More

    ಜಕಣಾಚಾರಿ ಜಯಂತಿ ಆದೇಶಕ್ಕೆ ಅಡ್ಡಿ

     ಕಲಬುರಗಿ: ಸರ್ಕಾರದಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಗೆ ನೀಡಿದರೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಡ್ಡಗಾಲು ಹಾಕಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಎಂಎಲ್ಸಿ ಕೆ.ಪಿ.ನಂಜುಂಡಿ ಬೇಸರ ವ್ಯಕ್ತಪಡಿಸಿದರು.
    ಕೋಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ ಹಾಗೂ ಕಲ್ಯಾಣ ಕರ್ನಾಟಕ ವಿಶ್ವಕರ್ಮ ಮಹಾಸಭಾ ವಿಭಾಗ ಮಟ್ಟದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಬೆಂಗಳೂರಿಗೆ ಹೋಗಿ ಮತ್ತೆ ಮುಖ್ಯಮಂತ್ರಿಗೆ ಭೇಟಿಯಾಗಿ ತಿಂಗಳೊಳಗೆ ಜಯಂತಿ ಆಚರಣೆ ಅಧಿಕೃತ ಆದೇಶ ಹೊರಡಿಸುವಂತೆ ಮನವಿ ಮಾಡುತ್ತೇನೆ. ಸರ್ಕಾರದಿಂದ ಮಾಡಲಿ ಅಥವಾ ಬಿಡಲಿ, ನಾವಂತೂ ಸಮಾಜದಿಂದ ಬೃಹತ್ ಪ್ರಮಾಣದಲ್ಲಿ ಮುಂದಿನ ವರ್ಷ ಜ.1ರಂದು ಆಚರಿಸುತ್ತೇವೆ ಎಂದು ಘೋಷಿಸಿದರು.
    ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂ. ನೀಡಬೇಕು ಎಂದು ಸಮಾಜದ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ ನಂಜುಂಡಿ, ರಾಜಕೀಯ ಶಕ್ತಿ ಇಲ್ಲದ್ದಕ್ಕೆ ಯಾರದೋ ಕಾಲು ಬೀಳುವಂಥ ಸ್ಥಿತಿ ವಿಶ್ವಕರ್ಮರಿಗೆ ಸೃಷ್ಟಿಯಾಗಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಉತ್ತರ ಕರ್ನಾಟಕದ ಆರು ಜನರು ಪೈಪೋಟಿಯಲ್ಲಿದ್ದು, ಅವರಲ್ಲಿ ಒಬ್ಬರನ್ನು ನೇಮಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದರು.
    ವಿಶ್ವಕರ್ಮ ಸಮಾಜದ ಏಕೈಕ ನಾಯಕ ಕೆ.ಪಿ. ನಂಜುಂಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಏಕದಂಡಗಿ ಮಠದ ಶ್ರೀ ಕುಮಾರ ಸ್ವಾಮೀಜಿ ಹಕ್ಕೊತ್ತಾಯ ಮಾಡಿದರು. ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಎಂ.ವೈ. ಪಾಟೀಲ್, ಬಿಜೆಪಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ ಇತರರು ನಂಜುಂಡಿ ಪರ ಬ್ಯಾಟ್ ಬೀಸಿದರು.
    ಆನೆಗುಂದಿ ಸಂಸ್ಥಾನದ ಶ್ರೀ ಗುರುನಾಥೇಂದ್ರ ಸ್ವಾಮೀಜಿ, ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ಶ್ರೀ ಅಜೇಂದ್ರ ಸ್ವಾಮೀಜಿ, ಕಲಬುರಗಿಯ ಶ್ರೀ ಸುರೇಂದ್ರ ಸ್ವಾಮೀಜಿ, ಯಾದಗಿರಿಯ ಶ್ರೀನಿವಾಸ ಸ್ವಾಮೀಜಿ, ಶ್ಯಾಡಲಗೇರಿಯ ಶ್ರೀ ಸೂರ್ಯನಾರಾಯಣ ಸ್ವಾಮೀಜಿ, ಅಫಲಜಪುರದ ಶ್ರೀ ಮೌನೇಶ್ವರ ಸ್ವಾಮೀಜಿ, ಸುಲೇಪೇಟದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಶ್ರೀ ಮೌನೇಶ್ವರ ಸ್ವಾಮೀಜಿ, ಶ್ರೀ ನಾಗಮೂರ್ತಿ ಸ್ವಾಮೀಜಿ, ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
    ಮಾಜಿ ಶಾಸಕರಾದ ಶಶೀಲ್ ನಮೋಶಿ, ವಾಲ್ಮೀಕಿ ನಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ ಸೀತನೂರ, ಪ್ರಮುಖರಾದ ಗುಂಡಪ್ಪ ಕೆ.ಎಂ., ಡಾ.ಬಿ.ಎಚ್. ಕೋಸಗಿ, ರಾಘವೇಂದ್ರ ಮೈಲಾಪುರ, ಬಾಬುರಾವ ವಿಶ್ವಕರ್ಮ, ದೇವಿಂದ್ರ ಸ್ವಾಮಿ, ಕುಪ್ಪಣ್ಣ ಪೋದ್ದಾರ, ಅಶೋಕ ಪೋದ್ದಾರ, ಚಿತ್ರಲೇಖಾ ಟೆಂಗಳಿಕರ್, ಸುಭಾಷ ಪಂಚಾಳ, ಬಸವರಾಜ ಪಂಚಾಳ, ಮನೋಹರ ಪೋದ್ದಾರ, ಅಮೃತ ವಿಶ್ವಕರ್ಮ, ಚಂದ್ರಶೇಖರ ಪತ್ತಾರ, ಆನಂದ ವಿಶ್ವಕರ್ಮ, ಬಸವರಾಜ ಪಂಚಾಳ, ಐ.ಸಿ. ಪಂಚಾಳ, ಕೇಶವ ಸಿತನೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts