More

    ಚಿರತೆ ಸೆರೆಗೆ ಕಾರ್ಯಾಚರಣೆ ಚುರುಕು

    ಮೈಸೂರು: ಮೇಟಗಳ್ಳಿಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಸಂಸ್ಥೆ ಆವರಣದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆಯನ್ನು ಗುರುವಾರ ಚುರುಕುಗೊಳಿಸಲಾಗಿದೆ.

    ಕಳೆದ ಕೆಲ ದಿನಗಳಿಂದ ಎರಡು ಮರಿಗಳೊಂದಿಗೆ ಚಿರತೆ ರಾತ್ರಿ ವೇಳೆ ಆರ್‌ಬಿಐ ಆವರಣದಲ್ಲಿ ಸಂಚಾರ ಮಾಡುತ್ತಿದೆ. ಇವುಗಳ ಚಲನವಲನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಆರ್‌ಬಿಐ ಸಿಬ್ಬಂದಿ, ವಸತಿ ಗೃಹದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸೆ.1ರಿಂದಲೇ ಕೇಂದ್ರೀಯ ವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ.

    ಈ ನಡುವೆ, ಅರಣ್ಯ ಇಲಾಖೆ ಸಿಬ್ಬಂದಿ ತಂಡ, ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದರೊಂದಿಗೆ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬೋನು ಇಡಲಾಗಿದೆ.
    ‘ಬೋನು ಇಟ್ಟು, ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯನ್ನೂ ನಡೆಸಲಾಗಿದೆ. ಅಲ್ಲಿರುವ ಪೊದೆಗಳಲ್ಲಿ ಶೋಧಿಸಲಾಗುತ್ತಿದೆ. ಇದು ಈ ವರೆಗೆ ಕಂಡುಬಂದಿಲ್ಲ ಎಂದು ಡಿಸಿಎಫ್ ಕೆ.ಕಮಲ ಕರಿಕಾಳನ್ ತಿಳಿಸಿದ್ದಾರೆ.

    ಸಾಮಾನ್ಯವಾಗಿ ಚಿರತೆ ರಾತ್ರಿ ವೇಳೆ ಓಡಾಡುವ ಪ್ರಾಣಿ. ಇದರಿಂದ ಅವುಗಳ ಸೆರೆ ಸಾಧ್ಯವಾಗಿಲ್ಲ. ಆದರೂ ಕಾರ್ಯಾಚರಣೆ ಮುಂದುವರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪಶುವೈದ್ಯರ ತಂಡವನ್ನು ಕಾಯ್ದಿರಿಸಲಾಗಿದೆ. ಚಿರತೆ ಕಂಡು ಬಂದರೆ ಅರಿವಳಿಕೆ ಮದ್ದು ನೀಡಿ, ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ‘ಕಳೆದ ಒಂದು ತಿಂಗಳಿಂದ ಮೂರು ಚಿರತೆಗಳು ರಾತ್ರಿ ವೇಳೆ ಆರ್‌ಬಿಐ ವಸತಿ ಗೃಹದಲ್ಲಿ ಕಾಣಿಸಿಕೊಳ್ಳುತ್ತಿದೆ. ಮನೆಯಿಂದ ಹೊರ ಬರಲು ಹೆದರಿಕೆ ಆಗುತ್ತಿದೆ. ಸಾಕುನಾಯಿಗಳನ್ನು ಬೇಟೆಯಾಡಿ ತಿನ್ನುತ್ತಿವೆ. ಚಿರತೆ ಜನರ ಮೇಲೆ ದಾಳಿ ಮಾಡಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts