More

    ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ

    ಸಾಗರ: ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಿದ ಘಟನೆ ಹಿಂದೆ ವಿಪಕ್ಷ ಕಾಂಗ್ರೆಸ್ ಕೈವಾಡವಿರುವ ಶಂಕೆ ಇದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸಾಗರ ಶಾಖೆ ಪದಾ„ಕಾರಿಗಳು ಉಪವಿಭಾಗಾ„ಕಾರಿ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಬಂಜಾರ, ಭೋವಿ ಸಮಾಜಕ್ಕೆ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಹೆಚ್ಚಿನ ಅನುದಾನ ನೀಡಿದ್ದಾರೆ. ಮನೆ ಮೇಲೆ ದಾಳಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದು ಅವರ ಔದಾರ್ಯತೆಗೆ ಸಾಕ್ಷಿ. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ವೀರಶೈವ ಸಮಾಜವನ್ನು ಕಡೆಗಣಿಸುತ್ತಿದೆ. ಇಂತಹ ಕುತಂತ್ರಗಳನ್ನು ಕಾಂಗ್ರೆಸ್ ಮುಂದುವರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಅಕ್ಷರ ಸಾಗರ ಸೌಹಾರ್ದ ಅಧ್ಯಕ್ಷ ದಿನೇಶ್ ಬರದವಳ್ಳಿ ಎಚ್ಚರಿಸಿದರು.
    ವೀರಶೈವ ಸಮಾಜದ ಮುಖಂಡ ಸತೀಶ್ ಗೌಡ ಅದರಂತೆ ಮಾತನಾಡಿ, ಕಲ್ಲು ತೂರಾಟ ಘಟನೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ಕೈವಾಡ ಇದೆ ಎಂಬ ಚರ್ಚೆ ನಡೆಯುತ್ತಿದೆ. ಕಲ್ಲು ತೂರಾಟ ನಡೆಸಿದ ಮತ್ತು ಪ್ರೇರಣೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ವಕೀಲ ಕೆ.ವಿ.ಪ್ರವೀಣ್ ಮಾತನಾಡಿ, ಕೃತ್ಯಕ್ಕೆ ಕಾರಣವಾದವರನ್ನು ಯಾವ ಕಾರಣಕ್ಕೂ ಪೆÇಲೀಸ್ ಇಲಾಖೆ ಬಿಡಬಾರದು. ಸುಮೋಟೊ ಕೇಸ್ ದಾಖಲಿಸಿ ತಪ್ಪಿತಸ್ಥರನ್ನು ಬಂ„ಸಬೇಕು ಎಂದು ಆಗ್ರಹಿಸಿದರು.
    ಶೇಖರಪ್ಪ ಗೌಡ, ವೀರಭದ್ರಪ್ಪ, ಗುರು, ಮೈತ್ರಿ ಪಾಟೀಲ್, ವೀರೇಶ್, ಗಿರೀಶ್, ಕುಮಾರ ಗೌಡ, ಚಂದ್ರಶೇಖರ್, ಶಾಂತಪ್ಪ ಗೌಡ, ಬಿ.ಎಚ್.ಲಿಂಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts