More

    ಡಿಎಚ್​ಓ ವರ್ಸಸ್​ ಡಿಎಎಂ, ಇಬ್ಬರ ಜಗರಳದಲ್ಲಿ ಬಡವಾದ ಎನ್​ಎಚ್​ಎಂ ಸಿಬ್ಬಂದಿ

    ಶಿವಾನಂದ ಹಿರೇಮಠ ಗದಗ
    ಜಿಲ್ಲಾ ಆರೋಗ್ಯಾಧಿಕಾರಿ(ಡಿಎಚ್​ಓ) ಮೇಲೆ ಆರೋಗ್ಯ ಇಲಾಖೆಯ ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಮಹಿಳಾ ಅಧಿಕಾರಿ(ಡಿಎಎಂ) ಮಾನಸಿಕ ದೌರ್ಜನ್ಯ ದೂರು ದಾಖಲಿಸಿದ್ದು, ಜಿಲ್ಲಾಡಳಿತದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಡಿಎಎಂ ಅಧಿಕಾರಿ ದೂರಿನ ಆಧಾರದಲ್ಲಿ ಜಿಪಂ ಸಿಇಓ ಸಶೀಲಾ ಬಿ ದೂರು ಕುರಿತು ತನಿಖೆ ನಡೆಸುವಂತೆ “ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಜಿಲ್ಲಾ ಸಮಿತಿಗೆ’ ಶಿಾರಸ್ಸು ಮಾಡಿದ್ದಾರೆ. ಈ ಆರೋಪವನ್ನು ಡಿಎಚ್​ಓ ತಳ್ಳಿ ಹಾಕಿದ್ದಾರೆ. ಎನ್​ಎಚ್​ಎಂ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಡಿಎಎಂ ಅಧಿಕಾರಿಯ ಅನುಮತಿ ಅಗತ್ಯವಿದೆ. ಅನುಮತಿ ನೀಡಲು ವಿಳಂಬ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಈ ಹೀಗೆ ಆರೋಪಿಸಿದ್ದಾರೆ ಎಂದು ಡಿಎಚ್​ಓ ಹೇಳುತ್ತಾರೆ. ಆರೋಪ ಪ್ರತ್ಯಾರೋಪಗಳ ನಡುವೆ ಜಿಲ್ಲೆಯಲ್ಲಿ 470ಕ್ಕೂ ಅಧಿಕ ಇರುವ ಎನ್​ಎಚ್​ಎಂ ಸಿಬ್ಬಂದಿಗಳು ವೇತನದಿಂದ ವಂಚಿತರಾಗುತ್ತಿದ್ದಾರೆ. ಪ್ರಕರಣ ಕುರಿತು ಡಿಎಎಂ ಮಹಿಳಾ ಅಧಿಕಾರಿಯನ್ನು ವಿಜಯವಾಣಿ ಸಂಪಕಿರ್ಸಿದೆ. ಮಾಹಿತಿ ನೀಡಲು ಮಹಿಳಾ ಅಧಿಕಾರಿ ಹಿಂದೇಟು ಹಾಕಿದರು.


    ಏನಿದು ಪ್ರಕರಣ?
    ಕಳೆದ ಏಪ್ರಿಲ್​ 21 ರಂದು ಮಹಿಳಾ ಅಧಿಕಾರಿ ಡಿಎಚ್​ಓ ಮೇಲೆ ಮಾನಸಿಕ ಹಿಂಸೆ ಮತ್ತು ದೌರ್ಜನ್ಯದ ಆರೋಪ ಮಾಡಿ ಜಿಪಂ ಸಿಇಒಗೆ ಪತ್ರ ಬರೆದಿದ್ದರು. ಆಡಳಿತಾತ್ಮ ವಿಷಯದಲ್ಲಿ ಅವಾಚ್ಯ ಶಬ್ದಗಳ ನಿಂಧನೆ ಮತ್ತು ದೌರ್ಜನ್ಯ ಎಸಗುತ್ತಾರೆ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ನಮೂದಿಸಿದ್ದಾರೆ. ಪ್ರಕರಣ ಕುರಿತು ಜಿಲ್ಲಾ ಪಂಚಾಯತ್​ ಸಚಿವಾಲಯಕ್ಕೂ ಪ್ರಾಥಮಿಕ ಮಾಹಿತಿ ನೀಡಿದ್ದು, ಸಚಿವಾಲಯ ತನಿಖೆ ನಡಸಲಿದೆ ಎಂದು ಇಲಾಖೆ ಮೂಲಗಳ ತಿಳಿಸಿವೆ.

    ಸಿಇಓ ಪತ್ರದಲ್ಲಿ ಏನಿದೆ?
    ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಜಗದೀಶ್​ ನುಚ್ಚಿನ್​ ಅವರು ಅವಾಚ್ಯ ಶಬ್ದಗಳಿಗೆ ಬೈದು ನನಗೆ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ಅದೇ ಇಲಾಖೆಯ ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕಿ ಅಧಿಕಾರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಕುರಿತು ಕುಲಂಕೂಶವಾಗಿ ಪರಿಶೀಲನೆ ನಡೆಸಿ ಕಾರ್ಯಾಲಯಕ್ಕೆ ವರದಿ ಸಲ್ಲಿಸುವಂತೆ ಲೈಂಗಿಕ ದೌರ್ಜನ್ಯ ತಡೆ ಜಿಲ್ಲಾ ಮಟ್ಟದ ಸ್ಥಳಿಯ ಸಮಿತಿಗೆ ಸಿಇಓ ಆದೇಶಿಸಿದ್ದಾರೆ.

    ಬಾಕ್ಸ್​:
    ಇಬ್ಬರ ಜಗಳದಲ್ಲಿ ಕುಸು ಬಡವಾದಂತೆ ಜಿಲ್ಲೆಯ ಎನ್​ಎಚ್​ಎಂ ಸಿಬ್ಬಂದಿಗಳು ಬಡವಾಗುತ್ತಿದ್ದಾರೆ. ವೇತನ ಸಿಗದ ಹಿನ್ನೆಲೆ ಸಾಲದ ಸೂಲಕ್ಕೆ ಒಳಗಾಗುತ್ತಿದ್ದಾರೆ. ಡಿಎಚ್​ಓ, ಡಿಎಎಂ ನಡುವಿನ ಆರೋಪ ಪ್ರತ್ಯಾರೋಪ ನಡುವೆ ಎನ್​ಎಚ್​ಎಂ ಸಿಬ್ಬಂದಿಗಳಿಗೆ ನ್ಯಾದ ದೊರಕಬೇಕಿದ್ದು, ನೂತನ ಕಾಂಗ್ರೆಸ್​ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ.

    ಎನ್​ಎಚ್​ಎಂ ಸಿಬ್ಬಂದಿಗಳ ವಾದ:

    • ಎನ್​ಎಚ್​ಎಂ ಸಿಬ್ಬಂದಿಗಳ ವೇತನಕ್ಕಾಗಿ ಡಿಎಎಂ ಅಧಿಕಾರಿ ಉದ್ದೇಶಪೂರ್ವಕ ಅನುಮತಿ ನೀಡುತ್ತಿಲ್ಲ.
    • ಗುತ್ತಿಗೆ ಆಧಾರದ ಸಿಬ್ಬಂದಿಗಳಾಗಿರುವ ಎನ್​ಎಚ್​ಎಂ ಸಿಬ್ಬಂದಿಯ 1.40 ಕೋಟಿ ವೇತನ ಸರ್ಕಾರಕ್ಕೆ ಮರಳಿ ಹೋಗಿದೆ.
    • ವೇತನ ಬಿಡುಗಡೆ ಮಾಡುವಂತೆ ಡಿಎಚ್​ಓ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.
    • ತರಾಟೆ ತೆಗೆದುಕೊಂಡಿದ್ದರಿಂದ ಡಿಎಎಂ ಅಧಿಕಾರಿ ಡಿಎಚ್​ಓ ಮೇಲೆ ಈ ರೀತಿಯ ದೂರು ದಾಖಲಿಸಿದ್ದಾರೆ.
    • ಕಳೆದ ಎರಡೂ ವರ್ಷಗಳಿಂದ ಡಿಎಎಂ ಅಧಿಕಾರಿ ಮೇಲೆ ಹಲವು ಭ್ರಷ್ಟಾಚಾರ ಆರೋಪಗಳಿದ್ದು ಆರೋಗ್ಯ ಇಲಾಖೆಯಿಂದ ಸಿಇಓಗೆ ಕಳೆದ ವರ್ಷವೂ ಪತ್ರ ಬರೆಯಲಾಗಿತ್ತು.

    ಕೋಟ್​:
    ಎನ್​ಎಚ್​ಎಂ ಸಿಬ್ಬಂದಿಗಳ ವೇತನ ಪಾವತಿ ಸೇರಿದಂತೆ ವಿವಿಧ ಆಡಳಿತಾತ್ಮಕ ವಿಷಯ ಕುರಿತು ಸಮರ್ಪಕ ಕರ್ತವ್ಯ ಪಾಲನೆ ಮಾಡುವಂತೆ ಡಿಎಎಂ ಅಧಿಕಾರಿಗೆ ಸೂಚಿಸಲಾಗಿತ್ತು. ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಇಲಾಖೆಯು ತನಿಕೆ ನಡೆಸಿ ವರದಿ ನೀಡಲಿದ್ದು ಸತ್ಯ ಬಹಿರಂಗಗೊಳ್ಳಲಿದೆ.
    – ಡಾ. ಜಗದೀಶ್​ ನುಚ್ಚಿನ, ಡಿಎಚ್​ಓ

    ಕೋಟ್​:
    ಮಹಿಳಾ ಅಧಿಕಾರಿ ದೂರು ನೀಡಿದ್ದಾರೆ. ಮೇಲಾಧಿಕಾರಿಗಳಿಗೂ ವಿಷಯ ತಿಳಿಸಲಾಗಿದೆ, ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು.
    – ಸುಶಿಲಾ ಬಿ, ಸಿಇಒ

    ಕೋಟ್​:
    ಡಿಎಎಂ ಮಹಿಳಾ ಅಧಿಕಾರಿ ಅನುಮತಿ ನೀಡದ ಕಾರಣ ಎನ್​ಎಚ್​ಎಂ ಸಿಬ್ಬಂದಿಗೆ ಪಾವತಿ ಆಗಬೇಕಿದ್ದ 1.40 ಕೋಟಿಗೂ ಅಧಿಕ ಮೊತ್ತ ಸರ್ಕಾರಕ್ಕೆ ಮರಳಿ ಹೋಗಿದೆ
    – ಹೆಸರು ಹೇಳಲು ಇಚ್ಚಿಸದ ಎನ್​ಎಚ್​ಎಂ ಸಿಬ್ಬಂದಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts