More

    ಗೋನಿಕೊಪ್ಪದಲ್ಲಿ ಬೊಡಿ ನಮ್ಮೆ

    ಗೋಣಿಕೊಪ್ಪ: ಪೊನ್ನಂಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂಬಲ ಶೂಟರ್ಸ್ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ಬೊಡಿ ನಮ್ಮೆಯಲ್ಲಿ ಪುತ್ತರೀರ ನಂಜಪ್ಪ ಎರಡು ಬಹುಮಾನ ಗಿಟ್ಟಿಸಿಕೊಂಡರು. 0.22 ಮತ್ತು ಏರ್‌ಗನ್ ವಿಭಾಗದಲ್ಲಿ ಸಾಧನೆ ಮಾಡಿದರು.

    ಫಲಿತಾಂಶ : 0.22 ವಿಭಾಗದಲ್ಲಿ ಪುತ್ತರೀರ ನಂಜಪ್ಪ (ಪ್ರ), ಕಾರ್ತಿಕ್ ಕಾರ್ಯಪ್ಪ (ದ್ವಿ), ಸಣ್ಣುವಂಡ ವಿನು ವಿಶ್ವನಾಥ್ (ತೃ), ಏರ್‌ಗನ್ ವಿಭಾಗದಲ್ಲಿ ಕನ್ನಿಕಂಡ ಶ್ಯಾಮ್ (ಪ್ರ), ಪುತ್ತರೀರ ನಂಜಪ್ಪ (ದ್ವಿ), ಕೆಚ್ಚಿರ ಶಬ್ಧ್ (ತೃ), 12 ನಳಿಕೆ ಕೋವಿ ಸ್ಪರ್ಧೆಯಲ್ಲಿ ಆಲೆಮಾಡ ಬೋಪಣ್ಣ (ಪ್ರ), ಶೆರಿನ್ ಗಣಪತಿ (ದ್ವಿ), ಅಪ್ಪುಮಣಿಯಂಡ ಭಜನ್ (ತೃ) ಸ್ಥಾನ ಪಡೆದುಕೊಂಡರು.

    ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಿದರು. ಈ ಸಂದರ್ಭ ಅಂಬಲ ಶೂಟರ್ಸ್ ಕ್ಲಬ್ ಅಧ್ಯಕ್ಷ ಮತ್ರಂಡ ಕಿಶು ಮಾಚಯ್ಯ, ಕಾರ್ಯದರ್ಶಿ ಅಕ್ಕಳತಂಡ ಜಿಯಾ, ಪ್ರಮುಖರಾದ ಚಿಂಡಮಾಡ ರಾಜಾ ಚಂಗಪ್ಪ, ಗುಡಿಯಂಗಡ ಲಿಕಿನ್, ಕಳ್ಳಿಚಂಡ ಮಂಜು, ಚಿಮ್ಮಚ್ಚೀರ ನಾಜಿರ್, ಕಾಕಮಾಡ ಅಜಿತ್ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts