More

    ನಾಯಕರಾಗಲು ವಿದ್ಯಾರ್ಥಿ ಸಂಘ ಸಹಕಾರಿ : ಗ್ರಾಮ ಪಂಚಾಯಿತಿ ಸದಸ್ಯ ಅಯ್ಯರ್ ಗಿರೀಶ್ ಅಭಿಮತ


    ಮೈಸೂರು : ಇಂದಿನ ವಿದ್ಯಾರ್ಥಿಗಳೇ ದೇಶದ ಆಶಾಕಿರಣವಾಗಿದ್ದು, ಅವರನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸುವ ಹೊಣೆಗಾರಿಕೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಬೆಟ್ಟದಪುರ ಗ್ರಾಮ ಪಂಚಾಯಿತಿ ಸದಸ್ಯ ಅಯ್ಯರ್ ಗಿರೀಶ್ ಸಲಹೆ ನೀಡಿದರು.


    ಬೆಟ್ಟದಪುರ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತಿಚ್ಚೇಗೆ ನಡೆದ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ದೇಶದ ಯುವ ನಾಯಕರನ್ನು ಸೃಷ್ಟಿಮಾಡುವ ಶಕ್ತಿ ವಿದ್ಯಾರ್ಥಿ ಸಂಘಕ್ಕೆ ಇದೆ. ಯುವಕರು ತಪ್ಪು ದಾರಿ ಹಿಡಿಯದಂತೆ ಅವರನ್ನು ಪ್ರೇರೆಪಿಸಿ ಉತ್ತಮ ದಾರಿಗೆ ತರುವ ಹೊಣೆಗಾರಿಕೆಯೂ ಸಮಾಜದ ಮೇಲಿದೆ ಎಂದು ಹೇಳಿದರು.


    ನಿವೃತ ಪ್ರಾಂಶುಪಾಲ ಜಿ.ಟಿ.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವ ಅಭಿರುಚಿ ಬದುಕನ್ನೇ ಬದಲಾಯಿಸುತ್ತದೆ. ಕೇವಲ ಸಣ್ಣಪುಟ್ಟ ಕೆಲಸಗಳಿಗೆ ಆಸೆ ಪಡಬಾರದು. ಉತ್ತಮವಾಗಿ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಸಲಹ ನೀಡಿದರು.


    ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದವರಿಗೆ ಪ್ರಾಂಶುಪಾಲ ಬಸವರಾಜು ಪ್ರಮಾಣ ವಚನ ಬೋಧ ಸಿದರು. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕಾಲೇಜಿನ ಎಚ್.ಕೆ.ಅಶ್ವಿನಿ, ಎಂ.ತಾರುಣ್ಯ, ತರುಣ್, ಪ್ರಜ್ವಲ್, ಜಯಂತ್ ಕುಮಾರ್, ಶಶಿಕುಮಾರ್, ಅರ್ಚನಾ, ಐಶ್ವರ್ಯ, ರೋಷನ್, ಸಿಂಚನಾ ಹಾಗೂ ವಿದ್ಯಾರ್ಥಿಗಳ ಪಾಲಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


    ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ್, ಬಿ.ಆರ್.ಗಿರಿಗೌಡ, ದಲಿತ ಸಂಘರ್ಷ ಸಮಿತಿಯ ಮಖಂಡ ಕರಡೀಪುರ ಕುಮಾರ್, ನಿವೃತ್ತ ಮುಖ್ಯಶಿಕ್ಷಕ ಬಿ.ಟಿ. ಸಣ್ಣಸ್ವಾಮಿಗೌಡ, ಎಸ್‌ಸಿವಿಡಿಎಸ್ ಮುಖ್ಯಶಿಕ್ಷಕ ಮಹೇಶ್, ಕಾಲೇಜಿನ ಕಾರ್ಯದರ್ಶಿ ಡಾ.ಜೆ. ಸೋಮಣ್ಣ, ಉಪನ್ಯಾಸಕರಾದ ಲೋಕೇಶ್, ಅನುಪಮಾ, ಮಹದೇವ ಪ್ರಸಾದ್, ಅಭಿಜಿತ್, ಚೇತನ್, ರೇಣುಕಾ, ಧನರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts