More

    ನೆಮ್ಮದಿಗೆ ದೈವಿಕ ಕಾರ್ಯ ನಡೆಸುವುದು ಮುಖ್ಯ

    ಮದ್ದೂರು: ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಲು ದೈವಿಕ ಕಾರ್ಯ ನಡೆಸುವುದು ಮುಖ್ಯ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.


    ತಾಲೂಕಿನ ಹೊಸಕೆರೆ ಗ್ರಾಮದ ಬೀರೇಶ್ವರ ಸ್ವಾಮಿಯ ಹೆಬ್ಬಾಗಿಲನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ದೇವರನ್ನು ಪೂಜಿಸಿ, ಪ್ರಾರ್ಥಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.


    ದಾನಿಗಳ ನೆರವಿನಿಂದ ಅಚ್ಚುಕಟ್ಟಾಗಿ ದೇಗುಲದ ಹೆಬ್ಬಾಗಿಲನ್ನು ನಿರ್ಮಿಸಲಾಗಿದೆ. ಇದು ಗ್ರಾಮಕ್ಕೆ ಕೀರ್ತಿಯ ಕಳಶವಿದ್ದಂತೆ. ಗ್ರಾಮದ ಹೆಗ್ಗುರುತಾದ ಹೆಬ್ಬಾಗಿಲು ಗ್ರಾಮದ ಮೆರುಗನ್ನು ಹೆಚ್ಚಿಸಿದೆ. ಗ್ರಾಮದಲ್ಲಿ ಜಾತಿ, ಭೇದ, ಧರ್ಮಗಳನ್ನು ಮೀರಿ ಬದುಕಬೇಕು ಎಂದು ತಿಳಿಸಿದರು.


    ಜೆಡಿಎಸ್ ಎಸ್ಸಿ, ಎಸ್ಟಿ ತಾಲೂಕು ಘಟಕದ ಅಧ್ಯಕ್ಷ ಹೊಸಕೆರೆ ಕಾಳಯ್ಯ, ಗ್ರಾ.ಪಂ.ಸದಸ್ಯ ಎಚ್.ಎಲ್.ದಯಾನಂದ್, ಡಿ.ಸಿ.ತಮ್ಮಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಹೊಸಕೆರೆ ಪ್ರಸನ್ನ ಕುಮಾರ್, ಮುಖಂಡರಾದ ಪಣ್ಣೆದೊಡ್ಡಿ ವಿಜಯೇಂದ್ರ, ಮಾರಸಿಂಗಹಳ್ಳಿ ಗೂಳೇಶ್, ಹಾಪ್‌ಕಾಮ್ಸ್ ಕೃಷ್ಣಪ್ಪ, ಎಚ್.ಟಿ. ಶಿವಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತುರಾಜು, ಮರಂಕಯ್ಯ, ಸಣ್ಣಂಕ್ಕೇಗೌಡ, ರವಿ, ವಿಶ್ವ, ವಿಕಾಸ, ಮಧು, ಇಂದುಕುಮಾರ್, ರಾಜೇಶ, ಅಂಗಡಿ ಕೃಷ್ಣ, ರಾಮಕೃಷ್ಣ, ಚಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts