More

    ನೇರ ವೇತನ ಪಾವತಿಗೆ ಒತ್ತಾಯ

    ನವಲಗುಂದ: ಪೌರಕಾರ್ವಿುಕರ ಮಾದರಿಯಲ್ಲಿ ನೇರ ವೇತನಕ್ಕಾಗಿ ಆಗ್ರಹಿಸಿ ಪುರಸಭೆ ಎದುರು ಹೊರಗುತ್ತಿಗೆ ವಾಹನ ಚಾಲಕರು ಹಾಗೂ ವಾಟರ್​ವುನ್​ಗಳು ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು.

    ಹೊರಗುತ್ತಿಗೆ ವಾಹನ ಚಾಲಕರ ಸಂಘದ ತಾಲೂಕು ಅಧ್ಯಕ್ಷ ರಮೇಶ ಮಲ್ಲದಾಸರ ಮಾತನಾಡಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಹನ ಚಾಲಕರು ಹಾಗೂ ವಾಟರ್​ವುನ್​ಗಳು ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತ ಬಂದಿದ್ದಾರೆ. ಹೀಗಾಗಿ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

    ರಾಜ್ಯದಲ್ಲಿ ಎರಡು ವಿಭಾಗದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರ, ಪಟ್ಟಣ ಸ್ವಚ್ಛತೆ ನಿರ್ವಹಣೆಯಲ್ಲಿ ತ್ಯಾಜ್ಯ ಸಾಗಾಣಿಕೆಯ ಚಾಲಕರ ಪಾತ್ರ ದೊಡ್ಡದಾಗಿದ್ದು, ಪೌರ ಕಾರ್ವಿುಕರ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಂತೆ, ವಾಟರ್​ವುನ್​ಗಳು ಯಾವುದೇ ಸೇವಾ ಭದ್ರತೆ ಇಲ್ಲದೆ ಕನಿಷ್ಠ ವೇತನಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಆಧಾರಿತ ನೌಕರರನ್ನು ನೇರ ವೇತನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

    ಬಳಿಕ ತಹಸೀಲ್ದಾರ್ ನವೀನ ಹುಲ್ಲೂರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಸುರೇಶ ಮೇಟಿ, ಜೀವನ ಪವಾರ, ಡಿಎಸ್​ಎಸ್ ತಾಲೂಕು ಅಧ್ಯಕ್ಷ ನಿಂಗಪ್ಪ ಕೆಲಗೇರಿ ಧರಣಿ ನಿರತರಿಗೆ ಬೆಂಬಲ ವ್ಯಕ್ತಪಡಿಸಿದರು. ಸಂಘದ ಪದಾಧಿಕಾರಿಗಳಾದ ರಾಘವೇಂದ್ರ ಚಲವಾದಿ, ಹನುಮಂತಪ್ಪ ಗುತ್ತೆಪ್ಪನವರ, ತುಕಾರಾಮ ಪವಾರ, ಸಿದ್ದಲಿಂಗಯ್ಯ ಅಂಗಡಿ, ಹನುಮಂತ ಆಸಂಗಿ, ವಾಟರ್​ವುನ್​ಗಳಾದ ಪರಶುರಾಮ ಕದಂ, ಎ.ಎ. ಮದ್ರಾಸ, ಬಸವರಾಜ ಬಾಡಗಿ, ಸೈಫುಲ್ಲಾ ಪುಲಾರೆ, ಧಾವಲ್ಸಾಬ ಹುಗ್ಗಿ, ನಿಂಗಪ್ಪ ಪಡೆಸೂರ, ವೆಂಕಣ್ಣ ಭೋವಿ, ಮಹಾಂತೇಶ ಗಾಣಿಗೇರ, ಶರಣಪ್ಪ ವಾಲ್ಮೀಕಿ, ಶಂಕ್ರಪ್ಪ ಹೊಸೂರ, ಧರಿಯಪ್ಪ ಮುತ್ತಲಗೆರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts