More

    ಚಿತ್ರದುರ್ಗದ ಟ್ರಾಮಾ ಸೆಂಟರ್ ಮೇಲ್ದರ್ಜೆಗೆ

    ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆ ಟ್ರಾಮಾ ಕೇರ್ ಸೆಂಟರ್ ಲೆವೆಲ್ ಟು ಅನ್ನು ಅಫ್ ಗ್ರೇಡ್ ಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

    ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ರಾ.ಹೆ.ಗಳು ಹಾದು ಹೋಗಿರುವ ಈ ಜಿಲ್ಲೆಗೆ ಸುಸಜ್ಜಿತ ಟ್ರಾಮಾ ಸೆಂಟರ್ ಅವಶ್ಯವಿ ಈಗಾಗಲೇ ಇರುವ ಟ್ರಾಮಾ ಸೆಂಟರನ್ನು ಮೇಲ್ದಜೆಱಗೆ ಏರಿಸಲಾಗುವುದು. ಅಗತ್ಯ ಕಟ್ಟಡವನ್ನು ನಿಮಾಱಣ ಮಾಡುವುದಾಗಿ ಹೇಳಿದರು.

    ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ತಿಂಗಳಿಂದ‌ ಕೆಟ್ಟಿರುವ ಸಿಟಿ‌ ಸ್ಕ್ಯಾನ್ ರಿಪೇರಿಗೆ ಇವತ್ತೇ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುತ್ತೇನೆ. ರೆಡಿಯಾಲಿಜಿಸ್ಟ್ ಸೇರಿದಂತೆ ತಜ್ಞ ವೈದ್ಯರನ್ನು ನೇರ ನೇಮಕ ಮಾಡಿಕೊಳ್ಳಲಾಗುವುದು, ಈ ಮೊದಲ ಕೆಪಿಎಸ್ಸಿಯಿಂದ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿತ್ತು. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶೀಘ್ರ ರೆಡಿಯಾಲಿಜಿಸ್ಟ್  ಭತಿಱ ಜತೆಗೆ ಸಿಬ್ಬಂದಿ‌ ಕೊರತೆ‌ ನೀಗಿಸಲಾಗುವುದು.  ಚಿತ್ರದುರ್ಗ ಸರ್ಕಾರಿ‌ ಮೆಡಿಕಲ್ ಕಾಲೇಜು ‌ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

    ಬರಿಗಾಲಲ್ಲೆ ತೆರಳಿದ ಸಚಿವ: ಬರಿಗಾಲಲ್ಲಿ‌ ಭೋವಿ ಮಠಕ್ಕೆ ಕಾರನ್ನೇರಿ ಶ್ರೀ ಭೋವಿ ಮಠಕ್ಕೆ ತೆರಳಿದ ಸಚಿವರು. ಅಲ್ಲಿ ಶಿವ ಪೂಜೆ, ಉಪಹಾರ ಬಳಿಕ ಆಸ್ಪತ್ರೆಗೆ ಭೇಟಿ‌ ನೀಡಲಿದ್ದಾರೆ. ಆದರೆ ಸಚಿವರು ಮಠದಿಂದ ಬೆಳಗ್ಗೆ 9 ಗಂಟೆ ಬದಲು 11.12ಕ್ಕೆ ಆಗಮಿಸಿದ್ದು ಹತ್ತೇ ನಿಮಿಷದಲ್ಲಿ ಎರಡು  ಆಸ್ಪತ್ರೆ ಪರಿಶೀಲನೆ ಪೂರೈಸಿ ಚಳ್ಳಕೆರೆಗೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts