More

    ಕಾರ್ಯಾಚರಣೆಯಲ್ಲಿ 811 ಜನರ ವಿರುದ್ಧ ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು

    ಹಾಸನ: ಜಿಲ್ಲೆಯಲ್ಲಿ ಮೇ 26ರಿಂದ 28 ರವರೆಗೆ ಮೂರು ದಿನ ಏರಿಯಾ ಡಾಮಿನೇಷನ್ ಸ್ಪೆಷಲ್ ಡ್ರೈವ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿ ನೂರಾರು ಮಂದಿಯನ್ನು ಬಂಧಿಸಿ, ಹಲವು ಅಕ್ರಮ ಪತ್ತೆ ಮಾಡಲಾಗಿದೆ ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದರು.
    ಹಾಸನದ ರಿಂಗ್ ರಸ್ತೆ, ಪೆನ್ಶೆನ್ ಮೊಹಲ್ಲಾ, ಅರಸೀಕೆರೆ ನಗರ, ಸಕಲೇಶಪುರ ಸೇರಿದಂತೆ ಜಿಲ್ಲೆಯ ಒಟ್ಟು 44 ಕಡೆಗಳಲ್ಲಿ ಪರಿಶೀಲನೆ ಕಾರ್ಯಾಚರಣೆ ಮಾಡಲಾಗಿತ್ತು. ಈ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಿಂದ 77.56 ಲೀಟರ್ ಮದ್ಯ ವಶಪಡಿಸಿಕೊಂಡು ಸುಮಾರು 16 ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಸುಮಾರು 811 ಜನರನ್ನು ವಶಕ್ಕೆ ಪಡೆದು 496 ಪೊಲೀಸ್ ಕಾಯ್ದೆ (ಕೆಪಿ ಆಕ್ಟ್) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಮಾರು 9 ಡಿಡಿ ಪ್ರಕರಣಗಳು, 66 ಕೋಟ್ಪಾ ಅಡಿ ಪ್ರಕರಣ ದಾಖಲಿಸಲಾಗಿದೆ. 2 ಗಾಂಜಾ ಸೇವನೆ ಕೇಸ್ ದಾಖಲು ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಮೋಟಾರ್ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ 1300 ಪ್ರಕರಣ ದಾಖಲಾಗಿವೆ, ಸಿಇಐಆರ್ ವಿಶೇಷ ಕಾರ್ಯಾಚರಣೆಯಲ್ಲಿ 19 ಮೊಬೈಲ್ ಪತ್ತೆ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ವಿವಿಧೆಡೆ 255 ರೌಡಿಗಳ ಮನೆಗಳಿಗೆ ಭೇಟಿ ನೀಡಿ ಅವರ ಕಾರ್ಯಚಟುವಟಿಕೆ, ಕೆಲಸ ಎಲ್ಲವನ್ನೂ ಪರಿಶೀಲನೆ ಮಾಡಲಾಗಿದ್ದು, ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ರೀತಿಯ ಅಭಿಯಾನಗಳನ್ನು ನಿರಂತರವಾಗಿ ಮಾಡುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿರುವುದರಿಂದ ನಿರಂತರವಾಗಿ ದಾಳಿ ಮುಂದುವರಿಸಲಾಗುವುದು ಎಂದು ಹೇಳಿದರು.

    ಬಾಕ್ಸ್
    ಸಾರ್ವಜನಿಕರೇ ಗಮನಿಸಿ:
    ಅನೇಕ ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿಲ್ಲ, ವಿವಿಧ ದೂರು ದಾಖಲಿಸಲು ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಹೋದರೆ, ದೂರು ತೆಗೆದುಕೊಳ್ಳಲು ವಿಳಂಬ ಮಾಡಿದರೆ, ನಿಮ್ಮೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸದೇ ಇದ್ದರೆ 08172-265000 ಸಂಖ್ಯೆಗೆ ಕರೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿದರೆ ಕಂಟ್ರೋಲ್‌ನಿಂದ ರೂಂನಿಂದ ನನಗೆ ಮಾಹಿತಿ ಬರಲಿದೆ. ನಂತರ ತುರ್ತು ಕ್ರಮಕ್ಕೆ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಎಸ್‌ಪಿ ಹೇಳಿದರು.
    ಇದೇ ವೇಳೆ ದೂರು ನೀಡುವ ಹೊಸ ನಂಬರ್ ಹಾಗೂ ಮಾಹಿತಿ ಇರುವ ಬೋರ್ಡ್‌ಅನ್ನು ಎಸ್ಪಿ ಬಿಡುಗಡೆ ಮಾಡಿದರು. ಈ ವೇಳೆ ಇನ್ಸ್‌ಪೆಕ್ಟರ್ ಅರುಣ್ ಇದ್ದರು.

    ಕಾರ್ಯಾಚರಣೆ ನಿರಂತರ: 811 ಜನರ ವಿರುದ್ಧ ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು

    ಜಿಲ್ಲೆಯಲ್ಲಿ ಮೇ 26ರಿಂದ 28 ರವರೆಗೆ ಮೂರು ದಿನ ಏರಿಯಾ ಡಾಮಿನೇಷನ್ ಸ್ಪೆಷಲ್ ಡ್ರೈವ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿ ನೂರಾರು ಮಂದಿಯನ್ನು ಬಂಧಿಸಿ, ಹಲವು ಅಕ್ರಮ ಪತ್ತೆ ಮಾಡಲಾಗಿದೆ ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದರು.
    ಹಾಸನದ ರಿಂಗ್ ರಸ್ತೆ, ಪೆನ್ಶೆನ್ ಮೊಹಲ್ಲಾ, ಅರಸೀಕೆರೆ ನಗರ, ಸಕಲೇಶಪುರ ಸೇರಿದಂತೆ ಜಿಲ್ಲೆಯ ಒಟ್ಟು 44 ಕಡೆಗಳಲ್ಲಿ ಪರಿಶೀಲನೆ ಕಾರ್ಯಾಚರಣೆ ಮಾಡಲಾಗಿತ್ತು. ಈ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಿಂದ 77.56 ಲೀಟರ್ ಮದ್ಯ ವಶಪಡಿಸಿಕೊಂಡು ಸುಮಾರು 16 ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಸುಮಾರು 811 ಜನರನ್ನು ವಶಕ್ಕೆ ಪಡೆದು 496 ಪೊಲೀಸ್ ಕಾಯ್ದೆ (ಕೆಪಿ ಆಕ್ಟ್) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಮಾರು 9 ಡಿಡಿ ಪ್ರಕರಣಗಳು, 66 ಕೋಟ್ಪಾ ಅಡಿ ಪ್ರಕರಣ ದಾಖಲಿಸಲಾಗಿದೆ. 2 ಗಾಂಜಾ ಸೇವನೆ ಕೇಸ್ ದಾಖಲು ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಮೋಟಾರ್ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ 1300 ಪ್ರಕರಣ ದಾಖಲಾಗಿವೆ, ಸಿಇಐಆರ್ ವಿಶೇಷ ಕಾರ್ಯಾಚರಣೆಯಲ್ಲಿ 19 ಮೊಬೈಲ್ ಪತ್ತೆ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯ ವಿವಿಧೆಡೆ 255 ರೌಡಿಗಳ ಮನೆಗಳಿಗೆ ಭೇಟಿ ನೀಡಿ ಅವರ ಕಾರ್ಯಚಟುವಟಿಕೆ, ಕೆಲಸ ಎಲ್ಲವನ್ನೂ ಪರಿಶೀಲನೆ ಮಾಡಲಾಗಿದ್ದು, ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ರೀತಿಯ ಅಭಿಯಾನಗಳನ್ನು ನಿರಂತರವಾಗಿ ಮಾಡುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿರುವುದರಿಂದ ನಿರಂತರವಾಗಿ ದಾಳಿ ಮುಂದುವರಿಸಲಾಗುವುದು ಎಂದು ಹೇಳಿದರು.

    ಬಾಕ್ಸ್
    ಸಾರ್ವಜನಿಕರೇ ಗಮನಿಸಿ:
    ಅನೇಕ ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿಲ್ಲ, ವಿವಿಧ ದೂರು ದಾಖಲಿಸಲು ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಹೋದರೆ, ದೂರು ತೆಗೆದುಕೊಳ್ಳಲು ವಿಳಂಬ ಮಾಡಿದರೆ, ನಿಮ್ಮೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸದೇ ಇದ್ದರೆ 08172-265000 ಸಂಖ್ಯೆಗೆ ಕರೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿದರೆ ಕಂಟ್ರೋಲ್‌ನಿಂದ ರೂಂನಿಂದ ನನಗೆ ಮಾಹಿತಿ ಬರಲಿದೆ. ನಂತರ ತುರ್ತು ಕ್ರಮಕ್ಕೆ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಎಸ್‌ಪಿ ಹೇಳಿದರು.
    ಇದೇ ವೇಳೆ ದೂರು ನೀಡುವ ಹೊಸ ನಂಬರ್ ಹಾಗೂ ಮಾಹಿತಿ ಇರುವ ಬೋರ್ಡ್‌ಅನ್ನು ಎಸ್ಪಿ ಬಿಡುಗಡೆ ಮಾಡಿದರು. ಈ ವೇಳೆ ಇನ್ಸ್‌ಪೆಕ್ಟರ್ ಅರುಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts