More

    ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

    ಯಾದಗಿರಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೋರಾಟನಿರತ ಪುರುಷ ಹಾಗೂ ಕುಸ್ತಿ ಪಟುಗಳ ಹೋರಾಟವನ್ನು ಬೆಂಬಲಿಸುತ್ತಿದ್ದ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಪಡಿಸಿಕೊಂಡಿರುವುದನ್ನು ಖಂಡಿಸಿ ಇಲ್ಲಿನ ಸುಭಾಷ್ ವೃತ್ತದ ಬಳಿ ಅಖಿಲ ಭಾರತ ರೈತ ಕೃಷಿಕಾಮರ್ಿಕರ ಸಂಘಟನೆ (ಎಐಕೆಕೆಎಂಎಸ್), ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ಮತ್ತು ಆಲ್ ಇಂಡಿಯಾ ಯೂನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು.

    ಬೇಟಿ ಬಚಾವ್, ಬೇಟಿ ಪಡಾವ್ ಎಂದು ಹೇಳುವ ಪ್ರಧಾನ ಮಂತ್ರಿಗಳು ದಿಲ್ಲಿಯಲ್ಲೇ ಹಲವು ತಿಂಗಳಿಂದ ಹೋರಾಟ ಮಾಡುತ್ತಿರುವ ಮಹಿಳಾ ಕುಸ್ತಿ ಪಟುಗಳ ಅಹವಾಲನ್ನು ಕೇಳದೆ, ತಮ್ಮ ಸಂಸದ ಹಾಗು ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಚರಣಸಿಗ್ ರಕ್ಷಣೆಗೆ ನಿಂತಿರುವುದು ಖಂಡನೀಯ. ಈ ಮಹಿಳಾ ಹೋರಾಟವನ್ನು ಬೆಂಬಲಿಸಿ ಭಾನುವಾರ ಮಹಾ ಪಂಚಾಯತ್ ನಡೆಯುತ್ತಿದ್ದ ಹೋರಾಟಕ್ಕೆ ಬೆಂಬಲಿಸಿದ್ದ ನಮ್ಮ ಸಂಘಟನೆ ಮುಖಂಡರನ್ನು ಬಂಸಿದ್ದು ಅಪ್ರಜತಾಂತ್ರಿಂಕ. ಅಷ್ಟೇ ಅಲ್ಲದೆ ಹೋರಾಟವನ್ನು ಶಮನ ಮಾಡುವ ಕುತಂತ್ರವಾಗಿದೆ ಎಂದು ದೂರಿದರು ಎಂದು ಸಂಘಟನೆ ಪ್ರಮುಖರು ಆರೋಪಿಸಿದರು.

    ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಇಂದು ಎಲ್ಲ ಕ್ಷೇತ್ರವನ್ನು ವ್ಯಾಪಿಸಿಕೊಂಡಿದೆ. ದೇಶಕ್ಕೆ ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಿರುವ ಹೆಮ್ಮೆಯ ಮಹಿಳಾ ಕುಸ್ತಿ ಪಟುಗಳಿಗೆ ಈ ಗತಿಯಾದರೆ ಇನ್ನು ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು. ತಮ್ಮ ಬೇಡಿಕೆ ಈಡೇರಿಕೆಗೆ ಕಟಿಬದ್ಧವಾಗಿ ಹೋರಾಟ ಮಾಡುತ್ತಿರು ಕೆಚ್ಚೆದೆಯ ಮಹಿಳೆಯ ಜತೆ ಇಡೀ ದೇಶವೇ ಬೆಂಬಲ ನೀಡಿದ್ದು ಸಕರ್ಾರ ಎಚ್ಚೆತ್ತು ಆರೋಪಿ ಮೆಲೆ ಶಿಶ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಮಹಿಳಾ ಕುಸ್ತಿ ಪಟುಗಳ ಮೇಲೆ ಸಕರ್ಾರ ನಡೆಸಿದ ಪೊಲೀಸ್ ದೌರ್ಜನ್ಯ ಅತ್ಯಂತ ಖಂಡನೀಯ. ಪದಕ ಗೆದ್ದಾಗ ಶುಭಕೋರಿ ಪ್ರಚಾರ ಗಿಟ್ಟಿಸಿಕೊಂಡ ಪ್ರಧಾನ ಮಂತ್ರಿಗಳು ಇಂದು ಪ್ರಜಾಪ್ರಭುತ್ವದ ಹೆಬ್ಬಾಗಿಲು ಎಂದು ಹೇಳಿ ಹೊಸ ಸಂಸತ್ ಭವನ ಉದ್ಘಾಟಿಸುವಲ್ಲಿ ಇರುವ ಉತ್ಸಾಹ ಕುಸ್ತಿ ಪಟುಗಳ ಬೇಡಿಕೆಗಳನ್ನು ಆಲಿಸುವಲ್ಲಿ ಇರದೇ ಇರುವುದು ವಿಷಾದನೀಯ ಎಂದು ಅಸಮಧಾನ ವ್ಯಕ್ತಪಡಿಸಿದರು.

    ಮುಖಂಡರಾದ ಜಮಾಲ್ ಸಾಬ್, ಡಿ.ಉಮಾದೇವಿ, ಶಿಲ್ಪಾ ಬಿ.ಕೆ., ಸುಭಾಷಚಂದ್ರ ಬಾವನೋರ್, ಭೀಮರಡ್ಡಿ ಹಿರೆಬಾನರ್, ರಾಮಲಿಂಗಪ್ಪ ಬಿ.ಎನ್., ರವಿ ಬಳ್ಳುಳ್ಳಿ, ಶ್ರೀಕಾಂತ್ ಚಿಕ್ಕಮೇಟಿ, ಯಲ್ಲೇಶ್, ಸಾಬರಡ್ಡಿ, ಸೈಯ್ಯದ್ ಆಫ್ರೀದಿ, ಸಿಂಧು, ಈರಮ್ಮ ಸ್ವಾಮಿ, ಮಲ್ಲಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts