More

    ಪ್ರಾಕೃತ ಭಾಷೆಗೂ ಮನ್ನಣೆ ಸಿಗಲಿ

    ಬೆಳಗಾವಿ: ಭಾರತದ ಅತೀ ಪುರಾತನ ಮತ್ತು ಭಾರತೀಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರಾಕೃತ ಭಾಷೆಗೆ ಸಂಸ್ಕೃತ ಬಾಷೆಯಂತೆ ಮನ್ನಣೆ ಸಿಗಬೇಕು ಎಂದು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

    ನಗರದ ಭರತೇಶ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 2 ದಿನಗಳ ಅಖಿಲ ಕರ್ನಾಟಕ ಜೈನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಗಳು ಸಂಸ್ಕೃತ ಭಾಷೆಗೆ ನೀಡುತ್ತಿರುವ ಉತ್ತೇಜನವನ್ನು ಪ್ರಾಕೃತ ಭಾಷೆಗೂ ನೀಡಬೇಕು. ಪ್ರಾಕೃತ ಭಾಷೆಯು ಎಲ್ಲ ಭಾಷೆಗಿಂತ ಪುರಾತನದ್ದು ಎಂದರು. ನಾವಿಂದು ಕನ್ನಡ ಸಾಹಿತ್ಯ ಲೋಕವನ್ನು ಅವಲೋಕಿಸಿದರೆ ಕನ್ನಡ ಸಾಹಿತ್ಯ ಬೇರೆ ಭಾಷೆಯ ಸಾಹಿತ್ಯಕ್ಕಿಂತ ಶ್ರೀಮಂತವಾಗಿದೆ. ತೆಲಗು ಭಾಷೆಗಿಂತಲೂ ಪುರಾತನ ಭಾಷೆ ಕನ್ನಡವಾಗಿದೆ. ಕನ್ನಡದಲ್ಲಿನ ಸಾಹಿತ್ಯ, ಗ್ರಂಥಮಾಲೆ, ಕವಿತೆಗಳು, ಹನಿಗವಿತೆ, ಶಿಲಾಶಾಸನ, ಹಳೆಗನ್ನಡದಲ್ಲಿರುವ ಗದ್ಯ ಮತ್ತು ಪದ್ಯಗಳು ಕನ್ನಡ ಸಾರಸ್ವತದ ಕೈಗನ್ನಡಿಯಾಗಿದೆ. ಕನ್ನಡ ಭಾಷೆಯ ಸಾಹಿತ್ಯದಲ್ಲಿ ಜೈನರ ಕೊಡುಗೆ ಅಪಾರವಾಗಿದೆ. ಈ ಹಿಂದಿನ ಬಹುತೇಕ ಸಾಹಿತಿಗಳು ಕನ್ನಡ ಸಾರಸ್ವತ ಲೋಕವನ್ನು ಶಾಸ್ತ್ರೀಯವಾಗಿ ಶ್ರೀಮಂತಗೊಳಿಸಲು ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ ಎಂದರು.

    ಸಮ್ಮೇಳನದ ಸರ್ವಾಧ್ಯಕ್ಷ

    ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ಜೈನ ಸಾಹಿತ್ಯ ವಸ್ತುವಿಸ್ತಾರ ತುಂಬ ದೊಡ್ಡದಾಗಿದೆ. ಶಾಸನ, ಕಾವ್ಯ, ಕಥೆ, ಸ್ತೋತ್ರ, ಶಾಸ್ತ್ರ ಮುಂತಾದ ರೂಪಗಳಲ್ಲಿ ಪ್ರಕಟವಾಗಿದೆ. ಗದ್ಯ, ಚಂಪೂ, ಕಂದ ಸಾಂಗತ್ಯ ಮುಂತಾದ ಛಂದೋ ರೂಪಗಳಲ್ಲಿ ಮೈತಳೆದಿದೆ. ಕನ್ನಡವು ಜೈನರ ಮನೆಮಾತಾಗಿದೆ. ಜೈನ ಕವಿಗಳು ಕನ್ನಡಕ್ಕೆ ಆದ್ಯತೆ ನೀಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ, ಪ್ರೊ. ಪದ್ಮಪ್ರಸಾದ, ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಡಾ. ಸಿದ್ದು ಅಲಗೂರ ಮಾತನಾಡಿದರು. ಕೊಲ್ಹಾಪುರದ ಜೈನಮಠ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಗೋಪಾಲ ಜಿನಗೌಡ, ಭರತೇಶ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ, ಡಿ.ಎ.ಪಾಟೀಲ, ವಿನೋದ ದೊಡ್ಡಣ್ಣವರ ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts