More

    ತಂಬಾಕು ರಹಿತ ದಿನಾಚರಣೆ- ತಂಬಾಕು ಸೇವನೆಯಿಂದ ದೇಶದಲ್ಲಿ ವಾರ್ಷಿಕ 14 ಲಕ್ಷ ಸಾವು

    ದಾವಣಗೆರೆ: ಮಾರಣಾಂತಿಕ ದುಶ್ಚಟಗಳಾದ ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಭಾರತದಲ್ಲಿ ವಾರ್ಷಿಕ ಸುಮಾರು 14 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ವಾಗ್ಮಿ ಎಚ್.ಬಿ. ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹೊನ್ನಾಳಿ ತಾಲೂಕಿನ ಎಚ್.ಕಡದಕಟ್ಟೆಯ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಾಡಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಹೆಚ್ಚಿನ ಸಾವು
    ಯುವಕರು ಮತ್ತು ಮಧ್ಯ ವಯಸ್ಕರಲ್ಲಿ ಸಂಭವಿಸುತ್ತಿದೆ ಎಂದರು.
    ನಮ್ಮ ದೇಶದಲ್ಲಿ ಸುಮಾರು 27 ಕೋಟಿಯಷ್ಟು ಮಂದಿ ಧೂಮಪಾನ, ಗುಟ್ಕಾ, ಜರ್ದಾ ಮುಂತಾದ ಬಗೆಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದು ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್, ಹೃದಯಬೇನೆ, ಪಾರ್ಶ್ವವಾಯು, ದ್ವಿತೀಯ ಬಗೆಯ ಮಧುಮೇಹ ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.
    ಬೀಡಿ ಸಿಗರೇಟಿನ ಹೊಗೆಯಲ್ಲಿ ಏಳು ಸಾವಿರ ಬಗೆಯ ವಿಷಕಾರಿ ರಾಸಾಯನಿಕಗಳ ಮಿಶ್ರಣವಿದ್ದು ತಂಬಾಕಿನ ನಿಕೋಟಿನ್ ಚಟ ಹುಟ್ಟಿಸುವ ವಿಷವಾಗಿದೆ. ಇದು ದೇಹವನ್ನು ಪ್ರವೇಶಿಸಿದಾಗ ಹೃದಯದ ಆಮ್ಲಜನಕ ಬಳಕೆ ಹೆಚ್ಚಾಗುತ್ತದೆ ಇದರಿಂದಾಗಿ ತಾತ್ಕಾಲಿಕ ಆರಾಮದ ಅನುಭವವಾಗುತ್ತದೆ, ಆದರೆ ಹೊಗೆ ಶ್ವಾಸಕೋಶ ಸೇರಿ ಅಪಾಯಕಾರಿ ಜೀವಕೋಶಗಳನ್ನು ವೃದ್ಧಿ ಮಾಡುವುದಲ್ಲದೆ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
    ಧೂಮಪಾನ, ತಂಬಾಕು ಗುಟ್ಕಾ ಸೇವನೆಯಿಂದಾಗಿ ಮಿದುಳಿನ ರಕ್ತನಾಳಗಳ ಒಡೆಯುವಿಕೆಯುಂಟಾಗಿ ಪಾಶ್ವ ವಾಯು ಉಂಟಾಗುವ ಸಂಭವವಿರುತ್ತದೆ, ಹೃದಯಬೇನೆ ಹಾಗೂ ಅಸ್ತಮಾಕ್ಕೂ ಕಾರಣವಾಗಬಹುದು, ಆದ್ದರಿಂದಲೇ “ಧೂಮಪಾನ ಹಾಗೂ ತಂಬಾಕು ಸೇವನೆಯು ಆತ್ಮಹತ್ಯೆಯ ಕಂತುಗಳಿದ್ದಂತೆ” ಎಂದು ವೈದ್ಯಕೀಯ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ ಎಂದು ಹೇಳಿದರು.
    ವಿಶ್ವದಲ್ಲಿ ವಾರ್ಷಿಕ ಸುಮಾರು 35 ಲಕ್ಷ ಎಕರೆ ಭೂಮಿ ತಂಬಾಕು ಬೆಳೆಗಾಗಿ ವಿಸ್ತರಣೆ ಆಗುತ್ತಿದ್ದು ಇದರಿಂದಾಗಿ ವಾರ್ಷಿಕ ಸುಮಾರು ಐದು ಲಕ್ಷ ಹೆಕ್ಟೇರ್ ನಷ್ಟು ಅರಣ್ಯವೂ ನಾಶವಾಗುತ್ತಿದೆ, ಇದು ಆಹಾರ ಉತ್ಪಾದನೆಯನ್ನು ಸಹ ಕುಂಠಿತಗೊಳಿಸುತ್ತಿದೆ. ಈ ಕಾರಣಕ್ಕಾಗಿ ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆಯ ಘೋಷ ವಾಕ್ಯವು “ನಮಗೆ ಆಹಾರ ಬೇಕು, ತಂಬಾಕು ಬೇಡ” ಎಂಬುದಾಗಿದೆ ಎಂದು ತಿಳಿಸಿದರು.
    ಪ್ರಾಸ್ತಾವಿಕ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎಚ್. ಬಾಬು, ದುಶ್ಚಟಗಳನ್ನು ಬಿಡಲು ದೃಢಸಂಕಲ್ಪ ಬೇಕು. ದುರಭ್ಯಾಸಗಳಿಂದ ದೂರವಿರಬೇಕು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು ಎಂದರು.
    ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಿ.ಎಲ್. ಕುಮಾರಸ್ವಾಮಿ ಮಾತನಾಡಿ ಸರ್ಕಾರಗಳು ಸರಿಯಾದ ಅಭಿವೃದ್ಧಿ ಪೂರಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಲ್ಲಿ ಮಾತ್ರ ಉತ್ತಮ ಭವಿಷ್ಯ ಸಾಧ್ಯ ಎಂದರು.
    ಪ್ರಾಚಾರ್ಯ ಎಸ್. ವಸಂತ್ ಕಾರ್ಯಕ್ರಮ ಉದ್ಘಾಟಿಸಿದರು.
    ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಸುರೇಶ ಹೊಸಕೇರಿ, ಸದಸ್ಯರಾದ ನಾಗರಾಜ್ ಕತ್ತಿಗೆ, ರುದ್ರೇಶ್ ಜಿ.ವಿ, ನಟರಾಜ್ ಎಂ. ಯು, ಲಿಂಗರಾಜ, ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿನ ಬಸವರಾಜ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts