More

    ಕೊಂಚ ಬಿಡುವು ನೀಡಿದ ವರುಣ

    ಕಾರವಾರ: ಗುರುವಾರ ಅಬ್ಬರಿಸಿದ್ದ ವರುಣ ಶುಕ್ರವಾರ ಕೊಂಚ ಬಿಡುವು ನೀಡಿದ್ದಾನೆ. ಜಿಲ್ಲಾದ್ಯಂತ ಶುಕ್ರವಾರ ಬಿಟ್ಟು, ಬಿಟ್ಟು ಮಳೆಯಾಯಿತು.

    ಕಾರವಾರ ಎಂಜಿ ರಸ್ತೆಯಲ್ಲಿ ನಗರಸಭೆಯ ಎದುರಿದ್ದ ಮರ ಶುಕ್ರವಾರ ಕಿತ್ತು ಬಿದ್ದಿದೆ. ಇದರಿಂದ ಎರಡು ವಿದ್ಯುತ್ ಕಂಬಗಳು ಮುರಿದಿವೆ. ಒಂದು ಬೈಕ್​ಗೆ ಹಾನಿಯಾಗಿದೆ. ಆಟೋ ರಿಕ್ಷಾವೊಂದರ ಮೇಲೆ ಟೊಂಗೆಗಳು ಬಿದ್ದಿವೆ. ತರಕಾರಿನ, ಹಣ್ಣಿನ ಅಂಗಡಿಗಳು ಪಕ್ಕದಲ್ಲೇ ಇದ್ದು, ಜನ ಖರೀದಿಯಲ್ಲಿ ತೊಡಗಿದ್ದರು. ಮರ ಬೀಳುವುದನ್ನು ನೋಡಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಇದರಿಂದ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ನಗರಸಭೆ, ಹೆಸ್ಕಾಂ ಸಿಬ್ಬಂದಿ ಮರ ಕಡಿದು, ವಿದ್ಯುತ್ ಕಂಬ ಬದಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಗದ್ದೆ ಜಲಾವೃತವಾಗಿ ಹಾನಿ: ತಾಲೂಕಿನ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ನಗೆ ಗ್ರಾಮದಲ್ಲಿ ಭಾರಿ ಮಳೆಗೆ ಹಳ್ಳ ಉಕ್ಕಿ ಗದ್ದೆಗೆ ನೀರು ತುಂಬಿ ಹಾನಿಯಾಗಿದೆ. ನೆಟ್ಟ ಸಸಿಗಳು ಕೊಚ್ಚಿಕೊಂಡು ಹೋಗಿವೆ. ಗದ್ದೆಯಲ್ಲಿ ಮಣ್ಣು ತುಂಬಿಕೊಂಡಿದೆ. ತಡೆಗೋಡೆ ನಿರ್ವಿುಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

    ತಾಲೂಕುವಾರು ಮಳೆ: ಅಂಕೋಲಾದಲ್ಲಿ 57.5, ಭಟ್ಕಳ-46.4, ಹಳಿಯಾಳ-44.2, ಹೊನ್ನಾವರ-43.8, ಕಾರವಾರ-56.6, ಕುಮಟಾ-59.2, ಮುಂಡಗೋಡ- 70.8, ಸಿದ್ದಾಪುರ-28.4, ಶಿರಸಿ-42.5, ಜೊಯಿಡಾ- 40.ಯಲ್ಲಾಪುರದಲ್ಲಿ 57.4 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts