More

    ಧರ್ಮದ ಮೂಲಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

    ಹೊಳೆನರಸೀಪುರ: ಧರ್ಮ ಎಂಬ ಅತ್ಯಮೂಲ್ಯ ಪದವನ್ನು ನೆಪ ಮಾತ್ರಕ್ಕೆ ಬಳಸದೆ ಧರ್ಮದ ಮೂಲಸಾರವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವುದರ ಮೂಲಕ ನಿತ್ಯ ಬದುಕಿನಲ್ಲಿ ಹಾಗೂ ಚಟುವಟಿಕೆಗಳ ಸಂದರ್ಭದಲ್ಲಿ ಶಾಶ್ವತವಾಗಿ ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.


    ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದೊಡ್ಡ ಬ್ಯಾಗತವಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ರಂಗನಾಥಸ್ವಾಮಿ ಕೃಪಾಘೋಷಿತ ನಾಟಕ ಮಂಡಳಿ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ನಾಟಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ವಿಭಿನ್ನ ಕಲೆಗಳು ಅಡಗಿದ್ದು ಅಂತಹ ಪ್ರತಿಭಾನ್ವಿತರನ್ನು ಗುರುತಿಸಿ. ಪ್ರೋತ್ಸಾಹಿಸಿ ಆ ಮೂಲಕ ಅವರಿಗೆ ಸಹಕಾರ ನೀಡಲು ಮುಂದಾಗಬೇಕಾದದ್ದು ಪ್ರಸ್ತುತ ಅಗತ್ಯ. ಈ ನಿಟ್ಟಿನಲ್ಲಿ ಕಲಾಸಕ್ತರು ಹಾಗೂ ದಾನಿಗಳು ಕಲಾವಿದರಿಗೆ ಸಹಾಯ ಹಸ್ತ ಚಾಚುವುದರ ಮೂಲಕ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅವರ ಕಲೆಯನ್ನು ಪ್ರದರ್ಶಿಸಲು ಉತ್ತೇಜನ ನೀಡಬೇಕೆಂದರು.

    ದೊಡ್ಡಬ್ಯಾಗತವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗಯ್ಯ, ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಉಪಾಧ್ಯಕ್ಷ ಮುಜಾಹಿದ್ ಪಾಷಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಗೆವಾಳು ದ್ಯಾವಪ್ಪ, ಕೆಡಿಪಿ, ಹಾಗೂ ಪುರಸಭೆ ನಾಮನಿರ್ದೇಶಕ ಮಾಜಿ ಸದಸ್ಯ ಎಚ್.ಟಿ. ಲಕ್ಷ್ಮಣ, ಚಿಗಳ್ಳಿ ಶಿವಣ್ಣ ಹಾಜರಿದ್ದರು. ಶ್ರೇಯಸ್ ಪಟೇಲ್ ಅವರನ್ನು ನಾಟಕ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts