More

    ಬಂದೂಕು ಬಳಸುವಾಗ ಎಚ್ಚರಿಕೆ ಇರಲಿ

    ಸೋಮವಾರಪೇಟೆ: ಬಂದೂಕು ನಮ್ಮ ಸ್ವರಕ್ಷಣೆಗೆ ಉಪಯೋಗವಾಗಬೇಕೆ ಹೊರತು ಇನ್ನೊಬ್ಬರ ಜೀವಕ್ಕೆ ಹಾನಿ ಮಾಡಬಾರದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರನಾಯಕ್ ಹೇಳಿದರು.

    ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಜಿಲ್ಲೆಯಲ್ಲಿ ಬಂದೂಕಿಗೆ ವಿಶೇಷವಾದ ಸ್ಥಾನ, ಗೌರವ ಮತ್ತು ಪೂಜ್ಯನೀಯ ಭಾವನೆ ಇದೆ. ಬಂದೂಕು ತರಬೇತಿಯನ್ನು ಪಡೆದ ವರಿಗೆ ಶಿಸ್ತು ಮುಖ್ಯ. ಬಂದೂಕನ್ನು ಎಚ್ಚರಿಕೆಯಿಂದ ಬಳಸಬೇಕು. ಪರವಾನಗಿ ಹೊಂದಿರುವವರು ಇತರರಿಗೆ ನೀಡಿ ಅನಾಹುತ ನಡೆದರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಬಂದೂಕು ತರಬೇತಿ ನೀಡಿದ ಜಿಲ್ಲಾ ಸಶಸ್ತ್ರದಳದ ಸಹಾಯಕ ಉಪನಿರೀಕ್ಷಕ ವೆಂಕಪ್ಪ ಅವರನ್ನು ಸನ್ಮಾನಿಸಲಾಯಿತು. ರೈಫಲ್ ಗುರಿಯಲ್ಲಿ ಪ್ರಥಮ ಸ್ಥಾನವನ್ನು ಹಿರಿಕರ ಗ್ರಾಮದ ನಮ್ನಿ ಗಗನ್ ಪ್ರಥಮ, ಸೋಮವಾರಪೇಟೆ ಆಶಾ ಸತೀಶ್ ದ್ವಿತೀಯ, ಕುಶಾಲನಗರ ವಾಗ್ದಾ ತೃತೀಯ ಸ್ಥಾನ ಪಡೆದರು.

    ಪುರುಷರ ವಿಭಾಗದಲ್ಲಿ ಗಿರೀಶ್ ಪ್ರಥಮ, ಮಧು ದ್ವಿತೀಯ ಹಾಗೂ ಆದಿತ್ಯಾಗೌಡ ತೃತೀಯ ಸ್ಥಾನ ಪಡೆದರು. ಅಜ್ಜಳ್ಳಿ ನವೀನ್ ಮತ್ತು ಆಶಾ ಸತೀಶ್ ಕಾರ್ಯಕ್ರಮನಿರ್ವಹಿಸಿದರು. ಇದೇ ಸಂದರ್ಭ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮನೆಹಳ್ಳಿಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ಸಶಸ್ತ್ರದಳದ ಇನ್ಸ್‌ಪೆಕ್ಟರ್ ಚೆನ್ನನಾಯಕ್, ಶನಿವಾರಸಂತೆ ಪೊಲೀಸ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಮತ್ತಿತರ ಗಣ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts