More

    ಕಾಡಾನೆ ದಾಳಿಗೆ ಬಾಳೆ, ಟೊಮ್ಯಾಟೊ ಬೆಳೆ ನಾಶ

    ಕೊಳ್ಳೇಗಾಲ: ತಾಲೂಕಿನ ಕರಳಕಟ್ಟೆ ಗ್ರಾಮದಲ್ಲಿ ಟೊಮ್ಯಾಟೊ ಹಾಗೂ ಬಾಳೆ ಬೆಳೆದಿದ್ದ ಜಮೀನಿನ ಮೇಲೆ ಮಂಗಳವಾರ ರಾತ್ರಿ ಕಾಡಾನೆ ದಾಳಿ ನಡೆಸಿ, ರೈತನಿಗೆ ಅಪಾರ ಬೆಳೆ ನಷ್ಟವನ್ನುಂಟು ಮಾಡಿದೆ.


    ಗ್ರಾಮದ ಸವರಿಯಪ್ಪ ಎಂಬುವರ ಜಮೀನಿಗೆ ಕಾಡಾನೆ ನುಗ್ಗಿ ದಾಂಧಲೆ ನಡೆಸಿದ್ದು, 1 ಎಕರೆಯಲ್ಲಿ ನೇಂದ್ರ ಬಾಳೆ, ಮತ್ತೊಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದರು. ಆದರೆ, ಮಂಗಳವಾರ ಆಹಾರ ಅರಸಿ ನಾಡಿಗೆ ಬಂದ ಆನೆ ಜಮೀನಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.


    ಕಷ್ಟಪಟ್ಟು ಬೆಳೆದ ಬಾಳೆ ಕೈ ಸೇರಬೇಕು ಅನ್ನುವಷ್ಟರಲ್ಲಿ ಕಾಡಾನೆ ದಾಳಿಗೆ ಹಾನಿಗೊಳಗಾಗಿದೆ. ಸುಮಾರು 30 ರಷ್ಟು ಬಾಳೆ ಗಿಡಗಳು ಹಾನಿಗೊಂಡಿದೆ. ಅಂತೆಯೇ, ಟೊಮ್ಯಾಟೊ ಬೆಳೆಯನ್ನು ತುಳಿದು ಹಾಕಿದ್ದು, ಬೆಳೆ ಸುರಕ್ಷತೆಗೆ ಹಾಕಿದ್ದ ತಂತಿ ಬೇಲಿಯ ಕಲ್ಲುಗಳನ್ನು ಉರುಳಿಸಿ ತುಳಿದು ಹಾಕಿದೆ.


    ಎಂದಿನಂತೆ ಸವರಿಯಪ್ಪ ಬುಧವಾರ ಬೆಳಗ್ಗೆ ಜಮೀನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆನೆ ದಾಳಿಗೆ ಬೆಳೆ ಹಾನಿಯಾಗಿರುವುದನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಅರಣ್ಯ ಇಲಾಖೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಆನೆಗಳ ಪುಂಡಾಡಕ್ಕೆ ಕಡಿವಾಣ ಹಾಕದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts