More

    ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್ಪೋಗೆ ಉತ್ತಮ ಸ್ಪಂದನೆ

    ಬೆಳಗಾವಿ: ದೇಶದ ವಿವಿಧ ಭಾಗಗಳ ಅತ್ಯುತ್ತಮವಾಗಿ ಪ್ರದರ್ಶನ ಕಂಡು ಯಶಸ್ವಿಯಾಗಿರುವ ‘ನ್ಯೂ ಇಂಡಿಯನ್ ಕ್ರಾಫ್ಟ್ೃ ಎಕ್ಸ್ಪೋ ಇದೀಗ ಕುಂದಾನಗರಿ ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಮಾ.28ರಿಂದ ಪ್ರಾರಂಭವಾಗಿದೆ. ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ಉಪ ಮೇಯರ್ ರೇಷ್ಮಾ ಪಾಟೀಲ ಪ್ರದರ್ಶನ ಉದ್ಘಾಟಿಸಿದ್ದಾರೆ.

    ಈ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳ 100ಕ್ಕೂ ಹೆಚ್ಚು ಸ್ಟಾಲ್‌ಗಳು ಭಾಗವಹಿಸಿವೆ. ತಾಜ್ ಥ್ರೆಡ್, ಹ್ಯಾಂಡ್ಲೂಮ್ ಗೂಡ್ಸ್ ಮತ್ತು ಯಶ್ ಕಮ್ಯುನಿಕೇಷನ್ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಒಡಿಶಾ, ಕಾಶ್ಮೀರ, ಶಿಮ್ಲಾ, ಪಂಜಾಬ್, ಅಸ್ಸಾಂ, ಅರುಣಾಚಲ, ಪಶ್ಚಿಮ ಬಂಗಾಳ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ವಸ್ತುಗಳು ಪ್ರದರ್ಶನದಲ್ಲಿ ಅತ್ಯಂತ ಸಮಂಜಸವಾದ ಬೆಲೆಗಳಲ್ಲಿ ಲಭ್ಯವಿದೆ. ಕೈಯಿಂದ ಮಾಡಿದ ಉಡುಗೊರೆಗಳು, ಉತ್ಪನ್ನಗಳು ಹಾಗೂ ಕೃತಕ ಆಭರಣಗಳು, ಟೆರಾಕೋಟಾ ಗೃಹಾಲಂಕಾರ, ಖುರ್ಜಾ ಕ್ರೋಕರಿ, ಡಿಸೈನರ್ ಉಡುಪುಗಳು, ವಾರಾಣಾಸಿ ಸೀರೆಗಳು, ಕೋಲ್ಕತ್ತಾ, ಅಸ್ಸಾಮಿ ಸೀರೆಗಳು ಮತ್ತು ಬಟ್ಟೆಗಳು, ಭಾಗಲಪುರಿ ಸೀರೆಗಳು, ಪಂಜಾಬಿ ಮತ್ತು ರಾಜಸ್ಥಾನಿ ಚಪ್ಪಲಗಳು, ಕಾರ್ಪೆಟ್, ಬಾಗಿಲು ಚಾಪೆ, ಹರ್ಬಲ್ ಉತ್ಪನ್ನಗಳು ಲಭ್ಯವಿವೆ.

    ಕ್ಯಾಶ್ಮೀರ್ ಶಾಲುಗಳು ಮತ್ತು ಸೂಟ್‌ಗಳು, ಖಾದಿ ಬಟ್ಟೆ, ಖಾದಿ ಕೈಮಗ್ಗಗಳು, ಗುಜರಾತಿ ಪರ್ಸ್, ಕಿಚನ್ ಸಾಮಾನುಗಳು, ಸೋಫಾ ಸೆಟ್‌ಗಳು ಮತ್ತು ಸಹರಾನಪುರ ಪೀಠೋಪಕರಣಗಳು, ರಾಜಸ್ಥಾನಿ ಉಪ್ಪಿನಕಾಯಿ, ಬಳೆಗಳು, ಟೀ ಶರ್ಟ್‌ಗಳು, ಮಕ್ಕಳ ಆಟಿಕೆಗಳು, ಜೈಪುರಿ ಗಾದಿಗಳು, ಚರ್ಮದ ವಸ್ತುಗಳು, ಬೆಡ್ ಶೀಟ್‌ಗಳು, ವುಡನ್ ಕಾರ್ವಿಂಗ್, ಲೋಹದ ಕೆತ್ತನೆಗಳು, ಕರಕುಶಲ ವಸ್ತುಗಳು, ಲೇಡಿಸ್ ಕುರ್ತಿಸ್, ಗೌನಗಳು, ಕ್ರ್ಯಾಕರರಿಗಳು, ಜಾರ್ಗಳು, ಆಯುರ್ವೇದ ಉತ್ಪನ್ನಗಳು ಪ್ರದರ್ಶನದಲ್ಲಿವೆ. ಅಲ್ಲದೆ ರಾಜಸ್ಥಾನಿ ಚುರಾನ್, ಮೃದು ಆಟಿಕೆಗಳು, ಚನ್ನಪಟ್ಟಣದ ಆಟಿಕೆಗಳು, ಸೌಂದರ್ಯವರ್ಧಕಗಳು, ವಿವಿಧ ಗೃಹಾಲಂಕಾರಗಳು, ಹೈದರಾಬಾದಿ ಬಳೆಗಳು, ಮುತ್ತುಗಳು, ಮಸಾಲೆಗಳು, ಉಪ್ಪಿನಕಾಯಿ, ಪಾಪಡ್ಸ್, ಚಟ್ನಿಗಳು, ಮೊಬೈಲ್ ಕವರ್‌ಗಳು ಹಾಗೂ ಮೈಸೂರು ಹೇರ್ ಆಯಿಲ್ ತಿರುಪುರ್ ಟಿ-ಶರ್ಟ್‌ಗಳು ಪೈಜಾಮ ಟ್ರ್ಯಾಕ್ಸೂಟ್‌ಗಳು ಬೆಡ್‌ಶೀಟ್‌ಗಳು ನೂರಾರು ವಿಧದ ವಸ್ತುಗಳು ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಲಭ್ಯವಿದೆ.

    ಇಡಿ ಕುಟುಂಬ ಒಂದೇ ಸ್ಥಳದಲ್ಲಿ ಶಾಪಿಂಗ್ ಮಾಡಬಹುದಾದ ಪ್ರದರ್ಶನವು ತಿಂಗಳ ಅಂತ್ಯದವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ಉಚಿತ ಪ್ರವೇಶ ಮತ್ತು ಪಾರ್ಕಿಂಗ್ ಸೌಲಭ್ಯವಿದೆ. ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಘಟಕರಾದ ಆಶು ಶರ್ಮಾ ಮತ್ತು ಪ್ರಕಾಶ ಕಲ್ಕುಂದ್ರಿಕರ್ ತಿಳಿಸಿದರು. ಪಾಲಿಕೆ ಸದಸ್ಯ ಸವಿತಾ ಕಾಂಬಳೆ, ಸವಿತಾ ಹೆಬ್ಬಾರ, ರಕ್ಷಾ ಉಪಾಧ್ಯೆ, ಸುಹಾಸ ತರಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts