More

    ಕೇಂದ್ರ- ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

    ಹುಬ್ಬಳ್ಳಿ: ಉತ್ತರ ಪ್ರದೇಶದ ಹತ್ರಾಸ್ ದಲಿತ ಮಹಿಳೆ ಮೇಲಿನ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗಬೇಕು, ರೈತ, ಕಾರ್ವಿುಕ ವಿರೋಧಿ ಕಾನೂನು ತಿದ್ದುಪಡಿ ಮತ್ತು ಕಾರ್ವಿುಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್​ಎಸ್) ಹಾಗೂ ಸಂವಿಧಾನ ಸುರಕ್ಷಾ ಸಮಿತಿ (ಎಸ್​ಎಸ್​ಎಸ್) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು

    ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ನಗರದ ಕಿಮ್್ಸ ಎದುರಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಬಳಿಕ ಮೌನ ಪ್ರತಿಭಟನಾ ಪ್ರದರ್ಶನ ನಡೆಸಿದ ಸಂಘಟನೆಗಳ ಕಾರ್ಯಕರ್ತರು, ರಾಜ್ಯದಲ್ಲಿ ತಿರಸ್ಕಾರಗೊಂಡ ಕಾರ್ವಿುಕ ಕಾನೂನು, ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿಗಳ ಮರು ಸುಗ್ರೀವಾಜ್ಞೆಗಳನ್ನು ಹೊರಡಿಸುವ ಸರ್ಕಾರದ ತೀರ್ಮಾನ ಖಂಡಿಸಿದರು.

    ಮುಖಂಡರಾದ ಮಹೇಶ ಪತ್ತಾರ, ಬಿ.ಎಸ್. ಸೊಪ್ಪಿನ. ದೇವಾನಂದ ಜಗಾಪುರ, ಅಶ್ರಫ್​ಅಲಿ ಬಸೀರ, ಅನ್ವರ ಮುಧೋಳ, ಗುರುಸಿದ್ದಪ್ಪ ಅಂಬಿಗೇರ, ಪುಂಡಲೀಕ ಬಡಿಗೇರ, ಎ.ಎಸ್. ಪೀರಜಾದೆ, ಕರಿಯಪ್ಪ ದಳವಾಯಿ, ಬಸವಣ್ಣೆಪ್ಪ ನೀರಲಗಿ, ಬಸೀರ ಮುಧೋಳ, ಚಿದಾನಂದ ಸವದತ್ತಿ, ಅಬ್ದುಲರೇಹಮಾನ ಮುಲ್ಲಾ, ವಿಜಯ ಗುಂಟ್ರಾಳ, ಗಂಗಾಧರ ಗಾಡದ, ಹನಮಂತ ಅಂಬಿಗೇರ, ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts