More

    ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ಅಧಿಸೂಚನೆ ಚುನಾವಣಾಧಿಕಾರಿಗಳ ನೇಮಕ

    ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ಜಿಲ್ಲಾಧಿಕಾರಿ ಆರ್.ಲತಾ ಅಧಿಸೂಚನೆ ಹೊರಡಿಸಿ, ವಾರ್ಡ್‌ವಾರು ಚುನಾವಣಾಧಿಕಾರಿಗಳನ್ನು ನೇಮಿಸಿದ್ದಾರೆ.
     01 ರಿಂದ 8 ವಾರ್ಡ್: ಚುನಾವಣಾಧಿಕಾರಿ ಕುಮಾರಸ್ವಾಮಿ (ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ಮೊ.ಸಂ. 9448999242) ಕಾರ್ಯನಿರ್ವಹಿಸಲಿದ್ದು ನಗರದಲ್ಲಿನ ಹಳೇ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಲೋಕೋಪಯೋಗಿ, ಬಂದರು ಮತ್ತು ಜಲಸಾರಿಗೆ ಇಲಾಖೆ, ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು.
    9 ರಿಂದ 16 ನೇ ವಾರ್ಡ್: ಚುನಾವಣಾಧಿಕಾರಿ ವಿ.ಶ್ರೀನಿವಾಸರೆಡ್ಡಿ (ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕರು, ಮೊ.ಸಂ. 9880307224) ಕಾರ್ಯನಿರ್ವಹಿಸಲಿದ್ದು ನಗರದ ಎಂ.ಜಿ.ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು.
    17 ರಿಂದ 24 ನೇ ವಾರ್ಡ್ : ಚುನಾವಣಾಧಿಕಾರಿಯಾಗಿ ಹರ್ಷವರ್ಧನ್ (ಚಿಕ್ಕಬಳ್ಳಾಪುರ ತಾಪಂ ಇಒ, ಮೊ.ಸಂ. 9480859105) ಕಾರ್ಯ ನಿರ್ವಹಿಸಲಿದ್ದು ಚಿಕ್ಕಬಳ್ಳಾಪುರ ನಗರಸಭಾ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು.
    25 ರಿಂದ 31 ನೇ ವಾರ್ಡ್ :  ಚುನಾವಣಾಧಿಕಾರಿಯಾಗಿ ಶಿವಕುಮಾರ್ (ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮೊ.ಸಂ. 9448143687) ಕಾರ್ಯನಿರ್ವಹಿಸಲಿದ್ದು ಚಿಕ್ಕಬಳ್ಳಾಪುರ ತಾಪಂ ಇಒ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು.
    ಚುನಾವಣಾ ವೇಳಾಪಟ್ಟಿ : ಚುನಾವಣೆಗೆ ಮಂಗಳವಾರ ಅಧಿಸೂಚನೆ ಹೊರಡಿಸಿದ್ದು ನಾಮಪತ್ರಗಳನ್ನು ಸಲ್ಲಿಸಲು ಜ.28 ಕೊನೇ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಜ.29, ಹಿಂಪಡೆಯಲು ಜ.31 ಅವಕಾಶವಿದೆ, ಫೆ.9, (ಬೆಳಗ್ಗೆ 7 ರಿಂದ ಸಂಜೆ 5)ಮತದಾನ ನಡೆಯಲಿದ್ದು, ಫೆ.11ಎಣಿಕೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts