More

    ಖತರ್‌ನಾಕ್ ಸರಗಳ್ಳನ ಬಂಧನ

    ಹಾಸನ: ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯ 9 ಕಡೆ ಸರಗಳ್ಳತನ ಮಾಡಿದ್ದ ಖತರ್‌ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 7 ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
    ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿನಹಳ್ಳಿ ಹೋಬಳಿಯ ಮಾಳೇನಹಳ್ಳಿ ಗ್ರಾಮದ ಸುಧಾಕರ್ ಅಲಿಯಾಸ್ ಸಾಗರ್ (23) ಎಂಬಾತನನ್ನು ಬಂಧಿಸಲಾಗಿದ್ದು, ಈತನಿಂದ 12.23 ಲಕ್ಷ ರೂ. ಮೌಲ್ಯದ 211 ಗ್ರಾಂ ತೂಕದ 7 ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದ ಆರೋಪಿ ನಂತರ ತನ್ನ ಪಲ್ಸರ್ ಬೈಕಿನಲ್ಲಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಈತ ಶ್ರವಣಬೆಳಗೊಳದಲ್ಲಿ 1 ಪ್ರಕರಣ, ಹಿರೀಸಾವೆ-2, ನುಗ್ಗೇಹಳ್ಳಿ -1, ಚನ್ನರಾಯಪಟ್ಟಣ ಗ್ರಾಮಾಂತರದಲ್ಲಿ 1, ಹೊಳೆನರಸೀಪುರ, ಹಾಸನ ಬಡಾವಣೆ, ಮಂಡ್ಯ ತಾಲ್ಲೂಕಿನ ಕಿಕ್ಕೇರಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೊಂದು ಸರಗಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಇದೇ ಮೊದಲ ಬಾರಿಗೆ ಈತನನ್ನು ಬಂಧಿಸಲಾಗಿದೆ. ಈ ಹಿಂದೆ ಯಾವುದೇ ಪ್ರಕರಣದಲ್ಲಿ ಬಂಧಿಯಾಗಿಲ್ಲ. ಹಲವು ಪ್ರಕರಣಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಈತನ ಚಪ್ಪಲಿ ಗುರುತಿನ ಆಧಾರ ಮೇಲೆ ಪೊಲೀಸರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.
    ಕದ್ದ ಆಭರಣಗಳನ್ನು ಮಣಪ್ಪುರಂ ಗೋಲ್ಡ್‌ಲೋನ್ ಸೇರಿದಂತೆ ಹಲವು ಫೈನಾನ್ಸ್‌ಗಳಲ್ಲಿ ಗಿರವಿ ಇಡಲಾಗಿದೆ. ಈತ ಬೆಳಗ್ಗೆ 10 ಗಂಟೆಯೊಳಗೆ ಮತ್ತು ಸಂಜೆ 5 ರಿಂದ 9 ಗಂಟೆಯೊಳಗೆ ಕಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಲು ನಮ್ಮ ತಂಡ ಸಾಕಷ್ಟು ಶ್ರಮ ವಹಿಸಿ ಮಾಹಿತಿ ಕಲೆ ಹಾಕಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
    ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಚನ್ನರಾಯಪಟ್ಟಣ ಡಿವೈಎಸ್ಪಿ ರವಿಪ್ರಸಾದ್, ಹಿರೀಸಾವೆ ಪಿಎಸ್‌ಐ ಕೆ. ಪ್ರಭಾಕರ್ ಮತ್ತು ಇವರ ನೇತೃತ್ವದ ತಂಡವನ್ನು ಅಭಿನಂದಿಸಿ ಬಹುಮಾನ ಘೋಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts