More

    ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ

    ಆಲೂರು: ಆಲೂರು ಪಟ್ಟಣದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ದುರಸ್ತಿ ಕಂಡಿದ್ದು, ಸ್ಥಳೀಯ ನಿವಾಸಿಗಳು ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
    ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಯ ಮುಂಭಾಗ, ಕೊನೇಪೇಟೆ ಹಾಗೂ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ನೆರವಿನೊಂದಿಗೆ ಹಳೆ ಕೋರ್ಟ್ ಸರ್ಕಲ್ ಬಳಿ ಶುದ್ಧ ನೀರಿನ ಘಟಕವನ್ನು ತೆರೆಯಲಾಗಿತ್ತು. ಸದ್ಯ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು ಪಟ್ಟಣದ ನಾಗರೀಕರು ನೀರಿಗಾಗಿ ಊರೂರು ಅಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
    ಆಲೂರು ಪಟ್ಟಣ ಪಂಚಾಯಿತಿ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಪ್ರಾರಂಭಿಸಿದ್ದ ಶುದ್ಧ ನೀರಿನ ಘಟಕ ಕೆಲವೇ ದಿನಗಳಲ್ಲಿ ಕೆಟ್ಟು ನಿಂತು ಹಲವು ವರ್ಷಗಳೇ ಕಳೆದಿವೆ, ಹೆಗಚಿ ಜಲಾಶಯದಿಂದ ಆಲೂರು ಪಟ್ಟಣದ ಜನತೆಗೆ ನೀರು ಒದಗಿಸುವ ಉದ್ದೇಶದಿಂದ ಕೊನೇಪೇಟೆಯಲ್ಲಿ ಹಾಗೂ ಹಳೆಕೋರ್ಟ್ ಸರ್ಕಲ್ ಬಳಿ ಪ್ರಾರಂಭಿಸಿದ ಶುದ್ಧ ಕುಡಿಯುವ ನೀರು ಘಟಕಗಳು ಅಗೊಹೀಗೊ ಕಾರ್ಯನಿರ್ವಹಿಸುತ್ತ ಸದ್ಯ ಮೂರು ದಿನಗಳಿಂದ ಅವುಗಳು ಸಹ ಬಂದ್ ಆಗಿದ್ದು ಪಟ್ಟಣದ ನಾಗರೀಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕುಡಿಯುವ ನೀರಿಗಾಗಿ ಕೈ ಪಂಪುಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಆದರೆ ಪಟ್ಟಣದಲ್ಲಿ ಯಾವುದೇ ಕೈ ಪಂಪ್ ನಲ್ಲಿ ಶುದ್ಧವಾದ ನೀರು ಬಾರದ ಪರಿಣಾಮ ಜನರು ಹಉಣಸಉವಳ್ಳಿ, ಬೈರಾಪುರ ಗ್ರಾಮಗಳಿಂದ ನೀರಿನ ನೀರು ಹೊತ್ತು ತರುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts