More

    ಪೈಪ್ ಒಡೆದು ನೀರು ಪೋಲು

    ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ನೀರು ಸರಬರಾಜು ಆಗುವ ಪೈಪ್​ಲೈನ್ ತಾಲೂಕಿನ ಅಮ್ಮಿನಭಾವಿ ಬಳಿ ಗುರುವಾರ ಮಧ್ಯಾಹ್ನ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದೆ.
    ಸವದತ್ತಿಯಿಂದ ಅಮ್ಮಿನಭಾವಿ ವರೆಗಿನ 965 ಮಿ.ಮೀ. ವ್ಯಾಸದ ಎಂ.ಎಸ್. ಕೊಳವೆ ಅಮ್ಮಿನಭಾವಿ ಹತ್ತಿರ ಗುರುವಾರ ಮಧ್ಯಾಹ್ನ ಒಡೆದಿದೆ.
    ಹೆದ್ದಾರಿ ಪಕ್ಕದ ಬೃಹತ್ ಪೈಪ್ ಏಕಾಏಕಿ ಒಡೆದಿದ್ದರಿಂದ ನೀರು ರಸ್ತೆಯ ಮತ್ತೊಂದು ಬದಿಯವರೆಗೆ ಚಿಮ್ಮಿತು. ಅಕ್ಕಪಕ್ಕದಲ್ಲಿ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಗಾಬರಿಗೊಳ್ಳುವಂತಾಗಿತ್ತು.
    ಒಂದು ಗಂಟೆಗೂ ಹೆಚ್ಚು ಕಾಲ ನೀರು ಪೋಲಾಯಿತು. ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆದರೂ ಚಿಮ್ಮುತ್ತಿದ್ದ ನೀರಿನಲ್ಲೇ ಕೆಲ ವಾಹನಗಳು ಸಂಚರಿಸಿದವು. ನಂತರ ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ನೀರು ಸರಬರಾಜು ಸ್ಥಗಿತಗೊಳಿಸಲಾಯಿತು.
    ಪೂರೈಕೆಯಲ್ಲಿ ವಿಳಂಬ: ಅಮ್ಮಿನಭಾವಿ ಹತ್ತಿರ ಪೈಪ್ ಒಡೆದಿರುವುದರಿಂದ ನೀರನ್ನು ತುರ್ತಾಗಿ ಸ್ಥಗಿತಗೊಳಿಸಬೇಕಾಗಿದೆ. ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ಜ. 28ರಂದು ಧಾರವಾಡ ನಗರಕ್ಕೆ ರಾತ್ರಿ 8 ಗಂಟೆಯವರೆಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಪ್ರತಿ ಬಡಾವಣೆಗೂ ಒಂದು ದಿನ ವಿಳಂಬವಾಗಿ ನೀರು ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts