More

    ಕಂದಾಯ ಭೂಮಿ ಅತಿಕ್ರಮಣದಾರರಲ್ಲಿ ಭೀತಿ

    ಸುಭಾಸ ಧೂಪದಹೊಂಡ ಕಾರವಾರ

    ಜಿಲ್ಲೆಯ ಸರ್ಕಾರಿ ಭೂಮಿಯನ್ನು (ಕಂದಾಯ ಭೂಮಿ) ಅತಿಕ್ರಮಣ ಮಾಡಿಕೊಂಡವರಿಗೆ ಈಗ ಭೀತಿ ತಲೆದೋರಿದೆ. ಸರ್ಕಾರ ರಚಿಸಿದ ವಿಶೇಷ ನ್ಯಾಯಾಲಯವು ಅತಿಕ್ರಮಣದಾರರ ವಿರುದ್ಧ ತೀರ್ಪು ಪ್ರಕಟಿಸುತ್ತಿದೆ. ಭೂಮಿಯನ್ನು ಸರ್ಕಾರದ ಸ್ವಾಧೀನಕ್ಕೆ ನೀಡುವ ಜತೆಗೆ ದಂಡ ಹಾಗೂ ಶಿಕ್ಷೆಯನ್ನೂ ವಿಧಿಸಲು ಪ್ರಾರಂಭಿಸಿದ್ದು ಆತಂಕಕ್ಕೆ ಕಾರಣವಾಗಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ 2101 ಪ್ರಕರಣಗಳಲ್ಲಿ ಒಟ್ಟಾರೆ 2563 ಎಕರೆ ಸರ್ಕಾರಿ ಭೂಮಿ ಒತ್ತುವರಿ ಗುರುತಿಸಲಾಗಿತ್ತು. ಇದರಲ್ಲಿ 2019ರ ಡಿಸೆಂಬರ್​ವರೆಗೆ 633 ಪ್ರಕರಣಗಳ 633 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ನೀಡಲಾಗಿದೆ. ಇನ್ನು 1438 ಪ್ರಕರಣಗಳಲ್ಲಿ 1928 ಎಕರೆ ಭೂಮಿ ತೆರವು ಮಾಡುವ ಪ್ರಕರಣದ ವಿಚಾರಣೆ ಬಾಕಿ ಇದೆ. ಎಲ್ಲ ಪ್ರಕರಣಗಳು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಇದುವರೆಗೆ ಜಿಲ್ಲೆಯ ಇಬ್ಬರಿಗೆ ಶಿಕ್ಷೆಯಾಗಿದೆ. ಹಳಿಯಾಳದ ಬಸವಳ್ಳಿಯಲ್ಲಿ 68 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.

    ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ: ಸರ್ಕಾರಿ ಭೂಮಿಗಳ ಅತಿಕ್ರಮಣ ತೆರವು ಮಾಡದ ಬಗ್ಗೆ 2019-20 ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಸುತ್ತೋಲೆಯನ್ನು ಹೊರಡಿಸಿ ಅತಿಕ್ರಮಣ ತೆರವಿಗೆ ಸಂಬಂಧಿಸಿದಂತೆ 15 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿಯು ಪ್ರತಿ ತಾಲೂಕಿಗೆ ಗುರಿ ನಿಗದಿ ಮಾಡಬೇಕು. ಗುರಿಯಂತೆ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿದ ಆರೋಪವಿದ್ದರೆ ಅದರ ಇತ್ಯರ್ಥಕ್ಕೆ ಕಾಲ ಮಿತಿ ನಿಗದಿ ಮಾಡಬೇಕು. ಗುತ್ತಿಗೆ ನೀಡಿದ ಜಮೀನಿಗೆ ಸಂಬಂಧಿಸಿದಂತೆ ಷರತ್ತುಗಳು ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಭೂ ಸುಧಾರಣೆ ಕಾಯ್ದೆ ಉಲ್ಲಂಘನೆಯಾಗಿರುವ ಪ್ರಕರಣಗಳನ್ನು ಗುರುತಿಸಿ ಜಮೀನನ್ನು ವಶಕ್ಕೆ ಪಡೆಯಬೇಕು. ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ನ್ಯಾಯಾಲಯಗಳಲ್ಲಿ ಆದೇಶವಾಗಿದ್ದರೆ ತಕ್ಷಣ ಮೆಲ್ಮನವಿ ಸಲ್ಲಿಸಬೇಕು. ಅತಿಕ್ರಮಣದಾರರಿಂದ ದಂಡ ವಸೂಲಿ ಮಾಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts