More

    ಗೋಗೇರಿಯಲ್ಲಿ ಸಂಭ್ರಮದ ಪಲ್ಲಕ್ಕಿ ಉತ್ಸವ

    ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದ ಹೊನ್ನಕೇರಿ ಮಲ್ಲಯ್ಯ ದೇವಸ್ಥಾನದ 6ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಹಾ ಮಂಗಲೋತ್ಸವ ನಿಮಿತ್ತ ಮಂಗಳವಾರ ಪಲ್ಲಕ್ಕಿ ಉತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.

    ಸಾನ್ನಿಧ್ಯ ವಹಿಸಿದ್ದ ಕೊಡಕೇರಿ ಹಾಲುಮತ ಸಮಾಜದ ಗುರುಗಳಾದ ಶಿವಪುತ್ರಯ್ಯ ಗುರುವಿನ ಮಾತನಾಡಿ, ಸಮಾಜದಲ್ಲಿ ಆಚರಣೆಯಲ್ಲಿರುವ ಪ್ರತಿಯೊಂದು ಧಾರ್ವಿುಕ ಕಾರ್ಯಕ್ರಮಗಳು ವ್ಯಕ್ತಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿವೆ ಎಂದರು.

    3 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪೂರ್ಣಕುಂಭ ಹೊತ್ತ 101 ಮಹಿಳೆಯರು, ಡೊಳ್ಳು ಕುಣಿತ ತಂಡದೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು. ಭಕ್ತಿ ಭಾವದಲ್ಲಿ ತಲ್ಲೀನರಾಗಿದ್ದ ಭಕ್ತರು ಪರಸ್ಪರ ಭಂಡಾರ ಎರಚುತ್ತ ಏಳು ಕೋಟಿ, ಏಳು ಕೋಟಿಗೋ ಎಂಬ ಘೊಷಣೆ ಕೂಗಿದರು. ಬಳಿಕ ದೇವಸ್ಥಾನದಲ್ಲಿ ಕುದರಿಕಾರರಾದ ಹನುಮಗೌಡ ಪಾಟೀಲ, ಫಕೀರಗೌಡ ಪಾಟೀಲ ಅವರು ಪ್ರಸಕ್ತ ವರ್ಷದ ಮಳೆ ಹಾಗೂ ಬೆಳೆ ಭವಿಷ್ಯ ನುಡಿದರು. ಬಳಿಕ ಸಾವಿರಾರು ಜನರು ದೇವಸ್ಥಾನದಲ್ಲಿ ಆಯೋಜಿಸಿದ್ದ ಉಚಿತ ಅನ್ನ ಪ್ರಸಾದ ಸ್ವೀಕರಿಸಿದರು.

    ಕಾರ್ಯಕ್ರಮದಲ್ಲಿ ಪ್ರವಚನಕಾರ ವಿರೂಪಾಕ್ಷ ಶಾಸ್ತ್ರಿ›ಗಳು, ಬೀರಲಿಂಗೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಾರ್ತಾಂಡಪ್ಪ ಹದ್ದಣ್ಣವರ, ಹನುಮಪ್ಪ ಕೊಡಕೇರಿ, ಬಸನಗೌಡ ಪಾಟೀಲ, ಕಳಕಪ್ಪ ಅಡವಿ, ಡಾ. ಬಸನಗೌಡ ಗೌಡರ, ಸದಾಶಿವನಗೌಡ ಪಾಟೀಲ, ಶರಣಪ್ಪ ಬೊದುರು, ಪ್ರಕಾಶ ಅಡವಿ, ಬಸವರಾಜ ಕೊಡಕೇರಿ, ಈರಪ್ಪ ಗಂಜಿಹಾಳ, ಪರಶುರಾಮ ಚವಡಿ, ಬರಮಪ್ಪ ಹಕ್ಕಿ ಸೇರಿ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts