More

    ಚಮ್ಮಕ್ ಚಲ್ಲೋ ಪುನರ್ ಮಿಲನ

    ಮ್ಮಕ್ ಚಲ್ಲೋ’ ಜೋಡಿ ಶಾರುಖ್ ಖಾನ್-ಕರೀನಾ ಕಪೂರ್ ಏಳು ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ. ‘ಅಶೋಕ’, ‘ಕಭಿ ಖುಷಿ ಕಭಿ ಘಮ್, ‘ಡಾನ್’, ‘ರಾ ಒನ್’ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ಈ ಜೋಡಿ, ‘ರಾ ಒನ್’ ಚಿತ್ರದ ಬಳಿಕ ಒಟ್ಟಾಗಿ ಸಿನಿಮಾ ಮಾಡಿರಲಿಲ್ಲ. ಈ ಹಿಂದೆ ಮಹೇಶ್ ಮಥಾಯ್ ನಿರ್ದೇಶನದ, ಗಗನಯಾತ್ರಿ ರಾಕೇಶ್ ಶರ್ಮಾ ಬಯೋಪಿಕ್​ನಲ್ಲಿ ಶಾರುಖ್-ಕರೀನಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಇವರು ಒಟ್ಟಾಗಿ ಅಭಿನಯಿಸಲಿರುವುದು ನಿಜ. ಈ ಚಿತ್ರಕ್ಕೆ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಆಕ್ಷನ್-ಕಟ್ ಹೇಳಲಿದ್ದಾರೆ. ಶಾರುಖ್-ಕರೀನಾ ಈಗಾಗಲೇ ಚಿತ್ರಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆಯಂತೆ. ಆದರೆ ಚಿತ್ರದ ಹೆಸರನ್ನು ಮಾತ್ರ ಸಸ್ಪೆನ್ಸ್ ನಲ್ಲಿ ಇಡಲಾಗಿದೆ. ನಿರೀಕ್ಷಿತ ಯಶಸ್ಸು ಕಾಣದ ‘ಜೀರೋ’ ಚಿತ್ರದ ಬಳಿಕ ನಟನೆಯಿಂದ ಕೊಂಚ ಬಿಡುವು ಪಡೆದಿದ್ದ ಶಾರುಖ್, ‘ಟೆಡ್ ಟಾಕ್ಸ್ ಇಂಡಿಯಾ ನಯಿ ಸೋಚ್’ ಟಾಕ್ ಶೋನಲ್ಲಿ ಬಿಜಿ ಆಗಿದ್ದರು. ಇದೀಗ ರಾಜ್​ಕುಮಾರ್ ಹಿರಾನಿ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಲು ಮುಂದಾಗಿದ್ದಾರೆ. ಇನ್ನು ರಾಜ್​ಕುಮಾರ್ ಆಕ್ಷನ್-ಕಟ್ ಹೇಳಿದ್ದ ‘3 ಈಡಿಯಟ್ಸ್’ ಚಿತ್ರದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ನಂತರ ಶಾರುಖ್-ಕರೀನಾ ಜೋಡಿ ಒಂದಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ, ಸ್ಟಾರ್ ಡೈರೆಕ್ಟರ್ ರಾಜ್​ಕುಮಾರ್ ಹಿರಾನಿ ಶಾರುಖ್​ಗೆ ಮೊಟ್ಟ ಮೊದಲು ಆಕ್ಷನ್-ಕಟ್ ಹೇಳುವ ಮೂಲಕ ಹಿಟ್ ಚಿತ್ರ ನೀಡುವ ಯೋಜನೆಯಲ್ಲಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts