More

    ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

    ಅರಕಲಗೂಡು: ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಸಮ್ಮೇಳನವಾಗದೆ ಕನ್ನಡ ಸಂಸ್ಕೃತಿ, ಪರಂಪರೆ ವೈಭವ, ಮಾತೃಭಾಷೆ, ನೆಲ, ಜಲದ ಅಭಿಮಾನದ ಕಿಚ್ಚನ್ನು ಹುಟ್ಟುಹಾಕುವ ಸಮ್ಮೇಳನವಾಗಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

    ಪಟ್ಟಣದ ಕ್ರೀಡಾಂಗಣದಲ್ಲಿ ಮಾ.13, 14ರಂದು ನಡೆಯಲಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನ ಲಾಂಛನ (ಲೋಗೋ) ಬಿಡುಗಡೆ ಹಾಗೂ ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ ನೀಡಿದ ಬಳಿಕ ತಾಲೂಕಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಸಾಪ ಕನ್ನಡ ಭಾಷೆ, ಸಂಸಕ್ಕತಿ, ಪರಂಪರೆ, ನೆಲ, ಜಲ ಕಾಪಾಡುವ ಬಹುಮುಖ್ಯ ಪ್ರತಿನಿಧಿಕ ಸಂಸ್ಥೆಯಾಗಿದೆ. ಮನಸ್ಸನ್ನು ಒಂದುಗೂಡಿಸಲು, ಯಾವಾಗಲು ನಾವು ಜಾಗೃತರಾಗಲು ಬೆಂಬಲವಾಗಿ ಕಸಾಪ ನಿಂತಿದೆ ಎಂದರು.

    ವಿಶ್ವದಲ್ಲೇ ಹಾಸನ ಜಿಲ್ಲೆ ಶಿಲ್ಪಕಲೆಗೆ ಹೆಸರುವಾಸಿಯಾಗಿದ್ದು, ಅನೇಕ ಪ್ರವಾಸಿ ತಾಣಗಳಿವೆ. ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲೂ ಅನೇಕರು ರಾಜ್ಯ, ದೇಶಕ್ಕೆ ಮಾದರಿಯಾಗಿದ್ದಾರೆ. ಕಾದಂಬರಿಕಾರ ಅನಕೃ ಅವರನ್ನು ಕಾದಂಬರಿಯ ಸಾರ್ವಭೌಮ ಎಂದು ಅನೇಕ ದಿಗ್ಗಜರು ಹೇಳುತ್ತಾರೆ. ಹಾಗೆಯೇ ರುದ್ರಪಟ್ಟಣ ಅನೇಕ ಸಂಗೀತ ದಿಗ್ಗಜರನ್ನು ಕೊಡುಗೆಯಾಗಿ ನೀಡಿದೆ. ಈ ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts