More

    ಘಟಕ ಸ್ಥಳಾಂತರಿಸದಂತೆ ಆಗ್ರಹ


    ಯಾದಗಿರಿ: ನಗರದಲ್ಲಿನ ತೋಟಗಾರಿಕೆ ವಿಸ್ತರಣಾ ಮತ್ತು ಶಿಕ್ಷಣ ಘಟಕವನ್ನು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಆವರಣಕ್ಕೆ ಸ್ಥಳಾಂತರಗೊಳಿಸಿರುವ ಕ್ರಮ ಖಂಡಿಸಿ ಗುರುವಾರ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಸಂಘದಿಂದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರಗೆ ಮನವಿ ಸಲ್ಲಿಸಿತು.


    ಕೃಷಿ ಪದವಿಧರ ದುರ್ಗಪ್ಪ ಹಪ್ಪಳ ಮಾತನಾಡಿ, 2015ರಲ್ಲಿ ಬಾಗಲಕೋಟೆ ತೋಟಗಾರಿಕೆ ವಿವಿ ಯಾದಗಿರಿಯಲ್ಲಿ ವಿಸ್ತರಣಾ ಮತ್ತು ಶಿಕ್ಷಣ ಘಟಕವನ್ನು ಆರಂಭಿಸುವ ಮೂಲಕ ರೈತರಲ್ಲಿ ಕೃಷಿ ಚಟುವಟಿಕೆ ಜತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ತಿಳಿವಳಿಕೆ ನೀಡುವ ಕೆಲಸ ನಡೆಸಿತ್ತು. ಪ್ರತಿ ತಿಂಗಳು ಹತ್ತಾರು ತರಬೇತಿಗಳು, ಜಾಗೃತಿ ಅಭಿಯಾನಗಳು ಈ ಘಟಕದಿಂದ ನಡೆಯುತ್ತಿತ್ತು ಆದರೆ, ಘಟಕವನ್ನು ಏಕಾಏಕಿ ಸ್ಥಳಾಂತರಗೊಳಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಕರ್ಾರ ಕಲ್ಯಾಣ ಕನರ್ಾಟಕ ಭಾಗವನ್ನು ಸಕರ್ಾರ ನಿರ್ಲಕ್ಷ್ಯ ಮಾಡುತ್ತಿದೆ. ಜಿಲ್ಲೆಯಲ್ಲಿ ಕೃಷ್ಣಾ ಮ್ತು ಭೀಮಾ ನದಿ ಹರಿಯುತ್ತಿರುವುದರಿಂದ ಇಲ್ಲಿ ತೋಟಗಾರಿಕೆಗೆ ವಿಪುಲ ಅವಕಾಶಗಳು ಇರುವ ಕಾರಣ ವಿಸ್ತರಣಾ ಘಟಕ ತನ್ನ ಕಾರ್ಯ ಚಟುವಟಿಕೆಗಳ ಮೂಲಕ ರೈತರ ಮನ ಗೆದ್ದಿತ್ತು. ಆದರೆ ಸಿಬ್ಬಂದಿ ಮತ್ತು ಅಕಾರಿ ಕೊರತೆ ನೆಪ ಹೇಳಿ ಕಚೇರಿಯನ್ನು ವಾಪಸ್ ಪಡೆದಿರುವುದು ಸರಿಯಲ್ಲ. ಕೂಡಲೇ ತೋಟಗಾರಿಕೆ ವಿವಿ ತನ್ನ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

    ಈ ವೇಳೆ ಶಾಸಕ ತುನ್ನೂರ, ಬಾಗಲಕೋಟ ತೋಟಗಾರಿಕೆ ವಿವಿಯ ಕುಲಪತಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಘಟಕ ಯಾದಗಿರಿಯಿಂದ ಸ್ಥಳಾಂತರ ಮಾಡುವುದು ಬೇಡ ಎಂದು ಹೇಳಿದರು.

    ಪ್ರಗತಿಪರ ರೈತರಾದ ಎಂ.ಮಹಾದೇವಪ್ಪ, ವಿಶ್ವನಾಥ ಬಾಗಲಿ, ಮೀಯಿನ್ ಪಾಟೀಲ್, ದೇವಪ್ಪ ಅಮರಣಗೌಡ, ನಾಗರಾಜ, ಯಂಕಪ್ಪ, ಮಲ್ಲಯ್ಯ ಮಗ್ಗ, ಸೂಗಪ್ಪ ಪಾಟೀಲ್, ವಿವೇಕಾನಂದ ಗಡಲ್, ಲಕ್ಷ್ಮೀಕಾಂತ ಸೊನಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts