More

    ತಾಳಗುಪ್ಪ ರೈಲಿಗೆ ಕೆಳದಿ ಚನ್ನಮ್ಮನ ನಾಮಕರಣ

    ರಿಪ್ಪನ್​ಪೇಟೆ: ಬೆಂಗಳೂರು- ತಾಳಗುಪ್ಪ ಎಕ್ಸ್​ಪ್ರೆಸ್ ರೈಲಿಗೆ ಕೆಳದಿ ರಾಣಿ ಚನ್ನಮ್ಮಾಜಿ ಎಕ್ಸ್​ಪ್ರೆಸ್ ಎಂದು ಹೆಸರಿಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

    ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಮಂಗಳವಾರ ಧನುರ್ವಸದ ಶಿವಪೂಜಾ ಅನುಷ್ಠಾನ ಮುಕ್ತಾಯ, ಶಿವಲಿಂಗಶ್ರೀ ಪ್ರಶಸ್ತಿ ಪ್ರದಾನ ಮತ್ತು ಶಾಶ್ವತ ಮುತೆôದೆತನಕ್ಕಾಗಿ ಭಕ್ತ ದಂಪತಿಗಳಿಂದ ಮಾಂಗಲ್ಯ ಪೂಜೆ ಹಾಗೂ ಧಾರ್ವಿುಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

    ಸ್ವಾತಂತ್ರ್ಯ ಪೂರ್ವದಲ್ಲಿ ಮಲೆನಾಡಿನ ಐದು ಜಿಲ್ಲೆಗಳಲ್ಲಿ ನೂರಾರು ವರ್ಷ ಆಳ್ವಿಕೆ ಮಾಡಿದ ಕೆಳದಿ ರಾಜವಂಶದ ಹೆಸರಾಂತ ರಾಣಿ ಚನ್ನಮ್ಮನ ಹೆಸರಿಡಲು ಈಗಾಗಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

    ವೀರಶೈವ ಎಂಬುದು ಧರ್ಮವೇ ವಿನಃ ಅದು ಜಾತಿಯಲ್ಲ. ವೀರಶೈವ ಮಠಗಳು ಅನಾದಿ ಕಾಲದಿಂದಲೂ ಧರ್ವಚರಣೆ, ಸಂಸ್ಕೃತಿ, ಶಿಕ್ಷಣ, ಕಾಯಕ, ದಾಸೋಹ ಕಾರ್ಯಗಳನ್ನು ನಿರಂತರ ನಡೆಸಿಕೊಂಡು ಬರುತ್ತಿವೆ. ಇಂದಿನ ಸರ್ಕಾರಗಳು ಇಂತಹ ಕಾರ್ಯಕ್ರಮಗಳನ್ನೇ ಮುಂದುವರಿಸುತ್ತಿವೆ ಎಂದು ಹೇಳಿದರು.

    2020ನೇ ಸಾಲಿನ ಶಿವಲಿಂಗ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಲೆದುರ್ಗ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಶಸ್ತಿ ಲಭಿಸಿರುವುದು ಸಾಮಾಜಿಕ, ಧಾರ್ವಿುಕ ಜವಾಬ್ದಾರಿಯನ್ನು ಹೆಚ್ಚುಮಾಡಿದೆ. ಪ್ರಶಸ್ತಿ ಪಡೆದ ನಾವು ಕವಲೆದುರ್ಗದ ಕೆಳದಿ ಸಂಸ್ಥಾನ ರಾಜಗುರು ಮಠದ ಅಭಿವೃದ್ಧಿ ಮಾಡುವುದು ನನ್ನ ಆದ್ಯ ಕರ್ತವ್ಯ. ಈ ಮಠ ನಮ್ಮನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬೆಳೆಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

    ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ರಟ್ಟೆಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ, ಜಡೆಮಠದ ಡಾ. ಮಹಂತ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರ ಶಾಂತಲಿಂಗ ಸ್ವಾಮೀಜಿ, ಶಾಸಕ ಆರಗ ಜ್ಞಾನೇಂದ್ರ, ಜಿಪಂ ಸದಸ್ಯರಾದ ಶರಧಿ ಪೂರ್ಣೆಶ, ಕಲಗೋಡು ರತ್ನಾಕರ, ಪತ್ರಕರ್ತ ಪ್ರಶಾಂತ ರಿಪ್ಪನ್​ಪೇಟೆ, ತಾಪಂ ಸದಸ್ಯರಾದ ಆಲುವಳ್ಳಿ ವೀರೇಶ, ಮಂಜುನಾಥ, ಚಂದ್ರಮೌಳಿ, ಸಾಗರ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಎಪಿಎಂಸಿ ಸದಸ್ಯ ಕೋಣಂದೂರು ಪ್ರಕಾಶ, ಸಿ.ಬಿ.ಈಶ್ವರ, ಹೊಸನಗರ ಎಪಿಎಂಸಿ ಅಧ್ಯಕ್ಷ ಈಶ್ವರಪ್ಪ ಹಾರೋಹಿತ್ತಲು ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts