More

    ಪ್ರತಿಭಟನೆ ಸ್ಥಳದಲ್ಲೇ ಚೌಡಯ್ಯ ಜಯಂತ್ಯುತ್ಸವ

    ಕಾರವಾರ: ಸಾಗರ ಮಾಲಾ ಯೋಜನೆ ವಿರೋಧಿಸಿ ಕಳೆದ ಎಂಟು ದಿನದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಂಡಿರುವ ಮೀನುಗಾರರು ಮಂಗಳವಾರ ಪ್ರತಿಭಟನೆ ಸ್ಥಳದಲ್ಲೇ ಅಂಬಿಗರ ಚೌಡಯ್ಯ ಜಯಂತಿ ಆಚರಿಸಿದರು. ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

    ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಅದಕ್ಕೆ ಮೀನುಗಾರರ ಸಮುದಾಯಕ್ಕೆ ಆಹ್ವಾನ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮೀನುಗಾರರು ಪ್ರತಿಭಟನೆ ನಡೆಸಿದ್ದರಿಂದ ಕಾರ್ಯಕ್ರಮವನ್ನು ಕುಮಟಾಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ನಾವೇ ಪ್ರತಿಭಟನೆ ಜತೆ ಕಾರ್ಯಕ್ರಮ ನಡೆಸಬೇಕಾಯಿತು ಎಂದು ಮುಖಂಡ ಪ್ರಸಾದ ಕಾರವಾಕರ್ ಅಸಮಾಧಾನ ವ್ಯಕ್ತಪಡಿಸಿದರು.

    ರವೀಂದ್ರ ನಾಯ್ಕ ಬೆಂಬಲ: ಸಾಗರ ಮಾಲಾ ಯೋಜನೆಯನ್ನು ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ಹೇಳಿದರು.

    ಮೀನುಗಾರರ ಹೋರಾಟಕ್ಕೆ ಮಂಗಳವಾರ ಬೆಂಬಲ ಸೂಚಿಸಿ ಅವರು ಮಾತನಾಡಿದರು. ಯೋಜನೆ ಅವೈಜ್ಞಾನಿಕವಾಗಿದೆ. ಮೀನುಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇಂಥ ಯೋಜನೆ ಜಾರಿಗೆ ತರುವ ಪೂರ್ವದಲ್ಲಿ ಜನಾಭಿಪ್ರಾಯ ಸಂಗ್ರಹಿಸದಿರುವುದು ಬೇಸರದ ಸಂಗತಿ ಎಂದರು.

    ರಾತ್ರಿ ವೇಳೆ ವೇಬ್ರಿಜ್ ಕಾಮಗಾರಿ

    ಬಂದರು ವಿಸ್ತರಣೆ, ಅಲೆ ತಡೆಗೋಡೆ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ಕಡಲಿಗೆ ಕಲ್ಲು ಹಾಕಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ತಿಳಿಸಿದ್ದರು. ಆದರೆ, ಗುತ್ತಿಗೆದಾರರು ರಾತ್ರಿ ವೇಳೆ ವೇ ಬ್ರಿಜ್ ಕಾಮಗಾರಿ ಪ್ರಾರಂಭಿಸಿದ್ದರು. ಮೀನುಗಾರರು ಮುತ್ತಿಗೆ ಹಾಕಿ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ.

    ಸ್ಥಳೀಯರಿಗೆ ಡ್ರೖೆವರ್ ಕೆಲಸ?

    ಜಿಲ್ಲೆಯಲ್ಲಿ ಬಂದರು ಅಭಿವೃದಿಟಛಿಯಾದರೂ ಸ್ಥಳೀಯರಿಗೆ ತಾಂತ್ರಿಕ ಹುದ್ದೆಗಳು ಸಿಗುವುದು ಅನುಮಾನವಾಗಿದೆ. ಬಂದರು ನಿರ್ವಣವಾದರೆ ಮರೈನ್ ಇಂಜಿನಿಯರ್, ಹೈಡ್ರೋಗ್ರಾಫರ್, ಪೋರ್ಟ್, ಶಿಪ್ ಅಡ್ಮಿನಿಸ್ಟ್ರೇಟರ್, ಶಿಪ್ ಆಂಕರ್ ಮುಂತಾದ ತಾಂತ್ರಿಕ ಹುದ್ದೆಗಳಿವೆ. ಅವಕ್ಕೆ ಶಿಪ್ಪಿಂಗ್ ಅಥವಾ ನ್ಯಾವಿಗೇಷನ್ ಸಂಬಂಧಿಸಿದ ತರಬೇತಿ ಪಡೆದವರು ಬೇಕು. ಈ ವಿಷಯವಾಗಿ ಒಟ್ಟು 90 ವಿವಿಧ ಕೋರ್ಸ್​ಗಳಿವೆ. ದೇಶದ ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಅತಿ ಹೆಚ್ಚು ಕಾಲೇಜ್​ಗಳಿವೆ. ಸಮುದ್ರವೇ ಇಲ್ಲದ ಬಿಹಾರದಲ್ಲಿ 3, ದೆಹಲಿಯಲ್ಲಿ 8, ಗೋವಾದಲ್ಲಿ 6, ಆಂದ್ರದಲ್ಲಿ 5 ಕಾಲೇಜ್​ಗಳಿವೆ. ಆದರೆ, ದುರಂತ ಎಂದರೆ ರಾಜ್ಯದಲ್ಲಿ ಒಂದೂ ನ್ಯಾವಿಗೇಶನ್ ಕಾಲೇಜ್​ಗಳಿಲ್ಲ. ಶಿಪ್ಪಿಂಗ್ ಸಂಬಂಧ ತರಬೇತಿ ನೀಡುವ ಒಂದು ಕಾಲೇಜ್ ಮಾತ್ರ ಮಂಗಳೂರಿನಲ್ಲಿದೆ. ಡಿಜಿ ಶಿಪ್ಪಿಂಗ್​ನಿಂದ ತರಬೇತಿ ಕೋರ್ಸ್​ಗಳಿವೆ. ಅಂಥ ತರಬೇತಿ ಸಂಸ್ಥೆಗಳೂ ರಾಜ್ಯದಲ್ಲಿಲ್ಲ. ಇದರಿಂದ ಇಲ್ಲಿನ ಸೀಬರ್ಡ್ ನೌಕಾ ಯೋಜನೆಯಲ್ಲಿ ಶಿಪ್ಪಿಂಗ್ ಹಾಗೂ ನ್ಯಾವಿಗೇಶನ್​ಗೆ ಸಂಬಂಧಿಸಿದ ಸಾಕಷ್ಟು ಹುದ್ದೆಗಳಿದ್ದರೂ ಅದಕ್ಕೆ ಕನ್ನಡಿಗರು ಆಯ್ಕೆಯಾಗುತ್ತಿಲ್ಲ. ಕಾರವಾರ, ಬೇಲೆಕೇರಿಯಲ್ಲಿ ಬಂದರು ಅಭಿವೃದಿಟಛಿಯಾದರೂ ಸ್ಥಳೀಯರಿಗೆ ಡ್ರೖೆವರ್, ವಾಚ್​ವುನ್ ಮುಂತಾದ ಹುದ್ದೆಗಳೇ ಸಿಗಲಿವೆ ಎಂಬ ಆತಂಕ ಇಲ್ಲಿಯವರದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts