More

    ಖಾಲಿ ಕೊಡ-ಬಕೆಟ್ ಹಿಡಿದು ಪ್ರತಿಭಟನೆ

    ಹುಬ್ಬಳ್ಳಿ: ನಗರದ ವಿವಿಧ ವಾರ್ಡ್​ಗಳಲ್ಲಿ ಅಸಮರ್ಪಕ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನು ಖಂಡಿಸಿ ನಾಗರಿಕರು ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ಶನಿವಾರ ಖಾಲಿ ಕೊಡ, ಬಕೆಟ್ ಹಿಡಿದು ಪ್ರತಿಭಟನೆ ನಡೆಸಿದರು.

    ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ವಾರ್ಡ್ ನಂ. 50, 56 ಹಾಗೂ 57ರ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇಂದಿರಾ ಗಾಜಿನ ಮನೆಯಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದರು. ಪ್ರತಿ 10-12 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕೆ ಹು-ಧಾ ಮಹಾನಗರ ಪಾಲಿಕೆ ಹಾಗೂ ನಿರಂತರ ನೀರು ಪೂರೈಕೆ ಯೋಜನೆಯ ಗುತ್ತಿಗೆದಾರರಾದ ಎಲ್ ಆಂಡ್ ಟಿ ಕಂಪನಿಯೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅವಳಿ ನಗರದ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ತಕ್ಷಣವೇ ಸಹಜ ಸ್ಥಿತಿಗೆ ಬರಬೇಕು. ತಪ್ಪಿದಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ರಜತ ಉಳ್ಳಾಗಡ್ಡಿಮಠ ಎಚ್ಚರಿಸಿದ್ದಾರೆ.

    ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪೂರ, ಎಸ್. ಸಂದಿಲಕುಮಾರ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಮಾಜಿ ಸದಸ್ಯ ಹೂವಪ್ಪ ದಾಯಗೋಡಿ, ಪೀರಾಜಿ ಖಂಡೇಕರ್, ಸಾದಿಕ್ ಯಕ್ಕುಂಡಿ, ಈಶ್ವರ ಪೂಜಾರಿ, ಗೋಪಾಲ ಯಣ್ಣಿಚವಂಡಿ, ಲೋಕೇಶ ಬೊಮ್ಮನಾಳ, ವಿರೇಶ ನಾಗಲಾಪೂರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts