More

    ಪೋಲಿಯೋ ಲಸಿಕೆ ಪ್ರಚಾರ‌ ಸಾಮಗ್ರಿ ಬಿಡುಗಡೆ ಹಾಗೂ ಕುಂದು ಕೊರತೆ ಆಲಿಕೆ

    ಚಿತ್ರದುರ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತ ಆರೋಗ್ಯ ಶಿಕ್ಷಣ ಸಾಮಗ್ರಿಗಳನ್ನು ಡಿಸಿ ಆರ್. ವಿನೋತ್ ಪ್ರಿಯಾ ಇಂದು ಜಿಲ್ಲಾ ಆಸ್ಪತ್ರೆ ಆವರಣದ ಬಿ.ಸಿ ರಾಯ್ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
    ನಂತರ ಮಾತನಾಡಿದ ಅವರು, ದೇಶವನ್ನು ಈಗಾಗಲೇ ಪೊಲಿಯೋ ಮುಕ್ತವಾಗಿ ಮಾಡಲಾಗಿದೆ. ಅದರಂತೆ ಪೊಲಿಯೋ ಮೇಲಿನ‌ ಗೆಲುವನ್ನು ಮುಂದುವರಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಇಲಾಖೆಯ ಪ್ರತಿಯೊಬ್ಬರು ಶ್ರಮಿಸಬೇಕೆಂದರು.

    ಜಿ.ಪಂ.ಸಿಇಒ ಸಿ. ಸತ್ಯಭಾಮಾ ಮಾತನಾಡಿ, ಜನವರಿ ೧೯ ರಂದು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಪೊಲಿಯೋ ಮುಕ್ತ ರಾಷ್ಟ್ರವಾಗಿ ಮುಂದುವರರಿಸ ಬೇಕಿದೆ.

    ಇದಕ್ಕಾಗಿ ಪ್ರತಿಯೊಬ್ಬರು ಕೈ ಜೊಡಿಸಬೇಕು ಎಂದು ಹೇಳಿದರು.
    ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು ಯಾವ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಲ್ಲವೋ ಅವರನ್ನು ಗುರುತಿಸಿ ಲಸಿಕೆ ಹಾಕಿಸುವಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಾಲಾಕ್ಷಪ್ಪ, ಆರ್ ಸಿ ಹೆಚ್ ಕುಮಾರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜಪ್ಪ ಸೇರಿದಂತೆ ಇತರರು ಹಾಜರಿದ್ದರು.

    ಕುಂದುಕೊರತೆ ಆಲಿಕೆ

    ಇದೇ ವೇಳೆ‌ ಡಿಸಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕುಂದುಕೊರತೆ ಆಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts