More

    ದಾವಣಗೆರೆ ಜಿಲ್ಲೆಯಲ್ಲಿ ಶೇ.2.16 ಸರಾಸರಿ ಮತ ಹೆಚ್ಚಳ

    ದಾವಣಗೆರೆ: ಏಳು ವಿಧಾನಸಭೆ ಕ್ಷೇತ್ರಗಳಿಗೆ ಬುಧವಾರ ಶೇ.78.12ರಷ್ಟು ಮತದಾನ ದಾಖಲಾಗಿದೆ. 2018ರ ಚುನಾವಣೆಯಲ್ಲಿ 75.96ರಷ್ಟು ಮತದಾನವಾಗಿತ್ತು. ಈ ಸಲ ಶೇ. 2.16ರಷ್ಟು ಹೆಚ್ಚಳವಾಗಿದೆ.
    ಜಿಲ್ಲೆಯಲ್ಲಿ 467 ಸೇವಾ ಮತದಾರರ ಹೊರತಾಗಿಸಿ 14,42,086 ಮತದಾರರ ಪೈಕಿ 11,26.497 ಜನರು ಮತದಾನ ಮಾಡಿದ್ದಾರೆ. ಇದರಲ್ಲಿ 573295 (ಶೇ.79.41) ಪುರುಷರು, 553179 (ಶೇ.76.83) ಮಹಿಳೆಯರು, 23(ಶೇ.19.49) ತೃತೀಯ ಲಿಂಗಿಗಳು ಹಕ್ಕು ಚಲಾಯಿಸಿದ್ದಾರೆ.
    ಕ್ಷೇತ್ರವಾರು ಹೋಲಿಕೆ ಮಾಡಿದಾಗ ಸರಾಸರಿ ಶೇ.1ರಿಂದ 9ರಷ್ಟು ಮತಗಳು ಹೆಚ್ಚಳವಾಗಿವೆ. ಜಗಳೂರು ಕ್ಷೇತ್ರದಲ್ಲಿ ಈ ಬಾರಿ 80.38ಮತದಾನವಾಗಿದ್ದು , ಕಳೆದ ಬಾರಿ ಶೇ.77.37ರಷ್ಟಿತ್ತು. ಅಂದರೆ ಶೇ.3.03ರಷ್ಟು ಏರಿಕೆಯಾಗಿದೆ.
    ಹರಿಹರ ಕ್ಷೇತ್ರದಲ್ಲಿ ಈ ಸಲ ಶೇ.80.45 ಮತದಾನವಾಗಿದ್ದು ಶೇ.9.31ರಷ್ಟು ಹೆಚ್ಚಳ ಆಗಿದೆ. ಕಳೆದ ಬಾರಿ 71.17 ಮತ ಪ್ರಮಾಣವಿತ್ತು. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಳೆದ ಸಲ 64.85ರಷ್ಟಿದ್ದ ಮತದಾನ ಈ ಬಾರಿ 3.76ರಷ್ಟು ಏರಿಕೆಯಾಗಿದೆ. ಒಟ್ಟು 68.61ರಷ್ಟು ಮತ ಚಲಾವಣೆಯಾಗಿದೆ.
    ಶೇ.65.54ರಷ್ಟು ಮತದಾನವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರ ಈ ಬಾರಿ 69.08ರಷ್ಟು ಮತದಾನ ಕಂಡಿದೆ. ಶೇ. 3.54ರಷ್ಟು ಏರಿಕೆಯಾಗಿದೆ. ಮಾಯಕೊಂಡ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಮತದಾನ ಶೇ.82.44ರಷ್ಟಿತ್ತು. ಇದೀಗ 84.28ರಷ್ಟಾಗಿದೆ. ಅಂದರೆ ಶೇ.1.74ರಷ್ಟು ಮತ ಹೆಚ್ಚಳವಾಗಿವೆ.
    ಚನ್ನಗಿರಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 79.91ರಷ್ಟು ಮತದಾನವಾಗಿತ್ತು. ಈ ಬಾರಿ 2.63ರಷ್ಟು ಹೆಚ್ಚಳದೊಂದಿಗೆ 82.57ಕ್ಕೆ ತಲುಪಿದೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.84.19ರಷ್ಟು ಮತ ಚಲಾವಣೆಯಾಗಿದೆ. ಕಳೆದ ಸಲ ಶೇ 82.96 ಮತ ದಾಖಲಾಗಿತ್ತು. ಶೇ 1.25 ರಷ್ಟು ಮತದಾನ ಹೆಚ್ಚಳವಾಗಿದೆ.

    * ಎಲ್ಲಿ ಹೆಚ್ಚು- ಎಲ್ಲಿ ಕಡಿಮೆ ವೋಟಿಂಗ್?
    ಚನ್ನಗಿರಿ: (ಮತಗಟ್ಟೆ ಸಂಖ್ಯೆ 65) ಕೆರೆಬಿಳಚಿ ಗ್ರಾಮೀಣ ಹೈಸ್ಕೂಲ್‌ನಲ್ಲಿ 1160, (ಮ.ಸಂ.201)ವಿ. ಕೊಮಾರನಹಳ್ಳಿ ಸರ್ಕಾರಿ ಕಿಪ್ರಾ ಶಾಲೆಯಲ್ಲಿ-130.
    ದಾವಣಗೆರೆ ಉತ್ತರ: (ಮ.ಸಂ.24) ಕಲಪನಹಳ್ಳಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ 1155, (ಮ.ಸಂ.210)ದೃಶ್ಯಕಲಾ ಕಾಲೇಜು ಕೇಂದ್ರದಲ್ಲಿ 221.
    ದಾವಣಗೆರೆ ದಕ್ಷಿಣ: (ಮ.ಸಂ.185) ತುರ್ಚಘಟ್ಟದ ಸರ್ಕಾರಿ ಶಾಲೆಯಲ್ಲಿ 1163, (ಮ.ಸಂ.136)ದಾವಣಗೆರೆಯ ಪಂಚಾಯತ್‌ರಾಜ್ ಇಂಜಿನಿಯರಿಂಗ್‌ನ ಸಹಾಯಕ ಇಂಜಿನಿಯರ್ ಕಚೇರಿಯಲ್ಲಿ 196.
    ಹರಿಹರ: (205) ಮಲೇಬೆನ್ನೂರಿನ ಸರ್ಕಾರಿ ಪಪೂ ಕಾಲೇಜಲ್ಲಿ 1163, (ಮ.ಸಂ.228) ದಿಬ್ಬದಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ 171.
    ಹೊನ್ನಾಳಿ: (243) ಹುಣಸೇಘಟ್ಟ ಸರ್ಕಾರಿ ಹಿಪ್ರಾ ಶಾಲೆಯಲ್ಲಿ 1212, (214) ಸಾಲಬಾಳು ಸರ್ಕಾರಿ ಕಿಪ್ರಾ ಶಾಲೆಯಲ್ಲಿ 249.
    ಜಗಳೂರು: (114) ಕುರೇಮೇಗಳಗೆರೆ ಸರ್ಕಾರಿ ಹಿಪ್ರಾ ಶಾಲೆ 1095, (15) ಉದ್ದಬೋರನಹಳ್ಳಿ ಸರ್ಕಾರಿ ಶಾಲೆಯಲ್ಲಿ 123.
    ಮಾಯಕೊಂಡ: (10) ಕಿತ್ತೂರು ಸರ್ಕಾರಿ ಹಿ.ಪ್ರಾ.ಶಾಲೆ 1104, (162) ಎಚ್.ರಾಂಪುರದ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ 164.

    * ಸಖಿ ಮತಗಟ್ಟೆಗಳಲ್ಲಿ ಫಸ್ಟ್‌ಕ್ಲಾಸ್!
    ಜಗಳೂರು ಕ್ಷೇತ್ರದ (194) ಸಂತೆಪೇಟೆ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಶೇ.63.93, ಹರಿಹರ (111) ಬೆಳ್ಳೂಡಿ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಶೇ.85.89, ದಾವಣಗೆರೆ ಉತ್ತರ (136) ಕ್ಷೇತ್ರದ ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶೇ. 77.23, ದಾವಣಗೆರೆ ದಕ್ಷಿಣ (131) ಕ್ಷೇತ್ರದ ಡಿಆರ್‌ಆರ್ ಶಿಕ್ಷಣ ಟ್ರಸ್ಟ್‌ನಲ್ಲಿ ಶೇ.74.97, ಮಾಯಕೊಂಡ ಕ್ಷೇತ್ರದ (60) ಆನಗೋಡಿನ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಶೇ. 84.28, ಚನ್ನಗಿರಿ (34) ಕ್ಷೇತ್ರದ ಸಂತೆಬೆನ್ನೂರಿನ ಸರ್ಕಾರಿ ಪಪೂ ಕಾಲೇಜಿನಲ್ಲಿ ಶೇ.63.24, ಹೊನ್ನಾಳಿ ಕ್ಷೇತ್ರದ (84) ತಾಪಂ ಕಚೇರಿಯಲ್ಲಿ ಶೇ.74.84ರಷ್ಟು ಮತ ಚಲಾವಣೆಯಾಗಿದೆ.

    * ವಿಕಲಾಂಗರ ಸ್ಪಂದನೆ
    ಜಿಲ್ಲೆಯ ಏಳು ಕ್ಷೇತ್ರದಲ್ಲಿ ತಲಾ ಒಂದರಲ್ಲಿ ವಿಕಲಾಂಗಸ್ನೇಹಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಇದರಲ್ಲಿ ಸರಾಸರಿ ಶೇ.74.90ರಷ್ಟು ಮತದಾನವಾಗಿದೆ. ಹೊಸಕೆರೆ ಸರ್ಕಾರಿ (180) ಶಾಲೆಯಲ್ಲಿ ಶೇ.69.51, ಕೊಂಡಜ್ಜಿ ಗ್ರಾಪಂ (12) ಕಚೇರಿಯಲ್ಲಿ ಶೇ.82.67, ನಿಟ್ಟುವಳ್ಳಿ ಸರ್ಕಾರಿ (135) ಶಾಲೆಯಲ್ಲಿ ಶೇ.83.20, ಡಿಆರ್‌ಆರ್ ಶಿಕ್ಷಣ (130)ಟ್ರಸ್ಟ್‌ನಲ್ಲಿ ಶೇ.50.93, ಆಲೂರು ಸರ್ಕಾರಿ (61)ಶಾಲೆಯಲ್ಲಿ ಶೇ.81.64, ಸಂತೇಬೆನ್ನೂರಿನ ಎಸ್‌ಜೆವಿಪಿ (36) ಶಾಲೆಯಲ್ಲಿ ಶೇ.68.36, ಹೊನ್ನಾಳಿ ಕೃಷಿ ಇಲಾಖೆ ಕಚೇರಿ (74)ಯಲ್ಲಿ ಶೇ.81.85ರಷ್ಟು ಮತದಾನವಾಗಿದೆ.
    ಬಾಕ್ಸ್..
    ಥೀಮ್‌ಗೂ ಜೈ ಎಂದ ಮತದಾರ
    ಥೀಮ್ ಮತಗಟ್ಟೆಗಳ ಪೈಕಿ ಬೆಳ್ಳೂಡಿ (112)ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಶೇ.88.80, ಪಾಂಡೋಮಟ್ಟಿಯ (223) ಸರ್ಕಾರಿ ಶಾಲೆಯಲ್ಲಿ ಶೇ.82.82 ಮತ ಚಲಾವಣೆಯಾಗಿದೆ. ದಾವಣಗೆರೆಯ ಡಿಆರ್‌ಆರ್ ಶಿಕ್ಷಣ (132) ಟ್ರಸ್ಟ್‌ನಲ್ಲಿ ಶೇ.74.97ರಷ್ಟು ಮತ ಹಾಕಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts