More

    ಕಿನಾನ್ ಸೈಫಿ ಸಮಗ್ರ ಚಾಂಪಿಯನ್

    ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐ.ಎಂ.ಎ. ಹಾಲ್‍ನಲ್ಲಿ ಆಯೋಜಿಸಿದ್ದ ಚೆಸ್ ಟೂರ್ನಮೆಂಟ್‍ನಲ್ಲಿ ಕಿನಾನ್ ಸೈಫಿ ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿದರು.
    18 ವರ್ಷದ ಒಳಗಿನ ವಿಭಾಗದಲ್ಲಿ ಕೃಷ್ಣ (ಪ್ರಥಮ), ಕೃಷ್ಣ ಭಾಲ್ಕೆ (ದ್ವಿತೀಯ), ಪ್ರಭಾಕರ ನಾರಾಯಣ (ತೃತೀಯ), 15 ವರ್ಷದ ಒಳಗಿನ ವಿಭಾಗದಲ್ಲಿ ಅಭಿನವ ಮಲ್ಲಿಕಾರ್ಜುನ (ಪ್ರಥಮ), ಭುವನೇಶ್ವರಿ ಗೋವಿಂದ ರೆಡ್ಡಿ (ದ್ವಿತೀಯ), ವಿಶಾಲ್ (ತೃತೀಯ), 11 ವರ್ಷದ ಒಳಗಿನ ವಿಭಾಗದಲ್ಲಿ ಆರಾಧ್ಯ (ಪ್ರಥಮ), ಅರ್ಣವ್ (ದ್ವಿತೀಯ), ಅಭಿನವ ಆರ್ (ತೃತೀಯ) ಬಹುಮಾನ ಗಳಿಸಿದರು.
    ಸಮಗ್ರ ಚಾಂಪಿಯನ್ ರೂ. 5 ಸಾವಿರ ನಗದು ಹಾಗೂ ಟ್ರೋಫಿ, ಮೂರೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರು ಕ್ರಮವಾಗಿ ತಲಾ ರೂ. 3 ಸಾವಿರ, ರೂ. 2 ಸಾವಿರ ಹಾಗೂ ರೂ. 1 ಸಾವಿರ ಬಹುಮಾನ ಹಾಗೂ ಟ್ರೋಫಿಗೆ ಭಾಜನರಾದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
    ಬೌದ್ಧಿ ಸಾಮಥ್ರ್ಯ ವೃದ್ಧಿ: ಚೆಸ್ ಆಡುವುದರಿಂದ ಮಕ್ಕಳ ಬುದ್ಧಿ ಚುರುಕಾಗುತ್ತದೆ. ಬೌದ್ಧಿಕ ಸಾಮಥ್ರ್ಯ ವೃದ್ಧಿಸುತ್ತದೆ ಎಂದು ಚೆಸ್ ಟೂರ್ನಮೆಂಟ್ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
    ಮಕ್ಕಳನ್ನು ಮೊಬೈಲ್‍ನಿಂದ ದೂರ ಇರಿಸಲು ಚೆಸ್ ಒಳ್ಳೆಯ ಆಟವಾಗಿದೆ. ಇದರಿಂದ ಸಾಧನೆಗೂ ಬಹಳಷ್ಟು ಅವಕಾಶಗಳು ಇವೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅವರಲ್ಲಿ ಕ್ರೀಡಾ ಆಸಕ್ತಿ ಬೆಳೆಸಬೇಕು ಎಂದು ತಿಳಿಸಿದರು.
    ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ಮಾತನಾಡಿ, ಚೆಸ್ ಕ್ರೀಡೆಗೆ ಉತ್ತೇಜನ ನೀಡಲು ಟೂರ್ನಿ ಆಯೋಜಿಸಲಾಗಿತ್ತು. ಟೂರ್ನಿಗೆ ನಿರೀಕ್ಷೆಗೂ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗಿದೆ. 111 ವಿದ್ಯಾರ್ಥಿಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಬರುವ ದಿನಗಳಲ್ಲಿ ಇನ್ನೂ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ಹೇಳಿದರು.
    ರೋಟರಿ ಡಿಸ್ಟ್ರಿಕ್ಟ್ 3160 ಸಿ.ಎಸ್.ಆರ್. ಕರ್ನಾಟಕ ರಿಜನಲ್ ಚೇರ್‍ಮನ್ ಬಸವರಾಜ ಧನ್ನೂರ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸಂಜಯ್ ಹತ್ತಿ, ಹಿರಿಯ ಸಿವಿಲ್ ಎಂಜಿನಿಯರ್ ರಾಜಶೇಖರ ಕರ್ಪೂರ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ಖಜಾಂಚಿ ಸತೀಶ ಸ್ವಾಮಿ, ಪ್ರತಿಮಾ ಗೋವಿಂದ ರೆಡ್ಡಿ, ಡಾ. ವಿಜಯಾ ಹತ್ತಿ, ಡಾ. ನಿತೇಶ ಬಿರಾದಾರ, ಗಜಾನನ ಪೋಕಲವಾರ್, ಡಾ. ಕಪಿಲ್ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಬಸವರಾಜ ಮಡಕಿ, ತಾಂತ್ರಿಕ ಮುಖ್ಯಸ್ಥ ಚಂದ್ರಕಾಂತ ಕುಲಕರ್ಣಿ, ಚೆಸ್ ಆರ್ಬಿಟರ್ ಸಿರಿಲ್ ಸ್ಯಾಮುವೆಲ್ ಮೊದಲಾದವರು ಇದ್ದರು. ಡಾ. ಮಲ್ಲಿಕಾರ್ಜುನ ಚಟ್ನಳ್ಳಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts