More

    ತೋಂಟದಾರ್ಯ ಮಠದ ರಥೋತ್ಸವ

    ಶಿರೋಳ: ನರಗುಂದ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ರಥೋತ್ಸವ ಬುಧವಾರ ಸಂಜೆ 5.30 ಗಂಟೆಗೆ ಅದ್ದೂರಿಯಿಂದ ನೆರವೇರಿತು.

    ಶ್ರೀ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಗುರುಬಸವ ಮಹಾಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಶಾಂತಲಿಂಗ ಮಹಾಸ್ವಾಮೀಜಿ, ಅಪ್ಪಯ್ಯ ಹೀರೆಮಠ, ವೀರಯ್ಯ ಹೀರೆಮಠ, ರುದ್ರಯ್ಯ ಹೀರೆಮಠ, ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ, 2020ನೇ ಜಾತ್ರಾ ಮಹೂತ್ಸವ ಅಧ್ಯಕ್ಷ ಗುರುಬಸಯ್ಯ ನಾಗಲೋಟಿಮಠ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಶೆಲ್ಲಿಕೇರಿ, ಕಾರ್ಯದರ್ಶಿ ಶ್ರೀಧರ ಶೀಪ್ರಿ, ಸಹಕಾರ್ಯದರ್ಶಿ ಶರಣಪ್ಪ ಕುರುವಿನಶೆಟ್ಟಿ, ಶಿರೋಳ ತೋಂಟದಾರ್ಯ ಮಠದ ಭಕ್ತರು ಭಾಗವಹಿಸಿದ್ದರು.

    ಎಡೆಯೂರು ತೋಂಟದ ಸಿದ್ಧಲಿಂಗಸ್ವಾಮಿಗಳ ಪಲ್ಲಕ್ಕಿ ಉತ್ಸವ, ಕಲ್ಮೇಶ್ವರ ಯುವಕ ಮಂಡಳದ ನಂದಿಕೋಲಿನ ಸೇವೆ, ಬಸವೇಶ್ವರ ಯವಕ ಮಂಡಳದ ಕರಡಿ ಮೇಳದ ಸೇವೆ, ಬೀರಲಿಂಗೇಶ್ವರ ಯುವಕ ಮಂಡಳದ ಡೊಳ್ಳಿನ ಮೇಳ ಹಾಗೂ ಜೋತಿಭಾ ಫುಲೆ ಯುವಕ ಮಂಡಳದ ಹಲಗಿ ಸೇವೆಗಳು ರಥೋತ್ಸವದ ಮೆರುಗು ಹೆಚ್ಚಿಸಿದವು.

    ಪುರಾಣ ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ ಅವರು 15 ದಿನಗಳಿಂದ ನಡೆಸಿಕೊಂಡು ಬಂದ ಸದ್ಗುರು ಶ್ರೀ ಸಿದ್ಧಾರೂಢ ಚರಿತಾಮೃತ ಪುರಾಣ ಪ್ರವಚನ ಮಂಗಲವಾಯಿತು.

    ಶ್ರೀಗಳ ಪುತ್ಥಳಿ ಅನಾವರಣ

    ಶಿರೋಳ ಗ್ರಾಮದ ತೋಂಟದಾರ್ಯ ಮಠದಲ್ಲಿ ತ್ರಿವಿಧ ದಾಸೋಹಿ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಪುತ್ಥಳಿಯನ್ನು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಅನಾವರಣಗೊಳಿಸಿದರು.

    ಶಿರೋಳದ ಗುರು ಬಸವ ಮಹಾಸ್ವಾಮೀಜಿ, ಭೈರಣಹಟ್ಟಿಯ ಶಾಂತಲಿಂಗ ಮಹಾಸ್ವಾಮೀಜಿ, ಅಪ್ಪಯ್ಯ ಹೀರೆಮಠ, ವೀರಯ್ಯ ಹೀರೆಮಠ, ರುದ್ರಯ್ಯ ಹೀರೆಮಠ, ಪುರಾಣ ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ, 2020ನೇ ತೋಂಟದಾರ್ಯ ಜಾತ್ರಾ ಮಹೂತ್ಸವದ ಅಧ್ಯಕ್ಷ ಗುರುಬಸಯ್ಯ ನಾಗಲೋಟಿಮಠ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಶೆಲ್ಲಿಕೇರಿ, ಕಾರ್ಯದರ್ಶಿ ಶ್ರೀಧರ ಶೀಪ್ರಿ, ಸಹಕಾರ್ಯದರ್ಶಿ ಶರಣಪ್ಪ ಕುರುವಿನಶೆಟ್ಟಿ, ಶಿರೋಳ ತೋಂಟದಾರ್ಯ ಮಠದ ಭಕ್ತರು ಇದ್ದರು.

    ಮಹಾಪೂಜೆ, ರೊಟ್ಟಿ ಜಾತ್ರೆ ಇಂದು

    ಶಿರೋಳ: ಸ್ಥಳೀಯ ಔಷಧ ವರ್ತಕರ ಸಹಯೋಗಲ್ಲಿ 16ರಂದು ಬೆಳಗ್ಗೆ 10 ಗಂಟೆಗೆ ರಕ್ತದಾನ ಶಿಬಿರ, 11 ಗಂಟೆಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ, ಸಂಜೆ 5 ಗಂಟೆಗೆ ಮಹಾಪೂಜೆ (ಜಂಗಮೋತ್ಸವ), 7 ಗಂಟೆಗೆ ಸನ್ಮಾನ ಕಾರ್ಯಕ್ರಮ ಜರುಗುವುದು.

    ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಯಶ್ವಂತನಗರ ಗಂಗಾಧರ ಸ್ವಾಮೀಜಿ ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ತಹಸೀಲ್ದಾರ್ ಎ.ಎಚ್. ಮಹೇಂದ್ರ ಆಗಮಿಸುವರು. ಸಾಧಕರಿಗೆ ಸತ್ಕಾರ, ಸಂಜೆ ಪ್ರಸಿದ್ಧ ರೊಟ್ಟಿ ಜಾತ್ರೆ ಜರುಗಲಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts