More

     ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ

    ಶೃಂಗೇರಿ: ಮಳೆದೇವರು ಖ್ಯಾತಿಯ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ ಮಾ.29ರಂದು ಜರುಗಲಿದೆ. ಕಿಗ್ಗಾ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿದೆ.

    ಜಾತ್ರೆಗೆ ಕಿಗ್ಗಾ ದೇವಸ್ಥಾನವನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಗ್ರಾಮದ ಪ್ರತಿ ಮನೆಯಲ್ಲೂ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಬಂಧುಬಳಗದವರನ್ನು ಆಹ್ವಾನಿಸಿದ್ದಾರೆ. ಹೆಣ್ಣುಮಕ್ಕಳಿಗಂತೂ ವಿಶೇಷ ಹಬ್ಬವಾಗಿರುತ್ತದೆ. ಎಷ್ಟೇ ದೂರವಿದ್ದರೂ ತವರೂರ ಜಾತ್ರೆಗೆ ಆಗಮಿಸುತ್ತಾರೆ. ಹೆಣ್ಣು ಮಕ್ಕಳು ತವರು ಮನೆಗೆ ಬಂದು ಜಾತ್ರೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಹರಕೆ ಹೊತ್ತವರು ಹರಕೆ ಸಲ್ಲಿಸುತ್ತಾರೆ. ದೂರದ ಊರುಗಳ ಭಕ್ತರೂ ಆಗಮಿಸಿ ಹರಕೆ ಸಲ್ಲಿಸುತ್ತಾರೆ.

    ಊರಿನ ಜಾತ್ರೆ ದಿನ ಯಾರೇ ಬಂದರೂ ಹಬ್ಬದ ಅಡುಗೆ ಮಾಡಿ ಬಡಿಸುತ್ತಾರೆ. ನೂರಾರು ವರ್ಷಗಳ ಸಂಪ್ರದಾಯಗಳಿಗೆ ಧಕ್ಕೆ ಬಾರದಂತೆ ನಡೆಯುವ ಜಾತ್ರೆಯಲ್ಲಿ ಕಿಗ್ಗಾ ಹಾಗೂ ನೆಮ್ಮಾರು ಸೀಮೆಯ ಜನರು ಜಾತಿ, ಮತ, ಪಂಥ ಮರೆತು ಮಳೆದೇವರಿಗೆ ಪೂಜೆ ಸಲ್ಲಿಸುತ್ತಾರೆ.  ಕಿಗ್ಗಾ ತೇರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿರುವ ತೇರು ಸುಮಾರು 72 ಅಡಿ ಎತ್ತರವಿದ್ದು ಇದನ್ನು ಗೆಡ್ಡೆ ರಥ ಎಂದು ಹಿಂದಿನವರು ಕರೆಯುವುದು ಉಂಟು. ಇಷ್ಟು ದೊಡ್ಡದಾದ ರಥ ಕಬ್ಬಿಣ ಉಪಯೋಗಿಸದೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts