More

    ಕಡಲೆ ಒಕ್ಕಣೆಗೆ ಬಂತು ಯಂತ್ರ!

    ನರೇಗಲ್ಲ: ಕಡಲೆ ಕಟಾವು ಮಾಡಲು ಕಾರ್ವಿುಕರ ಸಮಸ್ಯೆ ಅನುಭವಿಸುತ್ತಿರುವ ರೈತರು ಇದೀಗ ರಾಶಿ ಮಾಡುವ ಯಂತ್ರದ ಮೊರೆ ಹೋಗಿದ್ದಾರೆ. ಪಟ್ಟಣದ ಹಂಚಿನಾಳ ರಸ್ತೆಯ ಹೊಲವೊಂದರಲ್ಲಿ ಭಾನುವಾರ ಕಡಲೆ ಕಟಾವು ಮಾಡಿ ರಾಶಿ ಮಾಡುತ್ತಿರುವ ಯಂತ್ರವನ್ನು ನೂರಾರು ರೈತರು ಕುತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದರು.

    ಯಂತ್ರದ ವಿಶೇಷತೆ: ಯಂತ್ರವು ತಾನೇ ಕಟಾವು ಮಾಡಿಕೊಂಡು ಕಾಳು ಹಾಗೂ ಹೊಟ್ಟನ್ನು ಪ್ರತ್ಯೇಕಗೊಳಿಸುತ್ತದೆ. 1 ಗಂಟೆಯಲ್ಲಿ 1 ಎಕರೆ ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡುತ್ತದೆ. ಒಂದು ಬಾರಿಗೆ 12 ಸಾಲುಗಳನ್ನು

    ಕಟಾವು ಮಾಡುವ ಮೂಲಕ 16 ಚೀಲಗಳಷ್ಟು ಕಾಳುಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಪ್ರತಿ ಎಕರೆ ಕಟಾವಿಗೆ 2 ಸಾವಿರ ರೂ.ಗಳ ಬಾಡಿಗೆ ನಿಗದಿ ಮಾಡಲಾಗಿದೆ.

    ಕಡಲೆ ಕಟಾವು ಮತ್ತು ಒಕ್ಕಣೆಯಾದ ಮೇಲೆ ಹೊಟ್ಟು ಪುಡಿಪುಡಿಯಾಗಿ ಹೊಲದಲ್ಲಿ ಹರಡುವುದರಿಂದ ಜಾನುವಾರುಗಳಿಗೆ ಹೊಟ್ಟು ಲಭ್ಯವಾಗುವುದಿಲ್ಲ. ಆದರೆ, ಜಮೀನಿಗೆ ಉತ್ತಮ ಗೊಬ್ಬರವಾಗಲಿದೆ. ಇನ್ನಷ್ಟು ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸಿದರೆ ಅನುಕೂಲವಾಗುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾರ್ವಿುಕರ ಕೊರತೆಯಿಂದಾಗಿ ಕಡಲೆ ಕಟಾವು ಹಾಗೂ ಒಕ್ಕಣೆ ಮಾಡುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಈ ಹಿಂದೆ ಸಾಕಷ್ಟು ಯಂತ್ರಗಳ ಮೂಲಕ ಕಡಲೆ ಕಟಾವು ಮಾಡಲು ಯತ್ನಿಸಲಾಗಿತ್ತು. ಆದರೆ, ಅವುಗಳಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ನ್ಯೂ ಹಾಲೆಂಡ್ ಕಂಪನಿಯ ಯಂತ್ರವು ಬಹಳಷ್ಟು ಸುಧಾರಣೆ ಹೊಂದಿದೆ. ಜಮೀನು ಸಮತಟ್ಟಾಗಿದ್ದರೆ, ಕಾಳುಗಳು ಸಿಡಿಯುವುದಿಲ್ಲ. ಬುಡ್ಡಿ ಉದುರುವುದಿಲ್ಲ. ಹೊಟ್ಟನ್ನು ಸಂಗ್ರಹಿಸಿಕೊಳ್ಳಬಹುದಾಗಿದೆ. ಸರ್ಕಾರದ ಮೂಲಕ ರಿಯಾಯಿತಿ ದರದಲ್ಲಿ ಬಾಡಿಗೆ ನೀಡಿದಲ್ಲಿ ಸಹಾಯಕವಾಗಲಿದೆ ಎನ್ನುತ್ತಾರೆ ರೈತರಾದ ನಿಂಗನಗೌಡ ಲಕ್ಕನಗೌಡ್ರ, ರಮೇಶ ಕಳಕಣ್ಣವರ, ಪ್ರಕಾಶ ಪಿಡಗೊಂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts