More

    ದೆಹಲಿಯಲ್ಲಿ ಹೋರಾಟಗಾರರ ಬಂಧನ- ಎಐಎಂಎಸ್‌ಎಸ್ ಪ್ರತಿಭಟನೆ 

    ದಾವಣಗೆರೆ: ಕುಸ್ತಿಪಟುಗಳ ಚಳವಳಿಗೆ ಬೆಂಬಲವಾಗಿ ನಡೆಸಲು ಉದ್ದೇಶಿಸಿದ್ದ ಮಹಿಳಾ ಮಹಾಪಂಚಾಯತ್ ಹೋರಾಟ ಭಂಗಗೊಳಿಸುವ ಉದ್ದೇಶದಿಂದ ವಿವಿಧ ಸಂಘಟನೆಗಳ ಪ್ರಮುಖರನ್ನು ಬಂಧಿಸಿದ ದೆಹಲಿ ಪೊಲೀಸರ ಕ್ರಮ ಖಂಡಿಸಿ ದಾವಣಗೆರೆಯಲ್ಲಿ ಎಐಎಂಎಸ್‌ಎಸ್ ಹಾಗೂ ಎಐಕೆಕೆಎಂಎಸ್ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
    ಹೊಸ ಸಂಸತ್ ಭವನದೆದುರು ಮಹಿಳಾ ಮಹಾಪಂಚಾಯತ್ ಹೋರಾಟ ನಡೆಸಲು ಯೋಜಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರವು ರಿತು ಕೌಶಿಕ್, ಜೈಕರಣ ಮಂಡೋತಿ, ರಾಜೇಂದರ್ ಸಿಂಗ್ ಹಾಗೂ ಹೋರಾಟ ನಿರತ ಕುಸ್ತಿಪಟುಗಳನ್ನು ಬಂಧಿಸಿದೆ. ಇದೊಂದು ಅಪ್ರಜಾತಾಂತ್ರಿಕ ಹಾಗೂ ದಮನಕಾರಿ ನೀತಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
    ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು. ಬಂಧಿಸಿದ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
    ಎಐಎಂಎಸ್‌ಎಸ್ ರಾಜ್ಯ ಘಟಕದ ಅಧ್ಯಕ್ಷೆ ಬಿ.ಆರ್.ಅಪರ್ಣಾ, ಜಿಲ್ಲಾ ಕಾರ್ಯದರ್ಶಿ ಭಾರತಿ, ಸದಸ್ಯೆ ಮಮತಾ, ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಕಾರ್ಯದರ್ಶಿ ನಾಗಸ್ಮಿತಾ, ಎಐಡಿಎಸ್ಒನ ಕಾವ್ಯಾ, ಸುಮನ್, ತಿಪ್ಪೇಸ್ವಾಮಿ , ಮಂಜುನಾಥ ಕುಕ್ಕವಾಡ, ಶಿವಾಜಿ ರಾವ್, ಮಂಜುನಾಥ ಕೈದಾಳೆ, ಶ್ರೀಕಾಂತ್ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts