More

    ದಲಿತರ ಸಮಸ್ಯೆ ಪರಿಹಾರಕ್ಕೆ ಒತ್ತಾಯ

    ಯರಗಟ್ಟಿ, ಬೆಳಗಾವಿ: ಕಡಬಿ ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಬೇಕಾಬಿಟ್ಟಿ ಹಣ ಕಿತ್ತುಕೊಳ್ಳುತ್ತಿದ್ದಾರೆ. ಅಲ್ಲದೆ ಬಡವರ ಜೀವಕ್ಕೆ ಕುತ್ತು ಬಂದಂತಾಗಿದೆ ಆದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

    ಪಟ್ಟಣದ ಅಂಬೇಡ್ಕರ್ ಕಾಲನಿಯ ಅಂಬೇಡ್ಕರ ಭವನದಲ್ಲಿ ಈಚೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದರಿಗಾಗಿ ಜರುಗಿದ ಕುಂದುಕೊರತೆ ಸಭೆಯಲ್ಲಿ ಒತ್ತಾಯಿಸಿದರು.

    ಯರಗಟ್ಟಿ, ಕೋಟೂರು, ರೈನಾಪುರ ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ಜಗಜೀವನರಾಮ್ ಹಾಗೂ ಅಂಬೇಡ್ಕರ್ ಸಮುದಾಯ ಭವನ ಪೂರ್ಣಗೊಳಿಸಬೇಕು. ರೈನಾಪುರ ಗ್ರಾಮದ ಅಂಬೇಡ್ಕರ್ ಕಾಲನಿಯಲ್ಲಿ ಚರಂಡಿ ಸಮಸ್ಯೆ ಪರಿಹರಿಸಬೇಕು. ಯರಗಟ್ಟಿಯ ಕುಮಾಣಮಡ್ಡಿ ಪ್ರದೇಶದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು. ಮುರಗೋಡದ ಅಂಬೇಡ್ಕರ್ ಶಾಲೆಯ ಭೂ ಸಮಸ್ಯೆ ಬಗೆಹರಿಸಬೇಕು, ಸತ್ತಿಗೇರಿ ಗ್ರಾಮದ ಎಸ್‌ಸಿ ಕಾಲನಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಕೋಟೂರು, ಸೊಪ್ಪಡ್ಲ ಗ್ರಾಮದಲ್ಲಿ ದಲಿತ ಸಮುದಾಯದ ಜನರಿಗೆ ಸ್ಮಶಾನ ಜಾಗ ಗುರುತಿಸಬೇಕು ಎಂದು ಒತ್ತಾಯಿಸಿದರು.

    ತಹಸೀಲ್ದಾರ್ ಎಂ.ಎನ್.ಮಠದ ಮಾತನಾಡಿ, ಕೋಟೂರು ಮತ್ತು ಸೊಪ್ಪಡ್ಲ ಗ್ರಾಮದ ದಲಿತ ಸಮುದಾಯದ ಜನರಿಗೆ ಸ್ಮಶಾನ ಜಾಗ ಗುರುತಿಸುವ ಅರ್ಜಿಗಳು ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲನೆ ನಡೆದಿವೆ. ಅತಿ ಶೀಘ್ರ ಜಾಗ ಗುರುತಿಸಿ ಬೇಲಿ ನಿರ್ಮಿಸಲಾಗುವುದು ಎಂದರು.

    ಡಿಸಿಆರ್‌ಇಎಸ್‌ಪಿ ರಾಜು ಎಂ. ಮಾತನಾಡಿ, ಪಜಾ, ಪಪಂ ಜನಾಂಗ ಸಮಸ್ಯೆ ಕುರಿತು ಮನವಿ ಸಲ್ಲಿಸಿ, ನಂತರ ಪರಿಹಾರ ದೊರೆಯದೆ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ, ಖಂಡಿತವಾಗಿ ಅವುಗಳನ್ನು ಬಗೆಹರಿಸುತ್ತೇವೆ ಎಂದರು. ಡಿವೈಎಸ್‌ಪಿ ಜೆ.ಆರ್.ನಿಕಂ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಧರೇಂದ್ರ ಶಿಂಧೆ, ಡಾ.ಮಹೇಶ ಚಿತ್ತರಗಿ, ಕಾಂಚನಾ ಅಮಠೆ, ಶ್ರೀಶೈಲ ಅಕ್ಕಿ, ಬಿ.ಬಿ.ಗೊರೋಶಿ, ಹನುಮಂತ ತಳವಾರ, ಡಾ.ಎಂ.ವಿ.ಪಾಟೀಲ, ಎನ್.ಆರ್.ದೊಡ್ಡಮನಿ, ವಿವಿಧ ಇಲಾಖೆ ಅಧಿಕಾರಿಗಳು ದಲಿತ ಸಂಘಟನೆ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts