೆ. ನಾನು ಶಾಸಕನಾದ ಕೂಡಲೇ ಬಡ ಆಟೋ ಚಾಲಕರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು. ಮುಖಂಡರಾದ ಮುಕೇಶ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts