More

    ದೇಶ ಸ್ವಾವಲಂಬಿಯಾಗಲು ಕೊಡುಗೆ ನೀಡಿ

    ಬಾಗಲಕೋಟೆ: ವಿಶ್ವದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿದೆ. ದೇಶ ಸ್ವಾವಲಂಬಿಯಾಗಲು ಯುವ ಜನತೆ ಕೊಡುಗೆ ನೀಡಬೇಕು ಎಂದು ಇಸ್ರೋ ಮಾಜಿ ಚೆರ್ಮೆನ್ ಡಾ.ಕೆ.ಶಿವನ್ ಹೇಳಿದರು.

    ನಗರದ ಬಿವಿವಿ ಸಂಘದ ಬಿಇಸಿ ನೂತನ ಸಭಾಭವನದಲ್ಲಿ ಬಸವೇಶ್ವರ ಇಂಜನಿಯರಿಂಗ ಕಾಲೇಜ್‌ನ (ಸ್ವಾಯತ್ತ) ೧೨ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

    ಶಿಕ್ಷಣ ಯಾವುದೇ ಇರಲಿ. ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಹಿಕೆ ಬದಲಾಯಿಸಿಕೊಳ್ಳಬೇಕು. ತಮ್ಮ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ವಿಶ್ವಾಸ ಇರಬೇಕು. ವಿಫವಾದಾಗ ದೃತಿಗಡಬಾರದು. ಅದರಿಂದ ಪಾಠ ಕಲಿತು ಮುಂದೆ ಸಾಗಬೇಕು. ಅದುವೇ ಗೆಲುವಿಗೆ ಕಾರಣ ಎಂದು ಸಲಹೆ ನೀಡಿದರು.

    ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯೋಗಿಗಳಾಗುವದಕ್ಕಿಂತ ಉದ್ಯಮಿಗಳಾಗಬೇಕು. ಇಸ್ರೋ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಯುವಕರಿಗೆ ವಿಫುಲ ಅವಕಾಶಗಳಿವೆ. ಕೇಂದ್ರ ಸರ್ಕಾರ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳು ಖಾಸಗಿ ಅವರಿಗೆ ಅವಕಾಶ ಕೊಟ್ಟಿದೆ. ಇದನ್ನು ಬಳಸಿಕೊಂಡು ಇಂಜಿನಿಯರ್‌ಗಳು ಉದ್ಯಮಿಗಳಾಗಬೇಕು. ಇಸ್ರೋ ಆದಿತ್, ಚಂದ್ರಯಾನ ಯೋಜನೆ ಹಾಕಿಕೊಂಡಿದೆ. ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಗುರಿ ಇದೆ. ಇಂತಹ ಯೋಜನೆಗಳಲ್ಲಿ ಯುವ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಲ್ಲಿ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದರು.

    ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಆರ್.ಎನ್.ಹೆರಕಲ್, ಪ್ರಾಚಾರ್ಯ ಎಸ್.ಎಸ್.ಇಂಜಗನೇರಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts