More

    ಕವನ ಸಂಕಲನ ಬಿಡುಗಡೆ

    ಧಾರವಾಡ: ಮಕ್ಕಳ ಸಾಹಿತ್ಯ ರಚನೆಯಲ್ಲಿ ಅನೇಕ ಮಹಿಳೆಯರು ತೊಡಗಿದ್ದರೂ ಅವರ ಹೆಸರು ಅಷ್ಟೊಂದು ಬೆಳಕಿಗೆ ಬರುತ್ತಿಲ್ಲ. ಮಕ್ಕಳ ಕೌತುಕವನ್ನು ಉದ್ದೀಪಿಸುವಂತೆ ಲಲಿತಾ ಕವಿತೆಗಳನ್ನು ರಚಿಸಿದ್ದಾರೆ ಎಂದು ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.
    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಲಲಿತಾ ಪಾಟೀಲ ಅವರ ಗಪ್‌ಚುಪ್ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ಬಾಲ್ಯವನ್ನು ಮರೆಯುವವರು ಎಂದೂ ಲೇಖಕರಾಗಲು ಸಾಧ್ಯವಿಲ್ಲ. ಲಲಿತಾ ಅವರ ಕವಿತೆಗಳಲ್ಲಿ ಗ್ರಾಮ್ಯಲೋಕ ಹಾಸುಹೊಕ್ಕಾಗಿದೆ ಎಂದರು.
    ಆಕಾಶವಾಣಿ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ, ಡಾ. ಲಿಂಗರಾಜ ಅಂಗಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಆನಂದ ಪಾಟೀಲ ಮಾತನಾಡಿ, ಈ ಲೇಖಕಿಗೆ ಬಾಲ್ಯದ ಕಾಡುವ ಸಂಗತಿಗಳಿವೆ. ಮಕ್ಕಳಿಗೆ ಕಲಿಸುವುದಲ್ಲ, ಕಲಿಯುವ ಪರಿಸರ ರೂಪಿಸಬೇಕು ಎಂದರು.
    ಎನ್.ಎಂ. ಪಾಟೀಲ, ರೇಖಾ ನಾಗನೂರ, ಸುಲೋಚನಾ ಮಾಲಿಪಾಟೀಲ ಇತರರು ಇದ್ದರು. ಪುಷ್ಪಾ ಹಾಲಭಾವಿ ಸ್ವಾಗತಿಸಿದರು. ಉಷಾ ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts