More

    ಕಾಯಕಕ್ಕೆ ಆದ್ಯತೆ ನೀಡಿದ ಶರಣರು

    ಕಲಬುರಗಿ: ಬಸವಾದಿ ಶರಣರು ದೇವರ ಪೂಜೆಗಿಂತಲೂ ಕಾಯಕದಲ್ಲಿಯೇ ದೇವರು ಕಾಣುವಂತೆ ಕಾಯಕಕ್ಕೆ ಆದ್ಯತೆ ನೀಡಿದವರು ಎಂದು ಬೆಳಗಾವಿಯ ಚರಂತೇಶ್ವರ ಮಠದ ಪೂಜ್ಯ ಡಾ.ಶರಣಬಸವ ಸ್ವಾಮೀಜಿ ಹೇಳಿದರು.
    ಶರಣ ಶ್ರೇಷ್ಠರಾಗಿರುವ ಒಕ್ಕಲಿಗ ಮುದ್ದಣ್ಣ, ಕೇದಾರ ಮೇತಯ್ಯ, ಮಾದರ ಚನ್ನಯ್ಯ ಅವರ ಜಯಂತಿ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ನಗರದ ಲಿಂಗಾಯತ ಧರ್ಮ ಸ್ಥಾಪಕ ಬಸವೇಶ್ವರರ ಪ್ರತಿಮೆ ಹಿಂಭಾಗದಲ್ಲಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವಿಶ್ವ ಕಲ್ಯಾಣ ವಚನ ಸಂದೇಶ ಕಾರ್ಯಕ್ರಮದಲ್ಲಿ ಅನುಭಾವ ನೀಡಿ ಮಾತನಾಡಿದರು.
    ಬಸವಾದಿ ಶರಣರು ವರ್ಗ ರಹಿತ, ವರ್ಣ ರಹಿತ, ಲಿಂಗ ಸಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯವನ್ನು ಕಟ್ಟಿದರು. ಮೌಢ್ಯಗಳನ್ನು ತೊಲಗಿಸುವ ಮೂಲಕ ಜಾಗೃತ ಸಮಾಜ ನಿರ್ಮಿ ಸಲು ಶ್ರಮಿಸಿದರು. ಶರಣರು ಒಬ್ಬರಿಗಿಂತಲೂ ಒಬ್ಬರು ಶ್ರೇಷ್ಠರು ಎಂದರು.
    ಕಂದಾಚಾರ, ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದರು. ವಚನಗಳಲ್ಲಿರುವ ಸಾರವನ್ನು ಮತ್ತು ಸತ್ಯವನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಐಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಿ.ಶರಣಪ್ಪ ಸತ್ಯಂಪೇಟೆ ಮಾತನಾಡಿ, 12ನೇ ಶತಮಾನ ಬಸವಾದಿ ಶರಣು ಕೊಟ್ಟಿರುವ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು.
    ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸೋಮಣ್ಣ ನಡಕಟ್ಟಿ ಧ್ವಜಾರೋಹಣ ನೆರವೇರಿಸಿದರು. ಮಹಾಸಭಾ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಪ್ರಧಾನ ಕಾರ್ಯದರ್ಶಿ  ರಮೇಶ ಧುತ್ತರಗಿ ಮಾತನಾಡಿದರು. ಮಲ್ಲಣ್ಣ ನಾಗರಾಳ ಮತ್ತು ವಿಶ್ವನಾಥ ಡೋಣೂರ ಬಸವಧ್ವಜ ಗೀತೆ ಹಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಕುಪೇಂದ್ರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. 
    ಪ್ರಮುಖರಾದ ಬಿ.ಬಿ.ರಾಂಪುರೆ,ಬಸವರಾಜ ಮೊರಬದ, ಅಶೋಕ ಘೂಳಿ, ಶಿವಶರಣಪ್ಪ ಕುಸನೂರ, ಶಶಿಕಾಂತ ಪಸಾರ, ಸತೀಶ ಸಜ್ಜನ, ಶಿವಶರಣಪ್ಪ ದೇಗಾಂವ, ಧನರಾಜ ತಾಂಬೋಳೆ, ವೆಂಕಟೇಶ ಜನಾದ್ರಿ, ಅಶೋಕ ತಳವಾಡೆ, ಸಿದ್ರಾಮ ಯಳವಂತಗಿ, ರೇವಣಸಿದ್ದಯ್ಯ ಮಠ, ಪ್ರಸನ್ನ ವಾಂಜರಖೇಡ, ಬಸವರಾಜ ಧೂಳಾಂಗುಂಡಿ, ಶಿವಕುಮಾರ ಬಿದರಿ, ಶಿವರಾಯ ಬಳಗಾನೂರ, ಮಹಾಂತೇಶ ಕುಂಬಾರ, ಮಹಾಂತೇಶ ಕಲಬುಗರ್ಿ ಮೊದಲಾದವರಿದ್ದರು. ಬಸವ ಸೇವಾ ಪ್ರತಿಷ್ಠಾನ ಮುಖ್ಯಸ್ಥ ರಾಜಶೇಖರ ಯಂಕಂಚಿ ನಿರೂಪಿಸಿ ವಂದಿಸಿದರು. ಅಶ್ವಿನಿ ಮತ್ತು ರಾಜಕುಮಾರ ದಂಪತಿ ವಚನ ಗಾಯನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts