More

    ಕಪ್ಪುಪಟ್ಟಿ ಧರಿಸಿ ಫಾರ್ವಸಿಸ್ಟ್​ಗಳ ಸೇವೆ

    ಹಾವೇರಿ: ರಾಜ್ಯದ ಸರ್ಕಾರಿ ಫಾರ್ವಸಿಸ್ಟ್​ಗಳ ವೇತನ ತಾರತಮ್ಯ ನಿವಾರಣೆ ಮತ್ತಿತರ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನಸೆಳೆಯಲು ಶುಕ್ರವಾರದಿಂದ ಜ. 12ರವರೆಗೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಫಾರ್ವಸಿಸ್ಟ್ ಸಿಬ್ಬಂದಿ ಕೈಗೆ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.

    ನಗರದ ಜಿಲ್ಲಾಸ್ಪತ್ರೆಯಲ್ಲಿನ ಸಿಬ್ಬಂದಿ ವಿರೂಪಾಕ್ಷ ಲಮಾಣಿ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸಂಘದ ಸೂಚನೆಯಂತೆ ಜ. 12ರವರೆಗೆ ಮೊದಲ ಹಂತದಲ್ಲಿ ಕಪ್ಪುಪಟ್ಟಿ ಧರಿಸಿ ಸೇವೆ ಸಲ್ಲಿಸುತ್ತಿದ್ದೇವೆ. 2ನೇ ಹಂತದಲ್ಲಿ ಜ. 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ರ‍್ಯಾಲಿ ನಡೆಸಿ ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. 3ನೇ ಹಂತದಲ್ಲಿ ಮಾ. 10ರಿಂದ 17ರವರೆಗೆ ಆಸ್ಪತ್ರೆಗಳ ಹೊರರೋಗಿಗಳ ಸೇವಾ ವಿಭಾಗದಲ್ಲಿ ಫಾರ್ವಸಿಸ್ಟ್ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು. 4ನೇ ಹಂತದಲ್ಲಿ ಏ. 10ರಿಂದ ಬೇಡಿಕೆ ಈಡೇರುವವರೆಗೆ ಇಲಾಖೆಯ ಇನ್ನಿತರ ಸಂಘಗಳೊಂದಿಗೆ ಸೇರಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಪಿ.ಡಿ. ಪಾಟೀಲ, ಅಂಜನಾ ಪಾಟೀಲ, ಬಸನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts