More

    ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ದೂರ

    ದಾಂಡೇಲಿ: ಅಪೂರ್ಣಗೊಂಡ ಕಾಂಪೌಂಡ್, ಸ್ವಚ್ಛತೆ ಕಾಣದ ಶೌಚಗೃಹ, ತುಂಬಿ ಹರಿಯುವ ಸೆಪ್ಟಿಕ್ ಟ್ಯಾಂಕ್​ನ ದುರ್ವಾಸನೆಗೆ ಮೂಗು ಮುಚ್ಚಿಕೊಳ್ಳುವ ವಾತಾವರಣ.

    ಇದು ನವೀಕೃತ ದಾಂಡೇಲಿ ಬಸ್ ನಿಲ್ದಾಣದ ಪರಿಸ್ಥಿತಿ. 2017, ಜೂ. 11ರಂದು 2.50 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಕೆಲ ಕಾಮಗಾರಿಗಳು ಅಪೂರ್ಣವಾಗಿವೆ. ಜೆ.ಎನ್. ರಸ್ತೆಯ ನಗರಸಭೆ ಮಳಿಗೆಗಳ ಹಿಂಭಾಗದಲ್ಲಿ ಕಾಂಪೌಂಡ್ ಪೂರ್ಣಗೊಂಡಿಲ್ಲ. ಇದರಿಂದಾಗಿ ಅನೈತಿಕ ಚಟುವಟಿಕೆ ಹಾಗೂ ಅಕ್ಕಪಕ್ಕದವರು ತ್ಯಾಜ್ಯ ಎಸೆಯಲು ದಾರಿ ಮಾಡಿಕೊಟ್ಟಂತಾಗಿದೆ.

    ಸ್ವಚ್ಛತೆ ಮರೀಚಿಕೆ: ನಿಲ್ದಾಣ ನವೀಕರಣ ಅವಧಿಯಲ್ಲಿ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಲ ಮಾದರಿ ಸಾರ್ವಜನಿಕ ಶೌಚಗೃಹ ನಿರ್ವಿುಸಲಾಗಿದ್ದು, ಇದುವರೆಗೂ ಸ್ವಚ್ಛತೆ ಕಂಡಿಲ್ಲ. ಶೌಚಕ್ಕೆ 5 ರೂ. ಮತ್ತು ಮೂತ್ರ ವಿಸರ್ಜನೆಗೆ 2 ರೂ.ಗಳನ್ನು ಗುತ್ತಿಗೆದಾರರು ವಸೂಲಿ ಮಾಡುತ್ತಿದ್ದಾರೆ. ಆದರೂ ಗುತ್ತಿಗೆದಾರ ಶೌಚಗೃಹದ ಸ್ವಚ್ಛತೆಗೆ ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ನಿಲ್ದಾಣದಲ್ಲಷ್ಟೇ ಅಲ್ಲ, ಶೌಚಗೃಹದಲ್ಲಿಯೂ ಮದ್ಯದ ಬಾಟಲಿಗಳು ಹೆಚ್ಚಾಗಿ ಕಂಡು ಬರುತ್ತಿವೆ. ಶೌಚಗೃಹದ ಸೆಪ್ಟಿಕ್ ಟ್ಯಾಂಕ್ ತುಂಬಿ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಬೇಸತ್ತ ಸಾರ್ವಜನಿಕರು ಬಸ್ ಡಿಪೋ ಅಧಿಕಾರಿಗಗಳ ಗಮನಕ್ಕೆ ತಂದರೂ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

    ಗುತ್ತಿಗೆದಾರನಿಗೆ ಶೌಚಗೃಹ ಸ್ವಚ್ಛತೆ, ಅದರಲ್ಲಿ ಅನವಶ್ಯಕ ವಸ್ತುಗಳನ್ನು ಎಸೆಯದಂತೆ ಸೂಚನೆ ನೀಡಲಾಗುವುದು. ಅಲ್ಲಿ ಸೂಚನೆ ಫಲಕ ಅಳವಡಿಕೆ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ನೋಟಿಸ್ ನೀಡಲಾಗುವುದು.
    | ಎಸ್.ವೈ. ಜೋಗಿನ್ ಡಿಪೋ ಮ್ಯಾನೇಜರ್

    ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಗಾಗಿ ಕೆಎಸ್​ಆರ್​ಟಿಸಿ ಅಧಿಕಾರಿಗಳು ಅಥವಾ ಗುತ್ತಿಗೆದಾರ ನಗರಸಭೆಗೆ ಅರ್ಜಿ ಸಲ್ಲಿಸಿದರೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು.
    | ಡಾ. ಸೈಯದ್ ಜಾಹೇದಲಿ ಪೌರಾಯುಕ್ತ

    ಶೌಚಗೃಹ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಎಲ್ಲ ರೀತಿಯ ಕ್ರಮಗಳನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು.
    | ರಾಜು ಶ್ರೀನಿವಾಸ ಭಟ್
    ಬಸ್ ನಿಲ್ದಾಣ ಶೌಚಗೃಹದ ಗುತ್ತಿಗೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts