More

    ಫೆ.12ರಂದು ದೇಗುಲಗಳಲ್ಲಿ ಪೂಜೆ

    ಚನ್ನರಾಯಪಟ್ಟಣ: ಫೆ.12ರಂದು ನಡೆಯಲಿರುವ ಪಂಜುರ್ಲಿ ಮತ್ತು ಗುಳಿಗ ದೈವಗಳ ಯಕ್ಷಗಾನ ಕಲಾ ನರ್ತನ ಕಾರ್ಯಕ್ರಮದ ಬಗ್ಗೆ ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.


    ಹೇಮವಾಣಿ ಪ್ರಕಾಶನ ಹಾಗೂ ವಿವಿಧ ರೈತಪರ ಸಂಘಟನೆಗಳ ಕಮಿಟಿ ಸದಸ್ಯ, ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ಮಾತನಾಡಿ, ಫೆ.12ರಂದು ಬೆಳಗ್ಗೆ ಪಟ್ಟಣದ ಪ್ರಮುಖ ದೇವಸ್ಥಾನಗಳಿಗೆ ವಾದ್ಯದೊಂದಿಗೆ ಕಮಿಟಿಯ ಸದಸ್ಯರೆಲ್ಲರೂ ಕಾಲ್ನಡಿಗೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಬೇಕು, ಇದರಿಂದ ತಾಲೂಕಿಗೆ ಒಳಿತಾಗಲಿದೆ ಎಂದು ತಿಳಿಸಿದರು.


    ಫೆ.12ರಂದು ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಪ್ರವೇಶ ದ್ವಾರದಲ್ಲಿ ಪ್ರಸಾದ ನೀಡಲಾಗುವುದು. ಸಂಜೆ 5 ಗಂಟೆಗೆ ಭಾಗವತರ ಜತೆ ವೇಷಧಾರಿಗಳು ಚಂಡೆ ವಾದ್ಯದೊಂದಿಗೆ ಪಟ್ಟಣದ ಗ್ರಾಮ ದೇವತೆಯಾದ ವಳಗೇರಮ್ಮ ದೇವಸ್ಥಾನ, 40 ಅಡಿ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಚನ್ನಕೇಶವ ದೇವಸ್ಥಾನಕ್ಕೆ ತೆರಳಿ ದೇವರ ಅಪ್ಪಣೆ ಪಡೆದು ಪೂಜೆ ಸಲ್ಲಿಸಲಾಗುವುದು ಎಂದರು.


    5.30ರಿಂದ ವೇದಿಕೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. 6 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು, ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 6.30 ಗಂಟೆಗೆ ಚೌಕಿ ಪೂಜೆ ಸಲ್ಲಿಸಿ ದೇವರ ಅಪ್ಪಣೆ ಪಡೆದು ವೇಷಧಾರಿಗಳು ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.


    ಜಿಲ್ಲೆಯಲ್ಲೇ ಮೊದಲ ಬಾರಿಗೆ ಇಂತಹ ವಿನೂತನ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸಂತೋಷದ ವಿಚಾರವಾಗಿದ್ದು, ತಾಲೂಕಿನಲ್ಲಿ ವಾಸವಾಗಿರುವ ಎಲ್ಲರಿಗೂ ಒಳಿತಾಗಲೆಂದು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಕಮಿಟಿಯ ಎಲ್ಲ ಸದಸ್ಯರು ಫೆ.3 ರಂದು ಮತ್ತೊಮ್ಮೆ ಸಭೆ ಸೇರಿ ಅಂದು ಕಾರ್ಯಕ್ರಮದ ಬಗ್ಗೆ ಕಮಿಟಿಗಳನ್ನು ರಚನೆ ಮಾಡಿ ಎಲ್ಲರಿಗೂ ಜವಾಬ್ದಾರಿಯನ್ನು ಕೊಡಲು ನಿರ್ಧರಿಸಲಾಗುವುದು ಎಂದರು.


    ಕಾರ್ಯಕ್ರಮದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಕಮಿಟಿ ಸದಸ್ಯರಾದ ನಾಗರಾಜ್, ರಾಜ್‌ಕುಮಾರ್, ಸಿ.ಜಿ.ರವಿ, ಪಾಪಣ್ಣಿ, ಪುಟ್ಟೇಗೌಡ, ಜಗದೀಶ್, ಧರಣೇಶ್, ಯಶೋದಾ ಜೈನ್, ರೂಪಾ, ಪ್ರೇಮಮ್ಮ, ತಾಂಡವೇಶ್, ಕುಮಾರ್, ನವೀನ್, ಕಾಂತರಾಜ್ ಗನ್ನಿ, ಮಂಜು, ದಿನೇಶ್, ಮಹೇಶ್, ರೇವಣ್ಣ, ರಾಮ, ಸ್ವಾಮಿ, ಹರ್ಷ, ಕಾರ್ತಿಕ್ ವಿನೋದ್ ಪೂಜಾರಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts