More

    ಗ್ರಾಮೀಣ ಭಾಗಕ್ಕೂ ಸೂಕ್ತ ಅನುದಾನ ಸಿಗಲಿ

    ಯಲ್ಲಾಪುರ: ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಹೆಚ್ಚಿನ ಪಾಲು ದೊಡ್ಡ ದೊಡ್ಡ ನಗರಗಳ ಸಂಘ-ಸಂಸ್ಥೆಗಳಿಗೆ ದೊರೆಯುತ್ತಿದೆ. ಅನುದಾನ ಹಂಚಿಕೆಯಲ್ಲಿ ನಗರಗಳಿಗೆ ನೀಡುತ್ತಿರುವ ಪ್ರಾಧಾನ್ಯತೆಯನ್ನು ಗ್ರಾಮೀಣ ಭಾಗದ ಸಂಘ-ಸಂಸ್ಥೆಗಳಿಗೂ ಸಮಾನವಾಗಿ ನೀಡುವಂತಾಗಬೇಕೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೊ›. ಎಂ.ಎ. ಹೆಗಡೆ ಹೇಳಿದರು.

    ಶನಿವಾರ ರಾತ್ರಿ ತಾಲೂಕಿನ ಮಂಚಿಕೇರಿಯ ಸಮಾಜ ಮಂದಿರದಲ್ಲಿ ರಂಗ ಸಮೂಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಶುರಾಮ ಗಿರಗೋಲಿ ಸಿದ್ದಿ ದಂಪತಿಯನ್ನು ರಂಗಸಮೂಹದ ವತಿಯಿಂದ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ಟ ಮಾತನಾಡಿ, ಆಧುನಿಕತೆ ಹಾಗೂ ಪರಂಪರೆಯನ್ನು ಹದವಾಗಿ ಜೋಡಿಸುವ ಅಗತ್ಯತೆಯಿದೆ. ಅದನ್ನು ಮಾಡಲು ಬೇಕಾದ ವಿವೇಕವನ್ನು ಸುಸಂಸ್ಕೃತ ಮನಸ್ಸಿನಿಂದ ಮಾತ್ರ ಹೊಂದಲು ಸಾಧ್ಯ. ವಿವೇಕ ಹಾಗೂ ಸುಸಂಸ್ಕೃತ ಮನಸ್ಸನ್ನು ನೀಡುವ ಕಾರ್ಯ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಂಗಸಮೂಹದಂತಹ ಸಂಘಟನೆಗಳು ನಿರಂತರವಾಗಿ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

    ಹಿರಿಯ ಸಹಕಾರಿ ಎನ್.ಎಸ್. ಹೆಗಡೆ ಕುಂದರಗಿ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಲೆಕ್ಕ ಪರಿಶೋಧಕ ಎಸ್.ಜಿ. ಹೆಗಡೆ ಬೆದೆಹಕ್ಲು, ಪ್ರಮುಖರಾದ ಆರ್.ಜಿ. ಹೆಗಡೆ ಬೆದೆಹಕ್ಲು, ಆರ್.ಎಲ್. ಭಟ್ಟ, ಹೇರಂಭ ಹೆಗಡೆ ಇದ್ದರು. ರಂಗಸಮೂಹದ ಅಧ್ಯಕ್ಷ ರಾಮಕೃಷ್ಣ ಭಟ್ಟ ದುಂಡಿ, ಎಂ.ಕೆ. ಭಟ್ಟ ಯಡಳ್ಳಿ, ಎಂ.ಜಿ. ಭಟ್ಟ ಬೊಮ್ಮನಳ್ಳಿ ನಿರ್ವಹಿಸಿದರು. ನಂತರ ನೀನಾಸಂ ತಂಡದವರಿಂದ ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶನದಲ್ಲಿ ದಿ. ಗಿರೀಶ ಕಾರ್ನಾಡ ವಿರಚಿತ ‘ರಾಕ್ಷಸ ತಂಗಡಿ’ ನಾಟಕ ಪ್ರದರ್ಶನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts