More

    ಗುರುವಿಗೆ ಕೀರ್ತಿ ತರುವ ಸಾಧನೆ ಮಾಡಿ

    ರಾಯಬಾಗ: ವಿದ್ಯಾರ್ಥಿಗಳು ಜ್ಞಾನ ಪಡೆದುಕೊಂಡು ತಾವು ಕಲಿತ ಶಾಲೆಗೆ ಮತ್ತು ಗುರುಗಳಿಗೆ ಕೀರ್ತಿ ತರುವಂತಹ ಸಾಧನೆ ಮಾಡಬೇಕು ಎಂದು ಹಿರಿಯ ಧುರೀಣ
    ಡಿ.ಎಸ್.ನಾಯಿಕ ಹೇಳಿದರು.

    ತಾಲೂಕಿನ ಮೊರಬ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುವಿನ ಸ್ಥಾನ ಅತ್ಯಂತ ಪವಿತ್ರವಾಗಿದ್ದು, ಅವರ ತ್ಯಾಗದ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನು ರೂಪಿಸುವ ಶಕ್ತಿ ಅಡಗಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಪರಮಾನಂದವಾಡಿ ಗುರುದೇವಾಶ್ರಮದ ಡಾ.ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನ ಬೆಳಗಬೇಕಾದರೆ ಅಕ್ಷರ ಕಲಿಸಿದ ಗುರುಗಳ ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು. ಹಳೇ ವಿದ್ಯಾರ್ಥಿ ಪೊಲೀಸ್ ಅಧಿಕಾರಿ ರಾಜೀವ ಎಂ. ಮಾತನಾಡಿ, ಗುರುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದೇವರಾಗಿದ್ದಾರೆ. ಅವರ ಋಣ ಯಾವ ಜನ್ಮಕ್ಕೂ ತೀರಿಸಲಾಗದು. ಗುರುಗಳ ಸ್ಥಾನಕ್ಕೆ ಧಕ್ಕೆ ಬಾರದಂತೆ ನಮ್ಮ ನಡವಳಿಕೆಯನ್ನು ರೂಪಿಸಿಕೊಳ್ಳಬೇಕೆಂದರು.

    1982 ರಿಂದ ಇಲ್ಲಿವರೆಗೆ ಶಾಲೆಯಲ್ಲಿ ಕಲಿಸಿ ನಿವತ್ತಿ ಹಾಗೂ ವರ್ಗಾವಣೆ ಹೊಂದಿದ ಎಲ್ಲ ಗುರುಗಳನ್ನು ಸತ್ಕರಿಸಲಾಯಿತು. ಶಂಕರ ಕೊಡತೆ, ನ್ಯಾಯವಾದಿ ಎಂ.ಎಂ.ಪಾಟೀಲ, ಸತ್ಯರಾಜ ಕಾಂಬಳೆ, ರಾಜು ಪಾಟೀಲ, ಬಸವರಾಜ ಸನದಿ, ಸುಕುಮಾರ ಕಾಂಬಳೆ, ರವೀಂದ್ರ ಪಾಟೀಲ, ಡಾ.ಎಂ.ಎಸ್.ಶಾಂಡಗೆ, ಆರ್.ಎಲ್.ಅಸೋದೆ, ಆರ್.ಎಲ್.ಮಳಗಾಂವಿ, ಎಂ.ಎಸ್.ಪಲ್ಲೇದ, ಎಂ.ಎಂ.ಚೌಗಲಾ, ಎಸ್.ಬಿ.ಕಾಂಬಳೆ, ವೈ.ಬಿ.ಕಳ್ಳಿಗುದ್ದಿ, ವಿ.ವಿ.ನಾವಡಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts